ದೇಶದ ಅಗ್ರ 10 ಬೈಕ್ ಗಳತ್ತ ಒಂದು ರೌಂಡಪ್

By Nagaraja

ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ 2014-15 ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ 10 ದ್ವಿಚಕ್ರ ವಾಹನಗಳ ಕುರಿತಾಗಿ ಮೊದಲು ತಿಳಿದುಕೊಳ್ಳಿರಿ. ಇದು ಅತ್ಯುತ್ತಮ ಬೈಕ್ ಖರೀದಿ ಮಾಡುವ ನಿಮ್ಮ ಯೋಜನೆಗೆ ನೆರವಾಗಲಿದೆ.

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಈಗ ದೇಶದ ಟಾಪ್ 10 ದ್ವಿಚಕ್ರ ವಾಹನಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ...

10. ಗ್ಲಾಮರ್

10. ಗ್ಲಾಮರ್

ಗ್ಲಾಮರ್ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಿಂದ ನಿರ್ಮಾಣವಾಗುವ ಗ್ಲಾಮರಸ್ ಬೈಕ್ ಆಗಿದೆ. ವಿಶೇಷವೆಂದರೆ 2013-14ನೇ ಸಾಲಿನಲ್ಲಿ ಟಾಪ್ 10 ಪಟ್ಟಿಯಲ್ಲೂ ಕಾಣಿಸಿಕೊಳ್ಳುವಲ್ಲಿಯೂ ಗ್ಲಾಮರ್ ವಿಫಲವಾಗಿತ್ತು.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 5,51,486 ಯುನಿಟ್

09. ಡಿಸ್ಕವರ್

09. ಡಿಸ್ಕವರ್

ಬಜಾಜ್ ನ ಡಿಸ್ಕವರ್ ಶ್ರೇಣಿಯ ಬೈಕ್ ಗಳಿಗೂ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ತಮ್ಮ ನಿಗದಿತ ಬಜೆಟ್ ನಲ್ಲೇ ಡಿಸ್ಕವರ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇಷ್ಟಾದರೂ 2014-15ನೇ ಸಾಲಿಗೆ ಹೋಲಿಸಿದಾಗ ಶೇಕಡಾ 43.9ರಷ್ಟು ಕುಸಿತ ಕಂಡಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 5,52,855 ಯುನಿಟ್

08. ಡ್ರೀಮ್

08. ಡ್ರೀಮ್

ಹೋಂಡಾದ ಅಗ್ಗದ ಡ್ರೀಮ್ ಶ್ರೇಣಿಯ ಬೈಕ್ ಗಳು ಈ ವಿಭಾಗದಲ್ಲಿ ಎಂಟನೇ ಸಾಲಿನಲ್ಲಿ ಗುರುತಿಸಿಕೊಂಡಿದೆ. ಅಲ್ಲದೆ 2014-15ನೇ ಸಾಲಿಗಿಂತಲೂ ಹೆಚ್ಚು ಮಾರಾಟವನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 6,14,342 ಯುನಿಟ್

07. ಪಲ್ಸರ್

07. ಪಲ್ಸರ್

ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಆಗಿರುವ ಪಲ್ಸರ್ ಅಗ್ರ 10ರ ಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿದೆ. ಈ ಆಗಮನವಾಗಿರುವ ಹೊಸ ಶ್ರೇಣಿಯ ಪಲ್ಸರ್ ಬೈಕ್ ಗಳು ಇನ್ನಷ್ಟು ಉತ್ತೇಜನ ನೀಡುವ ಸಾಧ್ಯತೆಯಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 6,31,354 ಯುನಿಟ್

06. ಟಿವಿಎಸ್ ಎಕ್ಸ್ ಎಲ್ಸ್ ಸೂಪರ್

06. ಟಿವಿಎಸ್ ಎಕ್ಸ್ ಎಲ್ಸ್ ಸೂಪರ್

ದೇಶದ ಏಕ ಮಾತ್ರ ಟು ಸ್ಟ್ರೋಕ್ ದ್ವಿಚಕ್ರ ವಾಹನವಾಗಿರುವ ಟಿವಿಎಸ್ ಎಕ್ಸ್ ಎಲ್ ಸೂಪರ್ ಈಗಲೂ ಸ್ಥಿರತೆಯ ಮಾರಾಟ ಕಾಯ್ದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಗಮನಾರ್ಹವೆಂದರೆ 2013-14ನೇ ಸಾಲಿಗಿಂತಲೂ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಟಿವಿಎಸ್ ಮೊಪೆಡ್ ಯಶಸ್ವಿಯಾಗಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 7,55,503 ಯುನಿಟ್

