ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ ಟಿವಿಎಸ್-ಬಿಎಂಡಬ್ಲ್ಯು ಚೊಚ್ಚಲ ಬೈಕ್

By Nagaraja

ಕಳೆದ ವರ್ಷವೇ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್ ಹಾಗೂ ಜರ್ಮನಿಯ ಆಟೋ ದೈತ್ಯ ಬಿಎಂಡಬ್ಲ್ಯು ಮೊಟೊರಾಡ್ ಜಂಟಿ ಪಾಲುದಾರಿಕೆಯಲ್ಲಿ ಹೊಚ್ಚು ಹೊಸತಾದ ಕಡಿಮೆ ಸಾಮರ್ಥ್ಯದ ಬೈಕ್ ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ವರದಿ ಮಾಡಿರುತ್ತೇವೆ.

ಇದರ ಮುಂದುವರಿದ ಬೆಳವಣಿಗೆಯಂತೆಯೇ ಜರ್ಮನಿಯಲ್ಲಿ ಈ ನೆಕ್ಡ್ ಬೈಕ್ ಪರೀಕ್ಷೆಯ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ. ಬಿಎಂಡಬ್ಲ್ಯು ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಜಾಗತಿಕ ಮಟ್ಟದಲ್ಲಿ ಹೆಸರು ಗಿಟ್ಟಿಸಿಕೊಳ್ಳಲು ಟಿವಿಎಸ್‌ಗೆ ನೆರವಾಗಲಿದೆ.

tvs-bmw

ಟಿವಿಎಸ್-ಬಿಎಂಡಬ್ಲ್ಯು ಮೋಟೊರಾಡ್‌ನಿಂದ ಕಡಿಮೆ ಸಾಮರ್ಥ್ಯದ ಬೈಕ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಹೊಸ ಟಿವಿಎಸ್-ಬಿಎಂಡಬ್ಲ್ಯು ಬೈಕ್ 500 ಸಿಸಿ ಒಳಗಡೆ ಗುರುತಿಸಿಕೊಳ್ಳಲಿದೆ.

ಬಿಎಂಡಬ್ಲ್ಯು ಎಂಜಿನಿಯರ್‌ಗಳು ಟಿವಿಎಸ್ ಹೊಸ ಬೈಕ್ ಅಭಿವೃದ್ದಿಯಲ್ಲಿ ನೆರವಾಗಿದ್ದಾರೆ. ಇದರಲ್ಲಿ ವಾಟರ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ.

tvs bmw

ಈ ಹಿಂದೆ ಬಂದಿರುವ ಮಾಹಿತಿಗಳ ಪ್ರಕಾರ ಪ್ರಾರಂಭದಲ್ಲಿ 300ಸಿಸಿ ಅಂತೆಯೇ ಬಳಿಕ 500 ಸಿಸಿ ಬೈಕ್ ಪರಿಚಯಿಸಲಾಗುವುದು. ಇವೆಲ್ಲಕ್ಕೂ ಸಂಬಂಧಿಸಿದ ಮಾಹಿತಗಳು ಇನ್ನಷ್ಟೇ ಬಹಿರಂಗವಾಗಲಿದೆ.

Photo Credit: Visor Down

Most Read Articles

Kannada
English summary
TVS-BMW first sub-500cc motorcycle has been caught testing in Germany. 
Story first published: Thursday, January 29, 2015, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X