ಮಿಲಾನ್ ಮೋಟಾರ್‌ಸೈಕಲ್ ಶೋದಲ್ಲಿ ಮಿಸ್ ಆಗಬಾರದ 14 ಬೈಕ್‌ಗಳು!

By Nagaraja

ಇಐಸಿಎಂಎ (Esposizione Internazionale Ciclo Motociclo e Accessori) ಅಥವಾ ಮಿಲಾನ್ ಮೋಟಾರ್ ಸೈಕಲ್ ಶೋ ಇಟಲಿಯ ಐತಿಹಾಸಿಕ ಮಿಲಾನ್ ನಗರದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಮೋಟಾರ್ ಸೈಕಲ್ ಪ್ರದರ್ಶನ ಮೇಳವಾಗಿದೆ. ಇಲ್ಲಿ ಜಗತ್ತಿನೆಲ್ಲ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ತನ್ನ ಹೊಸ ಹಾಗೂ ಕಾನ್ಸೆಪ್ಟ್ ಮಾದರಿಗಳನ್ನು ಪ್ರದರ್ಶಿಸುತ್ತಿವೆ.

Also Read: ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು 300 ಸಿಸಿ ಬೈಕ್ ಭಾರತಕ್ಕೆ

ಈ ಬಾರಿಯೂ ಮಿಲಾನ್ ಮೋಟಾರು ಶೋದಲ್ಲಿ ಅನೇಕ ಹೊಸ ಮಾದರಿಗಳ ಅನಾವರಣವಾಗಿತ್ತು. ಇದು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ. ಈ ಬಾರಿ 2015 ನವೆಂಬರ್ 19ರಿಂದ 22ರ ವರೆಗೆ ಸಾಗಿದ ಅತ್ಯಾಕರ್ಷಕ ಮಿಲಾನ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಂಡಿರುವ ಅಗ್ರ 14 ಬೈಕ್ ಗಳ ಬಗ್ಗೆ ವಿವರಣೆ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇವೆ.

01. ಯಮಹಾ ಎಂಟಿ-03

01. ಯಮಹಾ ಎಂಟಿ-03

ಯಮಹಾ ಎಂಟಿ-03 ಒಂದು ಪರಿಪೂರ್ಣ ಸ್ಟ್ರೀಟ್ ಬೈಕಾಗಿದ್ದು, ವಾಹನ ಪ್ರೇಮಿಗಳಲ್ಲಿ ಅದ್ಭುತಾ ಸವಾರಿಯನ್ನು ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಪ್ರಸ್ತುತ ಬೈಕ್ ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 29.5 ಎನ್‌ಎಂ ತಿರುಗುಬಲದಲ್ಲಿ 42 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ನಿರೀಕ್ಷಿತ ಬೆಲೆ: 3 ಲಕ್ಷ ರು.

ಪ್ರತಿಸ್ಪರ್ಧಿಗಳು: ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ 300, ಕವಾಸಕಿ ಝಡ್250

02. ಬಿಎಂಡಬ್ಲ್ಯು ಜಿ301ಆರ್

02. ಬಿಎಂಡಬ್ಲ್ಯು ಜಿ301ಆರ್

ಈಗಾಗಲೇ ವರದಿ ಮಾಡಿರುವಂತೆಯೇ ನಿಕಟ ಭವಿಷ್ಯದಲ್ಲೇ ಭಾರತವನ್ನು ಪ್ರವೇಶಿಸಲಿರುವ ಬಿಎಂಡಬ್ಲ್ಯು ಜಿ301ಆರ್, ಸಂಸ್ಥೆಯ ಸುಸುಜ್ಜಿತವಾದ ಜರ್ಮನಿಯ ಘಟಕದಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೊಂಡಿದೆ. ಬಿಎಂಡಬ್ಲ್ಯು ಮೊಟೊರಾಟ್ ತಂತ್ರಜ್ಞಾನದ ಈ ಬೈಕ್ ಮುಂದಿನ ದಿನಗಳಲ್ಲಿ 300 ಸಿಸಿ ವಿಭಾಗದಲ್ಲಿ ಭಾರತದಲ್ಲೂ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ. ದೇಶದ ಮುಂಚೂಣಿಯ ಟಿವಿಎಸ್ ಸಹಯೋಗದಲ್ಲಿ ಇದು ಭಾರತ ಪ್ರವೇಶ ಪಡೆಯಲಿದೆ. ಇದರಲ್ಲಿರುವ ಸಿಂಗಲ್ ಸಿಲಿಂಡರ್ ಮೋಟಾರು 34 ಅಶ್ವಶಕ್ತಿ ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 2.8 ಲಕ್ಷ ರು.

