ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೊಸ ಬೈಕ್ ಬ್ರಾಂಡ್ ಭಾರತಕ್ಕೆ

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ವರ್ಷಾರಂಭದಲ್ಲಿ ಸಾಗುವ 2016 ಆಟೋ ಎಕ್ಸ್ ಪೋವನ್ನು ಎಲ್ಲ ವಾಹನ ಪ್ರೇಮಿಗಳು ಅತ್ಯಂತ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಆಟೋ ಎಕ್ಸ್ ಪೋ ಹಲವಾರು ಕಾರಣಗಳಿಂದಾಗಿ ವಿಶೇಷವೆನಿಸಲಿದೆ.

ಅಮೆರಿಕದ ಐಕಾನಿಕ್ ಮೋಟಾರುಸೈಕಲ್ ವಿಭಾಗವಾಗಿರುವ ಯುಎಂ ಮೋಟಾರ್‌ಸೈಕಲ್ಸ್ ಮುಂಬರುವ ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ. ಇದು ದೇಶದ ವಾಹನ ಉತ್ಸಾಹಿಗಳಿಗೆ ಮತ್ತಷ್ಟು ಹೆಚ್ಚಿನ ಆಯ್ಕೆಯನ್ನು ಪ್ರದಾನ ಮಾಡಲಿದೆ.

ಯುಎಂ ಮೋಟಾರ್ ಸೈಕಲ್ಸ್

ನಿಮ್ಮ ಮಾಹಿತಿಗಾಗಿ ಪ್ರತಿಷ್ಠಿತ ಯುಎಂ ಮೋಟಾರ್ ಸೈಕಲ್ ಗಳನ್ನು ಭಾರತಕ್ಕೆ ಲೋಹಿಯಾ ಆಟೋ ತರುತ್ತಿದೆ. ಅಮೆರಿಕದ ಆಧುನಿಕ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಯುಎಂ ಮೋಟಾರ್‌ಸೈಕಲ್ಸ್ 1992ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಒಕ್ಟವಿಯೊ ವಿಲ್ಲೆಗಾಸ್ ಲ್ಯಾನೋ ಎಂಬವರು ಇದರ ಸ್ಥಾಪಕರಾಗಿದ್ದಾರೆ.

ಉತ್ತರಾಖಂಡದಲ್ಲಿ ಸ್ಥಿತಗೊಂಡಿರುವ ಲೋಹಿಯಾ ಆಟೋ ಘಟಕದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈಗ ಯುಎಂ ಮೋಟಾರ್ ಸೈಕಲ್ ಗಳನ್ನು ಇಲ್ಲಿಂದಲೇ ಸ್ಥಳೀಯವಾಗಿ ಜೋಡಣೆ ಮಾಡಲಾಗುವುದೇ ಎಂಬುದು ಕುತೂಹಲವೆನಿಸಿದೆ.

ಯುಎಂ ಮೋಟಾರ್ ಸೈಕಲ್ಸ್

ಆರಂಭದಲ್ಲಿ ರೆನಗೆಡ್ ಸ್ಪೋರ್ಟ್ (Renegade Sport) ಮತ್ತು ರೆನಗೆಡ್ ಕಮಾಂಡೊ (Renegade Commando) ಕ್ರೂಸರ್ ಶೈಲಿಯ ಮಾದರಿಗಳು ಭಾರತ ಪ್ರವೇಶ ಪಡೆಯಲಿದೆ. ಅಲ್ಲದೆ 300ರಿಂದ 400 ಸಿಸಿ ಬೈಕ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಪ್ರಮುಖವಾಗಿಯೂ ದೇಶದ ಅತ್ಯಂತ ನಂಬಿಕೆಗ್ರಸ್ತ ರಾಯಲ್ ಎನ್ ಫೀಲ್ಡ್ ಮುಂತಾದ ಮಾದರಿಗಳಿಗೆ ಯುಎಂ ಮೋಟಾರ್ ಸೈಕಲ್ಸ್ ಪೈಪೋಟಿಯನ್ನು ಒಡ್ಡಲಿದೆ. ಅಲ್ಲದೆ ದೇಶದ್ಯಾಂತ ಹೆಚ್ಚಿನ ಸಂಖ್ಯೆಯ ವಿತರಕ ಜಾಲವನ್ನು ತೆರೆಯುವ ಇರಾದೆಯಿದೆ.

Most Read Articles

Kannada
English summary
UM Motorcycles To Be Launched In India During 2016 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X