05. ಸಿಬಿ ಶೈನ್

05. ಸಿಬಿ ಶೈನ್

125 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ಸಿಬಿ ಶೈನ್ ಐದನೇ ಸ್ಥಾನ ಕಾಪಾಡಿಕೊಂಡಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 8,27,858 ಯುನಿಟ್

04. ಎಚ್ ಎಫ್ ಡಿಲಕ್ಸ್

04. ಎಚ್ ಎಫ್ ಡಿಲಕ್ಸ್

ಹೀರೊದ ಮಗದೊಂದು ಉತ್ಪನ್ನವಾಗಿರುವ ಎಚ್ ಎಫ್ ಡಿಲಕ್ಸ್ ನಾಲ್ಕನೇ ಸ್ಥಾನ ಆಲಂಕರಿಸಿದೆ. ಈ ಮೂಲಕ ಬಜೆಟ್ ಪ್ರಯಾಣಿಕ ಬೈಕ್ ಗಳಲ್ಲಿ ಎಚ್ ಎಫ್ ಡಿಲಕ್ಸ್ ತನ್ನ ಮೌಲ್ಯವನ್ನು ಕಾಪಾಡಿಕೊಂಡಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 10,82,193 ಯುನಿಟ್

 03. ಪ್ಯಾಶನ್

03. ಪ್ಯಾಶನ್

2013-14ನೇ ಆರ್ಥಿಕ ಸಾಲಿಗೆ ಹೋಲಿಕೆ ಮಾಡಿದಾಗ ಮಾರಾಟದಲ್ಲಿ ಇಳಿಕೆ ಕಂಡಬಂದರೂ ಸಹ 2014-15ನೇ ಸಾಲಿನಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ ಮೂರು ಬೈಕ್ ಗಳ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಹೀರೊ ಪ್ಯಾಶನ್ ಯಶಸ್ವಿಯಾಗಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 13,41,424 ಯುನಿಟ್

02. ಆಕ್ಟಿವಾ

02. ಆಕ್ಟಿವಾ

ಬೈಕ್ ಗಳ ಜಂಜಾಟದ ನಡುವೆ ಸ್ಕೂಟರ್ ವೊಂದು ಸದ್ದು ಮಾಡುತ್ತಿರುವುದು ನಿಮ್ಮ ಅಚ್ಚರಿಗೆ ಕಾರಣವಾಗಿರಬಹುದು. ಆದರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿರುವ ಆಕ್ಟಿವಾ ಕಳೆದ ವರ್ಷ ಶೇಕಡಾ 30.1ರಷ್ಟು ಮಾರಾಟ ಏರಿಕೆ ಸಾಧಿಸಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 21,78,227 ಯುನಿಟ್

01. ಸ್ಪ್ಲೆಂಡರ್

01. ಸ್ಪ್ಲೆಂಡರ್

ಐಸ್ಮಾರ್ಟ್ ಗಳಂತಹ ನೂತನ ಆವೃತ್ತಿಗಳ ನೆರವಿನೊಂದಿಗೆ ಗರಿಷ್ಠ ಮಾರಾಟ ಸಾಧಿಸಿರುವ ಹೀರೊ ಸ್ಪ್ಲೆಂಡರ್ 2014-15ನೇ ಸಾಲಿನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಶೇಕಡಾ 11.1ರಷ್ಟು ಮಾರಾಟ ಏರಿಕೆ ಕಂಡಿದೆ.

2014-15 ಆರ್ಥಿಕ ಸಾಲಿನಲ್ಲಿ ಒಟ್ಟು ಮಾರಾಟ: 25,17,189 ಯುನಿಟ್

Most Read Articles

Kannada
English summary
Let's take a look at top 10 motorcycles that have been sold during the financial year of 2014-15:
Story first published: Thursday, April 23, 2015, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X