ಟ್ರಯಂಪ್‌ ಅಡ್ವೆಂಚರ್ ಬೈಕ್‌ಗಳು ಭಾರತದಲ್ಲಿ ಬಿಡುಗಡೆ

By Nagaraja

ಬ್ರಿಟನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟ್ರಯಂಪ್ ಮೋಟಾರ್‌ಸೈಕಲ್ಸ್ ಭಾರತಕ್ಕೆ ಎರಡು ದುಬಾರಿ ಬೈಕ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟಿದೆ.

ಟ್ರಯಂಪ್‌ನಿಂದ ಬಿಡುಗಡೆಯಾದ ಬೈಕ್‌ಗಳು:

  • ಟ್ರಯಂಪ್ ಟೈಗರ್ ಎಕ್ಸ್‌ಆರ್‌ಎಕ್ಸ್,
  • ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್

triumph tiger
ಬೆಲೆ ಮಾಹಿತಿ (ಎಕ್ಸ್ ಶೋರೂಂ ದೆಹಲಿ)
  • ಟ್ರಯಂಪ್ ಟೈಗರ್ ಎಕ್ಸ್‌ಆರ್‌ಎಕ್ಸ್ ಅಡ್ವೆಂಚರ್- 11.60 ಲಕ್ಷ ರು.
  • ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್ ಅಡ್ವೆಂಚರ್- 12.70 ಲಕ್ಷ ರು.

ಎಂಜಿನ್ ತಾಂತ್ರಿಕತೆ
ಟ್ರಯಂಪ್ ಎಕ್ಸ್‌ಆರ್‌ಎಕ್ಸ್ ಹಾಗೂ ಎಕ್ಸ್‌ಸಿಎಕ್ಸ್ ಅಡ್ವೆಂಚರ್ ಬೈಕ್‌ಗಳು ಸಮಾನ ಎಂಜಿನ್ ಪಡೆಯಲಿದೆ. ಇವರೆರಡು ಇನ್ ಲೈನ್ ತ್ರಿ ಸಿಲಿಂಡರ್ 800 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 93.66 ಅಶ್ವಶಕ್ತಿ (79 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

triumph tiger

ಮೈಲೇಜ್
19 ಲೀಟರ್ ಸಾಮರ್ಥ್ಯದ ದೊಡ್ಡದಾದ ಇಂಧನ ಟ್ಯಾಂಕ್ ಪಡೆದಿರುವ ಟ್ರಯಂಪ್ ನೂತನ ಬೈಕ್‌ಗಳು ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ವಿಶೇಷತೆ

  • ಎಬಿಎಸ್,
  • ಟ್ರಾಕ್ಷನ್ ಕಂಟ್ರೋಲ್,
  • ಥ್ರೋಟ್ ಮ್ಯಾಪ್,
  • ರೈಡಿಂಗ್ ಮ್ಯಾಪ್,
  • ಕ್ರೂಸ್ ಕಂಟ್ರೋಲ್,
  • ಟ್ರಿಪ್ ಕಂಪ್ಯೂಟರ್,
  • ಆಕ್ಸ್ ಸೊಕೆಟ್,
  • ಆಟೋ ಕ್ಯಾನ್ಸಲ್ ಇಂಡಿಕೇಟರ್,
  • ಹೊಂದಾಣಿಸಬಹುದಾದ ವಿಂಡ್ ಸ್ಕ್ರೀನ್,
  • ಹ್ಯಾಂಡ್ ಗಾರ್ಡ್

ಈ ಎರಡು ಬೈಕ್‌ಗಳ ಪ್ರಮುಖ ವ್ಯತ್ಯಾಸವೇನೆಂದರೆ ಟೈಗರ್ ಎಕ್ಸ್‌ಸಿಎಕ್ಸ್ ಸ್ಪೋಕ್ ವೀಲ್‌ನಿಂದ ಚಲಿಸಿದರೆ ಟೈಗರ್ ಎಕ್ಸ್‌ಆರ್‌ಎಕ್ಸ್ ಅಲಾಯ್ ವೀಲ್ ಪಡೆಯಲಿದೆ. ಇನ್ನು ಎಕ್ಸ್‌ಸಿಎಕ್ಸ್ ಆಫ್ ರೋಡ್ ಹಾಗೂ ಎಕ್ಸ್‌ಆರ್‌ಎಕ್ಸ್ ಟೂರಿಂಗ್ ವಿಧದ ಬೈಕ್ ಆಗಿರಲಿದೆ.

Most Read Articles

Kannada
English summary
Triumph Motorcycles has today launched their two new adventure models in India. The British based manufacturer has introduced XRx and XCx models for Indian markets.
Story first published: Thursday, March 12, 2015, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X