ಬೆಂಗಳೂರಿನಲ್ಲಿ 104 ತಾಸಿನ ನಾನ್ ಸ್ಟಾಪ್ ಸೈಕ್ಲಿಂಗ್

By Nagaraja

ದೇಶದ ಮುಂಚೂಣಿಯ ಮೊಬೈಲ್ ದೂರ ಸಂಪರ್ಕ ಸೇವಾದಾರರಾಗಿರುವ ವೋಡಾಫೋನ್ ಇಂಡಿಯಾ ಸಂಸ್ಥೆಯು 104 ಎಫ್‌ಎಂ ಬೆಂಗಳೂರು ಜತೆ ಸೇರಿಕೊಂಡು ಹೊಸತಾದ '104 ಹವರ್ಸ್ ಆಫ್ ನಾನ್-ಸ್ಟಾಪ್ ಸ್ಟಾಟಿಕ್ ಸೈಕ್ಲಿಂಗ್' ಅಭಿಯಾನವನ್ನು ಆರಂಭಿಸಿದೆ.

ಇದು ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವೋಡಾಫೋನ ಸೈಕ್ಲಿಂಗ್ ಮ್ಯಾರಾಥನ್ 2015 ಭಾಗವಾಗಿ ಆಯೋಜಿಸಲಾಗುತ್ತಿದೆ. ಹಾಗೆಯೇ ಭಾರತೀಯ ಸೈಕ್ಲಿಂಗ್ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಬರೆಯಲಿದ್ದು, 2015 ಫೆಬ್ರವರಿ 04ರಂದು ಕೋರಮಂಗಲದ ಫಾರಂ ಮಾಲ್‌ನಿಂದ ಆರಂಭವಾಗಿರುವ ಅಭಿಯಾನವು 2015 ಫೆಬ್ರವರಿ 08ರ ವರೆಗೆ ಮುಂದುವರಿಯಲಿದೆ.

cycle

104 ಹವರ್ಸ್ ಆಫ್ ನಾನ್-ಸ್ಟಾಪ್ ಸ್ಟಾಟಿಕ್ ಸೈಕ್ಲಿಂಗ್ ಅಭಿಯಾನವನ್ನು ಕೇಂದ್ರ ಮೂಲಸೌಕರ್ಯ ಹಾಗೂ ಮಾಹಿತಿಯ ರಾಜ್ಯ ಸಚಿವರಾಗಿರುವ ರೋಶನ್ ಬೈಗ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ನಟಿ ರಾಗಿಣಿ ದ್ವಿವೇದಿ, ಸಾಮಾಜಿಕ ಕಾರ್ಯಕರ್ತರಾದ ರುಮಾನ್ ಬೈಕ್ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರಿನ ಸೈಕಲ್ ಪ್ರೇಮಿಗಳಿಗೆ ಇಂದೊಂದು ಅತ್ಯುತ್ತಮ ಅವಕಾಶವಾಗಿರಲಿದೆ. ಅಲ್ಲದೆ 104 ಎಫ್‌ಎಂ ರೇಡೀಯೋದಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮವನ್ನು ಆಳಿಸುವ ಕೇಳುಗರಿಗೂ ದಿನಂಪ್ರತಿ ಸೈಕಲ್ ಗೆಲ್ಲುವ ಅವಕಾಶವಿರುತ್ತದೆ.

ವೋಡಾಫೋನ್ ಸೈಕ್ಲಿಂಗ್ ಮ್ಯಾರಾಥಾನ್ 2015 ಮಾರ್ಚ್ 1ರಂದು ಆಯೋಜನೆಯಾಗಲಿದ್ದು, ಸೈಕಲ್ ಫೆಡರೇಷನ್ ಆಫ್ ಇಂಡಿಯಾದ (ಸಿಎಫ್‌ಐ) 150ರಷ್ಟು ಎಲೈಟ್ ಪರವಾನಗಿ ಸೈಕ್ಲಿಸ್ಟ್ ಸೇರಿದಂತೆ ಒಟ್ಟು 8000ದಷ್ಟು ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

cycle

ವೋಡಾಫೋನ್ ಸೈಕ್ಲಿಂಗ್ ಮ್ಯಾರಾಥಾನ್ 2015ರಲ್ಲಿ ನಾಲ್ಕು ವಿಭಾಗಗಳಲ್ಲಾಗಿ ಸ್ಪರ್ಧೆ ನಡೆಯಲಿದೆ. ಅವುಗಳೆಂದರೆ

ಚಾಂಪಿಯನ್ ರೇಸ್ - 60 ಕೀ.ಮೀ.
ಪ್ಯಾಶನ್ ರೇಸ್ - 40 ಕೀ.ಮೀ.
ಗ್ರೀನ್ ರೈಡ್ - 20 ಕೀ.ಮೀ.
ಫ್ಯಾಶನ್ ರೈಡ್ - 5 ಕೀ.ಮೀ.

ಇವೆಲ್ಲದರ ಜೊತೆಗೆ ಐದು ವರ್ಷಗಿಂತಲೂ ಕೆಳಗಿನ ಮಕ್ಕಳಿಗೆ ಕಿಡ್ಸ್ ರೈಡ್ ಕೂಡಾ ಇರಲಿದೆ. ಅಂತೆಯೇ ಚಾಂಪಿಯನ್ ರೇಸ್‌ನ ವಿಜೇತರು 10 ಲಕ್ಷ ರು. ಬಹುಮಾನ ಮೊತ್ತಕ್ಕೆ ಅರ್ಹವಾಗಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಭೇಟಿಕೊಡಿ www.cyclingfederationofindia.org

Most Read Articles

Kannada
English summary
Vodafone India, one of India's leading telecommunications service providers in association with Fever 104 FM Bangalore today announced the innovative initiative ‘104 Hours Of Non-Stop Static Cycling'.
Story first published: Friday, February 6, 2015, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X