ಭಾರತಕ್ಕೆ ಬಂದಿಳಿದ 150 ಸಿಸಿ ಯಮಹಾ ಸ್ಕೂಟರ್

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಎರಡು ಸ್ಕೂಟರ್ ಗಳನ್ನು ಭಾರತಕ್ಕೆ ಆಮದು ಮಾಡಿದೆ.

ಅವುಗಳೆಂದರೆ,

ಎಕ್ಸ್ ಸಿ 155 ಮತ್ತು
ಮೆಜೆಸ್ಟಿ ಎಸ್

ಯಮಹಾ ಮೆಜೆಸ್ಟಿ

ಉದ್ದೇಶ: ಅಧ್ಯಯನ ಮತ್ತು ಅಭಿವೃದ್ಧಿ (R & D)
ವಿಭಾಗ: 150ಸಿಸಿ
ಯಮಹಾ ಮೆಜೆಸ್ಟಿ

ಭಾರತೀಯ ರಸ್ತೆ ಪರಿಸ್ಥಿತಿಗಾನುಸಾರವಾಗಿ ಯಮಹಾ ನೂತನ ಮಾದರಿಗಳ ಪರೀಕ್ಷೆ ನಡೆಸಲಾಗುವುದು.

ತಾಂತ್ರಿಕ ಮಾಹಿತಿ:
ಎಂಜಿನ್: 155 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಲೂಯಲ್ ಇಂಜೆಕ್ಷನ್,
ಅಶ್ವಶಕ್ತಿ: 14.78
ತಿರುಗುಬಲ: 13.72

ಯಮಹಾ ಮೆಜೆಸ್ಟಿ

ಪ್ರಸ್ತುತ ಯಮಹಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಆಲ್ಪಾ, ರೇ, ರೇ ಝಡ್ ಮತ್ತು ಫಾಸಿನೊ ಸ್ಕೂಟರ್ ಮಾದರಿಗಳನ್ನು ಹೊಂದಿದೆ. ಈಗ ನೂತನ ಮಾದರಿಗಳೊಂದಿಗೆ ತನ್ನ ಮಾರಾಟವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ನಿಮ್ಮ ಮಾಹಿತಿಗಾಗಿ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಪಿಸಿಎಕ್ಸ್ 150 ಸಿಸಿ ಸ್ಕೂಟರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದೀಗ ಈ ಸಾಲಿನಲ್ಲಿ ಯಮಹಾ ಸೇರಿಕೊಂಡಿದ್ದು, ದೇಶದ ಮಾರುಕಟ್ಟೆಯಲ್ಲಿ ಹೊಸತನವನ್ನು ಹಂಚಿಕೊಳ್ಳಲಿದೆ.

ಹಾಗಿದ್ದರೂ ಸದ್ಯಕ್ಕೆ ಬಿಡುಗಡೆ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಯಮಹಾದಿಂದ ಅಧಿಕೃತ ಮಾಹಿತಿಗಳು ಬಂದ ಬಳಿಕ ನಾವಿದನ್ನು ನಿಮಗೆ ಹೇಳಿಕೊಡಲಿದ್ದೇವೆ.

Most Read Articles

Kannada
Read more on ಯಮಹಾ yamaha
English summary
Now Yamaha India has imported two models of their 150cc scooter for R&D purposes. These scooters are the XC155 or better known as Majesty S models from Yamaha's stable.
Story first published: Monday, June 29, 2015, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X