2016ರಲ್ಲಿ ಟಿವಿಎಸ್ ಅಪಾಚಿ ಬಿಡುಗಡೆ ಸಾಧ್ಯತೆ

By Nagaraja

ನೂತನ ಡ್ರೇಕನ್ ಕಾನ್ಸೆಪ್ಟ್ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೊಚ್ಚ ಹೊಸ ಟಿವಿಎಸ್ ಅಪಾಚೆ 2016ನೇ ಸಾಲಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜರ್ಮನಿಯ ಪ್ರಸಿದ್ಧ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯ ಜೊತೆಗೆ ಕೈಜೋಡಿಸಿಕೊಂಡಿರುವ ಟಿವಿಎಸ್ ನಿಕಟ ಭವಿಷ್ಯದಲ್ಲೇ ನೂತನ ಕ್ರಾಂತಿಕಾರಿ ಡ್ರೇಕನ್ ಬೈಕ್ ಹೊರತರಲಿದೆ.

ಟಿವಿಎಸ್ ಡ್ರೇಕನ್

ಪ್ರಸ್ತುತ ಬೈಕ್ 2014 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿತ್ತು. ಈಗ ಇದೇ ತಳಹದಿಯಲ್ಲಿ ಹೊಸ ಅಪಾಚೆ ರೂಪುಗೊಳ್ಳಲಿದೆ ಎಂಬುದು ಈಗಿನ ಶುಭ ಸುದ್ದಿಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಎರಡು ಮಾದರಿಗಳಲ್ಲಿ ಮಾರಾಟದಲ್ಲಿದೆ. ಅವುಗಳೆಂದರೆ 160 ಹಾಗೂ 180 ಸಿಸಿ. ಇನ್ನು 200 ಸಿಸಿ ಅಪಾಚೆ ಮಾದರಿಯು 2016ರ ವೇಳೆಯಾಗುವಾಗ ಮಾರುಕಟ್ಟೆ ತಲುಪಲಿದೆ. 2016 ಆಟೋ ಎಕ್ಸ್ ಪೋದಲ್ಲಿ ನೀವಿದನ್ನು ನಿರೀಕ್ಷೆ ಮಾಡಬಹುದಾಗಿದೆ.

200ಸಿಸಿ ಅಪಾಚೆ ಬೈಕ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 28 ಅಶ್ವಶಕ್ತಿ (20 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹೊಸ ಅಪಾಚೆ ಬೈಕ್ ಬಜಾಜ್ 200 ಎನ್ ಎಸ್ ಹಾಗೂ ಕೆಟಿಎಂ 200 ಮಾದರಿಗಳಿಗೆ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ನಿರ್ವಹಣೆ, ಸ್ಟೈಲಿಂಗ್ ಹಾಗೂ ಬೆಲೆಗಳೆಂಬ ಮೂರು ಅಂಶಗಳನ್ನು ಟಿವಿಎಸ್ ಹೇಗೆ ಏಕತ್ರಗೊಳಿಸಲಿದೆ ಎಂಬುದು ಕುತೂಹಲವೆನಿಸಿದೆ.

Most Read Articles

Kannada
English summary
At the 2014 Auto Expo TVS had showcased a street fighter concept motorcycle, which was christened ‘Draken'. Now the Indian manufacturer will use this model to develop its very first 200cc Apache.
Story first published: Saturday, June 6, 2015, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X