ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

By Nagaraja

ದೇಶದ ವಾಹನ ಪ್ರೇಮಿಗಳಿಗೆ ಶುಭ ಸುದ್ದಿಯೆಂಬಂತೆ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಪ್ಯೂಜೊ ಸ್ಕೂಟರ್ ಪರಿಚಯಿಸುವುದು ಬಹುತೇಕ ಖಚಿತವೆನಿಸಿದೆ.

ಮಹೀಂದ್ರ ಆಂಡ್ ಮಹೀಂದ್ರ ಸಂಸ್ತೆಯ ದ್ವಿಚಕ್ರ ವಿಭಾಗವು ಈ ಸಂಬಂಧ ಅಭಿವೃದ್ಧಿಯಲ್ಲಿ ತೊಡಗಿದೆ. ಅದೇ ಹೊತ್ತಿಗೆ ಸೆಪ್ಟೆಂಬರ್ ವೇಳೆಯಾಗುವ ಹೊಚ್ಚ ಹೊಸ ಮೊಜೊ 300 ಸಿಸಿ ಬೈಕ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಟಲಿಯ ಐಕಾನಿಕ್ ಪ್ಯೂಜೊ ಶೇರನ್ನು ಮಹೀಂದ್ರ ವಶಪಡಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಭಾರತಕ್ಕಾಗಿ ಹೊಸ ಸ್ಕೂಟರ್ ಅಭಿವೃದ್ಧಿಯಲ್ಲಿ ತೊಡಗಿದೆ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ಭಾರತ ಮಾರುಕಟ್ಟೆಯಲ್ಲಿ ಡ್ಯುರೋ, ರೋಡಿಯೊ ಹಾಗೂ ಅತಿ ನೂತನ ಗಸ್ಟೊ ಸ್ಕೂಟರ್ ಗಳಿದ್ದರೂ ನಿರೀಕ್ಷಿಸಿದಷ್ಟು ಮಾರಾಟ ಸಾಧಿಸಲಾಗುತ್ತಿಲ್ಲ. ಹೋಂಡಾ ಆಕ್ಟಿವಾದಂತಹ ವಿಶ್ವಾಸಾರ್ಹ ಮಾದರಿಗಳ ಮುಂದೆ ಮಹೀಂದ್ರ ಹಿನ್ನಡೆ ಅನುಭವಿಸುತ್ತಿದೆ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ಇವೆಲ್ಲ ಸಮಸ್ಯೆಗಳನ್ನು ನಿವಾರಿಸಲು ಇಟಲಿಯ ಐಕಾನಿಕ್ ಬ್ರಾಂಡ್ ಮಹೀಂದ್ರಗೆ ನೆರವಾಗಲಿದೆ. ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಹೊಸ ಸ್ಕೂಟರ್ ಎಲ್ಲ ಹಂತದಲ್ಲೂ ಮಹೀಂದ್ರ ಜೊತೆಗೆ ಗ್ರಾಹಕರಿಗೆ ಹೊಸ ತಂತ್ರಗಾರಿಕೆಯ ಅನುಭವ ನೀಡಲಿದೆ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ಅದೇ ಹೊತ್ತಿಗೆ ಪ್ಯೂಜೊದ ತ್ರಿಚಕ್ರ ಮೆಟ್ರೋಪೊಲೀಸ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಹೀಂದ್ರ ಹೊಂದಿದೆ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ಇದರ 400 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ 37 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಭಾರತದಲ್ಲಿ 250 ಅಥವಾ 300 ಸಿಸಿ ಮೆಟ್ರೋಪೊಲೀಸ್ ಬಿಡುಗಡೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪ್ಯೂಜೊ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಖಚಿತ

ಬಲ್ಲ ಮೂಲಗಳ ಪ್ರಕಾರ ಜಾಂಗೊ (Django) 125 ಸಿಸಿ ಸ್ಕೂಟರ್ (ವೆಸ್ಪಾ ಪ್ರತಿಸ್ಪರ್ಧಿ), ಸ್ಯಾಟೆಲಿಸ್ 125 ಹಾಗೂ ಸ್ಪೀಡ್ ಫೈಟ್ 3 ಪ್ರೀಮಿಯಂ ಸ್ಕೂಟರ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Most Read Articles

Kannada
English summary
Mahindra Confirms Peugeot Scooters For India
Story first published: Wednesday, May 27, 2015, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X