ಪ್ರತಿಸ್ಪರ್ಧಿಗಳು: ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ300, ಕವಾಸಕಿ ಝಡ್250

03. ಹ್ಯೊಸಂಗ್ ಜಿಟಿ300ಆರ್

03. ಹ್ಯೊಸಂಗ್ ಜಿಟಿ300ಆರ್

ಹ್ಯೊಸಂಗ್ 250 ಆರ್ ಹಿರಿಯ ಸೋದರನ ರೂಪದಲ್ಲಿ ಹ್ಯೊಸಂಗ್ ಜಿಟಿ300ಆರ್ ಎಂಟ್ರಿ ಕೊಡಲಿದೆ. ಇದರಲ್ಲಿರುವ 275 ಸಿಸಿ ವಿ ಟ್ವಿನ್ ಎಂಜಿನ್ 23 ಎನ್‌ಎಂ ತಿರುಗುಬಲದಲ್ಲಿ 28 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಭಾರತದಲ್ಲೂ 25ಆರ್ ಮಾದರಿಯನ್ನು ಬದಲಾಯಿಸಲಿರುವ ಹ್ಯೊಸಂಗ್ ಜಿಟಿ300ಆರ್ 2016 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ನಿರೀಕ್ಷಿತ ಬೆಲೆ: 4 ಲಕ್ಷ ರು.

ಪ್ರತಿಸ್ಪರ್ಧಿಗಳು: ಕೆಟಿಎಂ ಆರ್‌ಸಿ390, ಯಮಹಾ ವೈಝಡ್‌ಎಫ್-ಆರ್3, ಕವಾಸಕಿ ನಿಂಜಾ 300, ಹೋಂಡಾ ಸಿಬಿಆರ್250ಆರ್.

 04. ಬೆನೆಲ್ಲಿ ಟೊರ್ನಡೊ 302

04. ಬೆನೆಲ್ಲಿ ಟೊರ್ನಡೊ 302

ಬೆನೆಲ್ಲಿ ಟೊರ್ನಡೊ 302 ಸದ್ಯ ಭಾರತದಲ್ಲಿ ಮಾರಾಟದಲ್ಲಿರುವ ಟಿಎನ್‌ಟಿ300 ಮಾದರಿಯ ಫೇರ್ಡ್ ವರ್ಷನ್ ಮೋಟಾರ್ ಸೈಕಲ್ ಆಗಿದೆ. ಇದು ಮತ್ತಷ್ಟು ಹಗುರ ಭಾರದ ಬೈಕ್ ಆಗಿರಲಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೂ ಪ್ರವೇಶಿಸಲಿದೆ ಎಂಬುದು ಶುಭ ಸೂಚಕವಾಗಿದೆ. ಇದರಲ್ಲಿರುವ 300 ಸಿಸಿ ಇನ್ ಲೈನ್ ಟ್ವಿನ್ ಎಂಜಿನ್ 35 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 3 ಲಕ್ಷ ರು.

ಪ್ರತಿಸ್ಪರ್ಧಿಗಳು: ಕೆಟಿಎಂ ಆರ್‌ಸಿ390, ಯಮಹಾ ವೈಝಡ್‌ಎಫ್-ಆರ್3, ಕವಾಸಕಿ ನಿಂಜಾ 300, ಹೋಂಡಾ ಸಿಬಿಆರ್250ಆರ್.

05. ಕೆಟಿಎಂ ಆರ್‌ಸಿ390

05. ಕೆಟಿಎಂ ಆರ್‌ಸಿ390

ಆಸ್ಟ್ರೀಯಾದ ಮೋಟಾರ್ ಸೈಕಲ್ ತಯಾರಿಕ ಸಂಸ್ಥೆಯಾಗಿರುವ ಕೆಟಿಎಂ ಭಾರತದಲ್ಲೂ ಹೆಚ್ಚು ಜನಪ್ರಿಯತೆ ಸಾಧಿಸಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಪ್ರಸ್ತುತ ಕೆಟಿಎಂ ಆರ್‌ಸಿ390 ಸ್ಲಿಪರ್ ಕ್ಲಚ್ ಮಾದರಿಯು ದೇಶಕ್ಕೆ ಪರಿಚಯವಾಗಲಿದೆ. ಅಲ್ಲದೆ ಯುರೋ 4 ಮಾಲಿನ್ಯ ಮಟ್ಟವನ್ನು ಇದು ಕಾಪಾಡಿಕೊಂಡಿರುವುದು ಗಮನಾರ್ಹವೆನಿಸುತ್ತದೆ. ಇದರ ಸಿಂಗಲ್ ಸಿಲಿಂಡರ್ ಲಿಕ್ವಡ್ ಕೂಲ್ಡ್ ಎಂಜಿನ್ 35 ಎನ್‌ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 2.15 ಲಕ್ಷ ರು.

