ತುಳುನಾಡು ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್

By Nagaraja

ಪ್ರತಿಯೊಬ್ಬರಲ್ಲೂ ತಮ್ಮ ನಾಡು, ನುಡಿ, ಭಾಷೆ, ಆಚಾರ ವಿಚಾರಗಳ ಬಗ್ಗೆ ಬಹಳಷ್ಟು ಅಭಿಮಾನವಿರುತ್ತದೆ. ಅಂತವರಲ್ಲಿ ಹೇಗಾದರೂ ಮಾಡಿ ತಮ್ಮ ಕಲಾ ಸೃಷ್ಟಿಯನ್ನು ಜಗತ್ತಿಗೆ ತೋರಿಸುವ ಅತಿಯಾದ ಹಂಬಲ ಅಡಗಿರುತ್ತದೆ.

ತುಳುನಾಡು ಎಂದೇ ಪ್ರಸಿದ್ಧಿಯಾಗಿರುವ ಕರಾವಳಿ ನಗರ ಮಂಗಳೂರಿನಲ್ಲಿ ಇಂತಹದೊಂದು ಯುವ ಕಲಾವಿದರ ತಂಡವೊಂದಿದೆ. ಅವರು ತಮ್ಮ ನಾಡಿನ ಸಂಸ್ಕೃತಿಯನ್ನು ಪಸರಿಸಲು ಅನುಸರಿಸಿದ ನೀತಿಯೇ ವಿಭಿನ್ನವಾಗಿತ್ತು. ಅದೇನಂತೀರಾ? ಬನ್ನಿ ಮುಂದಕ್ಕೆ ಓದೋಣವೇ...

ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್

ಹೌದು, ಕಲಾವಿದ ಮಿತ್ರರಾದ ಪ್ರಾಣೇಶ್ ಕುದ್ರೋಳಿ, ವಿಕ್ರಂ ನಾಯಕ್ ಮತ್ತು ಜೀವನ್ ಸಾಲಿಯಾನ್ ಸೇರಿಕೊಂಡು 20 ವರ್ಷದ ಹಳೆಯ ಐಕಾನಿಕ್ ಬಜಾಜ್ ಚೇತಕ್ ಸ್ಕೂಟರ್ ಗೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್

ಇಲ್ಲಿ ಯಾವುದೇ ಗ್ರಾಫಿಕ್ಸ್ ಸ್ಟಿಕ್ಕರ್ ಗಳಿಗೆ ಮೊರೆ ಹೋಗದ ಈ ಯುವಕರ ತಂಡವು ತಮ್ಮ ಕೈಗಳಿಂದಲೇ ತುಳುನಾಡಿನ ಸಂಸ್ಕ್ರತಿಯ ಪ್ರತೀಕಗಳಾದ ಯಕ್ಷಗಾನ, ಕಂಬಳ, ಕೋಳಿಕಟ್ಟ, ಭೂತಾರಾದನೆ, ದಸರಾ ಹುಲಿ, ನಾಗಮಂಡಲ, ಮೀನುಗಾರಿಕೆ ಮುಂತಾದ ಚಿತ್ತಾರಗಳನ್ನು ಸ್ಕೂಟರ್‌ನಲ್ಲಿ ಚಿತ್ರಿಸಿದ್ದಾರೆ.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್

ಯುವ ಕಲಾವಿದರ ಇಂತಹದೊಂದು ಸೃಷ್ಟಿಯ ಹಿಂದೆ ಉದ್ದೇಶವೊಂದಿತ್ತು. ಅದುವೇ ತುಳುನಾಡಿನ ಸಂಸ್ಕ್ರತಿಯ ಉಳಿವು ಮತ್ತು ಅರಿವು ಬಗ್ಗೆ ಜಾಗೃತಿಯನ್ನು ಮೂಡಿಸುವುದು.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್

ಇದೀಗ ಕರಾವಳಿ ಕಲಾವಿದ ಮಿತ್ರರ ಈ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸೋಣವೇ...

Most Read Articles

Kannada
English summary
This Bajaj Scooter reflects Tulunadu culture
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X