ಸುಜುಕಿ ಹೊಸ ಜಿಕ್ಸರ್ ಎಪ್ರಿಲ್ 7ರಂದು ಬಿಡುಗಡೆ

By Nagaraja

ಕಳೆದ ವರ್ಷದ ಭಾರತ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ 150 ಸಿಸಿ ಸುಜುಕಿ ಜಿಕ್ಸರ್ ಮಾದರಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಜಪಾನ್ ಮೂಲದ ಈ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ನೂತನ ಜಿಕ್ಸರ್ ಎಸ್ ಎಫ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹೊಸ ಜಿಕ್ಸರ್ ಎಸ್ ಎಫ್ ಸಂಪೂರ್ಣ ಫೇರ್ಡ್ ವರ್ಷನ್ ಪಡೆದುಕೊಳ್ಳಲಿದೆ. ಅದಕ್ಕಿಂತಲೂ ಸಂತೋಷದಾಯಕ ಸಂಗತಿಯೆಂದರೆ ನೂತನ ಜಿಕ್ಸರ್ ಮುಂಬರುವ 2015 ಎಪ್ರಿಲ್ 07ರಂದು ಬಿಡುಗಡೆಯಾಗಲಿದೆ.

suzuki gixxer

ಸಾಮಾನ್ಯ ಜಿಕ್ಸರ್ ಮಾದರಿಗೆ ಸಾಮತ್ಯೆ ಪಡೆದುಕೊಳ್ಳಲಿರುವ ಹೊಸ ಜಿಕ್ಸ್ರ್ ಎಸ್ ಎಫ್ ಏರೋಡೈನಾಮಿಕ್ ಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇನ್ನು ಡಿಜಿಟಿಲ್ ಇಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ವ್ಯವಸ್ಥೆಗಳನ್ನು ಪಡೆಯಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದರ 154.9 ಸಿಸಿ ಎಂಜಿನ್ 14 ತಿರುಗುಬಲದಲ್ಲಿ 14 ಅಶ್ವಶಕ್ತಿ ಉತ್ಪಾದಿಸಲಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಹೊಸ ಸುಜುಕಿ ಮಾದರಿಯು ಈ ವಿಭಾಗದಲ್ಲಿ ಯಮಹಾ ವೈಝಡ್ ಎಫ್ ಆರ್15 ಹಾಗೂ ಹೋಂಡಾ ಸಿಬಿಆರ್150ಆರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ನಿಮ್ಮ ಮಾಹಿತಿಗಾಗಿ ಸುಜುಕಿ ಐಕಾನಿಕ್ ಸ್ಪೋರ್ಟ್ಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಮೊದಲ ಬಾರಿಗೆ ಸುಜುಕಿ ಜಿಕ್ಸರ್ ವಿನ್ಯಾಸ ರಚಿಸಲಾಗಿತ್ತು. ಇದು ಕ್ರೀಡಾ ಬೈಕ್ ಗಳನ್ನು ಇಷ್ಟಪಡುವ ಗ್ರಾಹಕರ ನೆಚ್ಚಿನ ಗಾಡಿಯೆನಿಸಿಕೊಂಡಿದೆ.

Most Read Articles

Kannada
English summary
Suzuki motorcycles will be launching a new fully-faired motorcycle based on their Gixxer.The Japanese two-wheeler has christened its new product as ‘Gixxer SF', which will launch on 7th April, 2015.
Story first published: Thursday, March 26, 2015, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X