ಪ್ರತಿಸ್ಪರ್ಧಿಗಳು: ಯಮಹಾ ವೈಝಡ್‌ಎಫ್-ಆರ್3, ಕವಾಸಕಿ ನಿಂಜಾ 300, ಹೋಂಡಾ ಸಿಬಿಆರ್250ಆರ್.

06. ಡುಕಾಟಿ ಸ್ಕ್ರಾಂಬ್ಲರ್ ಸಿಕ್ಸ್‌ಟಿ2

06. ಡುಕಾಟಿ ಸ್ಕ್ರಾಂಬ್ಲರ್ ಸಿಕ್ಸ್‌ಟಿ2

ಡುಕಾಟಿಯಿಂದ ಲಭ್ಯವಾಗಲಿರುವ ಅತಿ ಅಗ್ಗದ ಬೈಕ್ ಇದಾಗಿರಲಿದ್ದು, 399 ಸಿಸಿ ಎಲ್ ಟ್ವಿನ್ ಎಂಜಿನ್ ನಿಯಂತ್ರಿಸಲ್ಪಡಲಿದೆ. ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಲಿರುವ ಡುಕಾಟಿ ಸ್ಕ್ರ್ಯಾಂಬ್ಲರ್ ಸಿಕ್ಸ್‌ಟಿ2 35 ಎನ್ ಎಂ ತಿರುಗುಬಲದಲ್ಲಿ 41 ಅಶ್ವಶಕ್ತಿ ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 5 ಲಕ್ಷ ರು.

ಪ್ರತಿಸ್ಪರ್ಧಿಗಳು: ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ300, ಕವಾಸಕಿ ಝಡ್250.

07. ಹ್ಯೊಸಂಗ್ ಅಕ್ವಿಲಾ 300

07. ಹ್ಯೊಸಂಗ್ ಅಕ್ವಿಲಾ 300

ಹ್ಯೂಸಂಗ್ ಅಕ್ವಿಲಾ ಶ್ರೇಣಿಯ ಸಾಲಿಗೆ ಮಗದೊಂದು ಆಕರ್ಷಕ 300 ಸಿಸಿ ಬೈಕ್ ಸೇರ್ಪಡೆಯಾಗಲಿದೆ. ಇದರ ಎಂಜಿನ್ 23.5 ಎನ್‌ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಫೈವ್ ಸ್ಪೀಡ್ ಗೇರ್ ಇರಲಿದೆ. ಈ ಬಹುನಿರೀಕ್ಷಿತ ಮಾದರಿಯು 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

ನಿರೀಕ್ಷಿತ ಬೆಲೆ: 3.2 ಲಕ್ಷ ರು.

ಪ್ರತಿಸ್ಪರ್ಧಿಗಳು: ರಾಯಲ್ ಎನ್‌ಫೀಲ್ಡ್ 350, ಬಜಾಜ್ ಅವೆಂಜರ್ ಕ್ರೂಸ್, ಯುಎಂ ರೆನೆಗೇಡ್ (ಇನ್ನಷ್ಟೇ ಬಿಡುಗಡೆಯಾಗಬೇಕಿದೆ.)

08. ಯುಎಂ ರೆನೆಗೇಡ್ ಸ್ಪೋರ್ಟ್ ಎಸ್

08. ಯುಎಂ ರೆನೆಗೇಡ್ ಸ್ಪೋರ್ಟ್ ಎಸ್

ಮುಂದಿನ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿರುವ ಯುಂಎಂ ರೆನೆಗೇಡ್ ಸ್ಪೋರ್ಟ್ ಎಸ್ ಬೈಕ್ ದೇಶದ ವಾಹನ ಪ್ರೇಮಿಗಳ ಪಾಲಿಗೆ ಹೊಸ ಅನುಭವವಾಗಲಿದೆ. ಇದರ 279 ಸಿಸಿ ಎಂಜಿನ್ 26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 2 ಲಕ್ಷ ರು.

