ರಸ್ತೆಗಿಳಿಯಲಿದೆ ಯಮಹಾ ಅಗ್ಗದ ಪ್ರಯಾಣಿಕ ಬೈಕ್

By Nagaraja

150 ಸಿಸಿ ಹಾಗೂ ಮೇಲ್ಪಟ್ಟ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ಭಾರತಕ್ಕೆ ಅಗ್ಗದ ಪ್ರಯಾಣಿಕ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಯಮಹಾ ಅಗ್ಗದ ಪ್ರಯಾಣಿಕ ಬೈಕ್ ನ ಹೆಸರು ಏನೆಂಬುದು ಇನ್ನಷ್ಟೇ ನಿಗದಿಯಾಗಬೇಕಾಗಿದೆ. ಹಾಗಿದ್ದರೂ ಇದು ಸಂಪೂರ್ಣವಾಗಿಯೂ ದೇಶದ ಮಧ್ಯಮ ವರ್ಗದವರನ್ನು ಗುರಿಯಾಗಿರಿಸಲಿದೆ. ಅಂತೆಯೇ ದೇಶದ ಅಗ್ರ ದ್ವಿಚಕ್ರ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಹಾಗೂ ಹೋಂಡಾ ಮೋಟಾರ್ ಸೈಕಲ್ಸ್ ಗೆ ನಿಕಟ ಸ್ಪರ್ಧೆ ಓಡ್ಡಲಿದೆ.

ಯಮಹಾ ವೈಬಿಆರ್

ನೂತನ ಬೈಕ್ 110ಸಿಸಿ, 4 ಸ್ಟ್ರೋಕ್ ಡಿಒಎಚ್ ಸಿ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 7 ಅಶ್ವಶಕ್ತಿ (8 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ರೂಕ್ಸ್, ವೈಬಿಆರ್ 110 ಮತ್ತು ವೈಬಿಆರ್ 125ಗಳೆಂಬ ಬಜೆಟ್ ಬೈಕ್ ಗಳನ್ನು ಯಮಹಾ ಹೊಂದಿದೆ. ಕೈಗೆಟುಕುವ ದರಗಳಲ್ಲಿ ನೂತನ ಬೈಕ್ ನ ಆಗಮನದೊಂದಿಗೆ ಎಂಟ್ರಿ ಲೆವೆಲ್ ವಿಭಾಗದಲ್ಲಿ ಯಮಹಾ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸುವ ಯೋಜನೆ ಹೊಂದಿದೆ.

Most Read Articles

Kannada
English summary
The Japanese manufacturer Yamaha has decided to build its new commuter motorcycle using the engine from its YBR model.
Story first published: Monday, April 6, 2015, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X