ಪ್ರತಿಸ್ಪರ್ಧಿಗಳು: ರಾಯಲ್ ಎನ್‌ಫೀಲ್ಡ್ 350, ಬಜಾಜ್ ಅವೆಂಜರ್ ಕ್ರೂಸ್

09. ಬೆನೆಲ್ಲಿ ಟಿಆರ್‌ಕೆ 502

09. ಬೆನೆಲ್ಲಿ ಟಿಆರ್‌ಕೆ 502

ಇಟಲಿಯ ಐಕಾನಿಕ್ ಬೆನೆಲ್ಲಿ ಭಾರತಕ್ಕೆ ತನ್ನೆಲ್ಲ ಶ್ರೇಣಿಯ ಬೈಕ್ ಗಳನ್ನು ಪರಿಚಯಿಸುವ ಇರಾದೆಯಲ್ಲಿದೆ. ಈ ಸಾಲಿಗೆ ಟಿಆರ್‌ಕೆ 502 ಹೊಸ ಸೇರ್ಪಡೆಯಾಗಲಿದೆ. ಇದರ 500 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್, 45 ಎನ್‌ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 5 ಲಕ್ಷ ರು.

ಪ್ರತಿಸ್ಪರ್ಧಿಗಳು: ಡುಕಾಟಿ ಸ್ಕ್ರ್ಯಾಂಬ್ಲರ್ ಸಿಕ್ಸ್‌ಟಿ2 (ಮುಂಬರುವ), ಕವಾಸಕಿ ವರ್ಸೆ 650 (ಮುಂಬರುವ)

10. ಹ್ಯೊಸಂಗ್ ಜಿಟಿ650ಆರ್

10. ಹ್ಯೊಸಂಗ್ ಜಿಟಿ650ಆರ್

ಮಿಲಾನ್ ಮೋಟಾರು ಶೋದಲ್ಲಿ ಕಂಡುಬಂದ ಶಕ್ತಿಶಾಲಿ ಬೈಕ್ ಗಳಲ್ಲಿ ಹ್ಯೊಸಂಗ್ ಜಿಟಿ650ಆರ್ ಕೂಡಾ ಒಂದಾಗಿದೆ. ಸಂಪೂರ್ಣ ಹೊಸ ಸ್ವರೂಪವನ್ನು ಪಡೆದುಕೊಂಡಿರುವ ಹ್ಯೊಸಂಗ್ ಜಿಟಿ650ಆಱ್, 647 ಸಿಸಿ ವಿ ಟ್ವಿನ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 55 ಎನ್ ಎಂ ತಿರುಗುಬಲದಲ್ಲಿ 73 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ನಿರೀಕ್ಷಿತ ಬೆಲೆ: 5.5 ಲಕ್ಷ ರು.

ಪ್ರತಿಸ್ಪರ್ಧಿಗಳು: ಬೆನೆಲ್ಲಿ ಟಿಎನ್‌ಟಿ600ಐ, ಹೋಂಡಾ ಸಿಬಿ600ಎಫ್, ಕವಾಸಕಿ ಇಆರ್-6ಎನ್.

11. ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್

11. ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್

ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್ ಒಂದು ಚಳಿಗಾಲದ ಆವೃತ್ತಿಯಾಗಿದ್ದು, ಕವಾಸಕಿ ಸೂಪರ್ ಬೈಕ್ ತಂಡದ ನೆರವಿನೊಂದಿಗೆ ಇದನ್ನು ತಯಾರಿಸಲಾಗಿದೆ. ಇದರಲ್ಲಿರುವ 998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 113 ಎನ್ ಎಂ ತಿರುಗುಬಲದಲ್ಲಿ 197 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ನಿರೀಕ್ಷಿತ ಬೆಲೆ: 17 ಲಕ್ಷ ರು.

ಪ್ರತಿಸ್ಪರ್ಧಿಗಳು: ಯಮಹಾ ವೈಝಡ್‌ಎಫ್-ಆರ್1, ಹೋಂಡಾ ಸಿಬಿಆರ್1000ಆರ್‌ಆರ್, ಎಸ್1000ಆರ್‌ಆರ್, ಸುಜುಕಿ ಜಿಎಸ್‌ಎಕ್ಸ್-ಆರ್1000

12. ಯಮಹಾ ಎಂಟಿ-10

12. ಯಮಹಾ ಎಂಟಿ-10

ಯಮಹಾ ಎಂಟಿ-10, ಜನಪ್ರಿಯ ವೈಝಡ್‌ಎಫ್-ಆರ್1 ಬೈಕ್‌ನ ನೆಕ್ಡ್ ಸ್ಟ್ರೀಟ್ ಆವೃತ್ತಿಯಾಗಿದ್ದು ಹೆಚ್ಚಿನ ಸದ್ದು ಮಾಡುವ ಇರಾದೆಯಲ್ಲಿದೆ. ಫೋರ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಈ ಬೈಕ್‌ನ ಎಂಜಿನ್ ತಾಂತ್ರಿಕ ಅಂಕಿಅಂಶಗಳು ಇನ್ನಷ್ಟೇ ಬಯಲಾಗಬೇಕಾಗಿದೆ.

ನಿರೀಕ್ಷಿತ ಬೆಲೆ: 20 ಲಕ್ಷ ರು.

ಪ್ರತಿಸ್ಪರ್ಧಿಗಳು: ಎಂವಿ ಆಗಸ್ಟಾ ಬ್ರುಟೇಲ್ 1090, ಡುಕಾಟಿ ಮಾನಸ್ಟರ್ 1200ಎಸ್, ಬಿಎಂಡಬ್ಲ್ಯು ಎಸ್1000ಆರ್.

13. ಟ್ರಯಂಪ್ ಸ್ಪೀಡ್ ಟ್ರಿಪಲ್

13. ಟ್ರಯಂಪ್ ಸ್ಪೀಡ್ ಟ್ರಿಪಲ್

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಒಂದಲ್ಲ, ಎರಡಲ್ಲ ಬರೋಬ್ಬರಿ 104 ಹೊಸ ಅಂಶಗಳನ್ನು ಪಡೆದುಕೊಂಡಿದೆ. ಅಂದರೆ ಹೆಚ್ಚು ಆಕ್ರಮಣಕಾರಿಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಬೈಕ್‌ನ ಪ್ರತಿಯೊಂದು ಅಂಶಗಳಿಗೂ ಹೆಚ್ಚಿನ ಒತ್ತು ಕೊಡಲಾಗಿದೆ.

ನಿರೀಕ್ಷಿತ ಬೆಲೆ: 12 ಲಕ್ಷ ರು.

ಪ್ರತಿಸ್ಪರ್ಧಿಗಳು: ಎಂವಿ ಆಗಸ್ಟಾ ಬ್ರುಟಲ್ 1090, ಡುಕಾಟಿ ಮಾನಸ್ಟರ್ 1200ಎಸ್, ಬಿಎಂಡಬ್ಲ್ಯು ಎಸ್1000ಆರ್.

14. ಡುಕಾಟಿ ಎಕ್ಸ್‌ಡೇವಿಯಲ್

14. ಡುಕಾಟಿ ಎಕ್ಸ್‌ಡೇವಿಯಲ್

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮೊದಲ ನೋಟದಲ್ಲೇ ಡುಕಾಟಿ ಎಕ್ಸ್ ಡೇವಿಯಲ್ ಶಕ್ತಿಯನ್ನು ನೀವು ಮನಗಾಣಬಹುದಾಗಿದೆ. ಬಲಾಢ್ಯ ದೇಹ ರಕ್ಷಣೆ, ಹೆಚ್ಚು ಶಕ್ತಿಶಾಲಿ 1262 ಎಂಜಿನ್, ನಿಖರವಾದ ವಿನ್ಯಾಸ ಇವೆಲ್ಲವೂ ಅಕ್ಷರಶ: ಹೆಸರಿಗೆ ತಕ್ಕ ಗ್ರ್ಯಾಂಡ್ ಲುಕ್ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದರಲ್ಲಿರುವ ಪವರ್ ಫುಲ್ ಎಂಜಿನ್ 129 ಎನ್ ಎಂ ತಿರುಗುಬದಲ್ಲಿ 156 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ನಿರೀಕ್ಷಿತ ಬೆಲೆ: 21 ಲಕ್ಷ ರು.

ಪ್ರತಿಸ್ಪರ್ಧಿಗಳು: ಯಮಹಾ ವಿ ಮ್ಯಾಕ್ಸ್

ಮಿಲಾನ್ ಮೋಟಾರ್‌ಸೈಕಲ್ ಶೋದಲ್ಲಿ ಮಿಸ್ ಆಗಬಾರದ 14 ಬೈಕ್‌ಗಳು!

ಈಗ ಇಲ್ಲಿ ಕೊಡಲಾಗಿರುವ 14 ಬೈಕ್ ಗಳಲ್ಲಿ ನಿಮ್ಮ ನೆಚ್ಚಿನ ಸಂಗಾತಿಯ ಬಗ್ಗೆ ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಮಂಡಿಸಲು ಮರೆಯದಿರಿ.

Most Read Articles

Kannada
English summary
Upcoming Motorcycles In India — Top 14 Motorcycles To Lookout For
Story first published: Friday, November 27, 2015, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X