ಯಮಹಾದಿಂದ ಐದು ಜನಪ್ರಿಯ ಬೈಕ್‌ಗಳ ಮಾರಾಟ ನಿಲುಗಡೆ?

By Nagaraja

ಗಮನಾರ್ಹ ಬೆಳವಣಿಯೊಂದರಲ್ಲಿ ತನ್ನ ಐದು ಜನಪ್ರಿಯ ಶ್ರೇಣಿಗಳ ಬೈಕ್ ಗಳ ಮಾರಾಟವನ್ನು ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ನಿಲುಗಡೆಗೊಳಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.

ಯಮಹಾದಿಂದ ಮಾರಾಟ ನಿಲುಗಡೆಗೊಂಡಿರುವ 5 ಮಾದರಿಗಳು:

  • ಎಸ್‌ಎಸ್ 125,
  • ಎಸ್‌ಝಡ್-ಎಸ್,
  • ಎಸ್‌ಝಡ್-ಆರ್‌ಆರ್,
  • ವೈಬಿಆರ್110 ಮತ್ತು
  • ವೈಬಿಆರ್125
ಯಮಹಾ
ಮಾರಾಟ ಕುಂಠಿತವಾಗಿರುವುದೇ ಈ ಐದು ಮಾದರಿಗಳ ಮಾರಾಟವನ್ನು ಹಿಂಪಡೆಯಲು ಯಮಹಾ ಸಂಸ್ಥೆಯನ್ನು ಪ್ರೇರೇಪಿಸಿದೆ ಎಂಬುದು ತಿಳಿದು ಬಂದಿದೆ. ಇದರ ಮುಂದುವರಿದ ಭಾಗವೆಂಬಂತೆ ತನ್ನ ಅಧಿಕೃತ ವೆಬ್ ಸೈಟ್ ನಿಂದ ಮೇಲೆ ತಿಳಿಸಿದ ಎಲ್ಲ ಮಾದರಿಗಳನ್ನು ಯಮಹಾ ತೆಗೆದು ಹಾಕಿದೆ.

ಅಷ್ಟೇ ಅಲ್ಲದೆ ಈ ಬೆಳವಣಿಗೆಯು ಮಾರುಕಟ್ಟೆಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಯಮಹಾಗೆ ಉತ್ತೇಜನ ತುಂಬಲಿದೆ. ಪ್ರಸ್ತುತ ಯಮಹಾದಿಂದ ಲಭ್ಯವಾಗುತ್ತಿರುವ ಅತಿ ಅಗ್ಗದ ಬೈಕ್ ಕ್ರೂಝ್ (Crux) ಆಗಿದ್ದು, ದೆಹಲಿ ಎಕ್ಸ್ ಶೋ ರೂ. ಬೆಲೆ 39,667 ರು.ಗಳನ್ನು ಹೊಂದಿದೆ.

2015ನೇ ಸಾಲಿನ ಮೊದಲ ಎಂಟು ತಿಂಗಳಲ್ಲಿ ಯಮಹಾ ಸಂಸ್ಥೆಯು ಎಂಟು ಹೊಸ ಮಾದರಿಗಳನ್ನು ಬಿಡುಗಡೆ ಅಥವಾ ಪರಿಷ್ಕೃತಗೊಳಿಸಿದೆ. ಇವುಗಳಲ್ಲಿ ಸೆಲ್ಯೂಟೊ, ಫಾಸಿನೋ, ಸೆಲ್ಯುಟೊ ಡಿಸ್ಕ್ ಬ್ರೇಕ್, ಯಮಹಾ ವೈಝಡ್‌ಎಫ್-ಆರ್3 ಜೊತೆಗೆ ಬ್ಲೂ ಕೋರ್ ತಂತ್ರಗಾರಿಕೆಯ ಜೊತೆಗೆ ಆಲ್ಪಾ, ರೇ ಆ್ಯಂಡ್ ರೇ ಝಡ್ ಸ್ಕೂಟರ್ ಗಳನ್ನು ಪರಿಚಯಿಸಿತ್ತು.

ಯಮಹಾ

ಯಮಹಾದಿಂದ ಭಾರತದಲ್ಲಿ ಮಾರಾಟದಲ್ಲಿರುವ ಮಾದರಿಗಳು (ದೆಹಲಿ ಎಕ್ಸ್ ಶೋ ರೂಂ ಬೆಲೆಯೊಂದಿಗೆ)

ದೇಶಿಯ ಬೈಕ್ ಗಳು

ಕ್ರೂಝ್: 39,667 ರು.
ಸೆಲ್ಯೂಟೊ: 52,000 ರು.
ಸೆಲ್ಯೂಟೊ ಡಿಸ್ಕ್ ಬ್ರೇಕ್: 54,500 ರು.
ಎಸ್‌ಎಝ್-ಆರ್‌ಆರ್ ವರ್ಷನ್ 2.0: 66,064 ರು.
ಎಫ್‌ಝಡ್: 73,891 ರು.
ಎಫ್‌ಝಡ್ ವಿ 2.0 (ಎಫ್‌ಐ): 79,596 ರು.
ಎಫ್‌ಝಡ್‌ಎಸ್: 75,893 ರು.
ಎಫ್‌ಝಡ್‌ಎಸ್ ವಿ 2.0 (ಎಫ್‌ಐ): 81,659 ರು.
ಫೇಜರ್: 80,910 ರು.
ಫೇಜರ್ ವಿ 2.0 (ಎಫ್‌ಐ): 86,805 ರು.
ಆರ್15 ವಿ 2.0: 1.14 ಲಕ್ಷ ರು.ಗಳಿಂದ 1.17 ಲಕ್ಷ ರು.ಗಳ ವರೆಗೆ
ಆರ್3: 3.25 ಲಕ್ಷ ರು.

ಆಮದು

ಎಫ್‌ಝಡ್1: 11.43 ಲಕ್ಷ ರು.
ವೈಝಡ್‌ಎಫ್ ಆರ್1: 22.34 ಲಕ್ಷ ರು.
ವೈಝಡ್‌ಎಫ್ ಆರ್1ಎಂ: 29.43 ಲಕ್ಷ ರು.
ವಿಮ್ಯಾಕ್ಸ್: 27.35 ಲಕ್ಷ ರು.

ಸ್ಕೂಟರ್ ಶ್ರೇಣಿ

ಫಾಸಿನೋ: 52,500 ರು.
ಆಲ್ಫಾ: 49,939 ರು.
ರೇ-ಝಡ್: 48,936 ರು.
ರೇ: 47,805 ರು.

Most Read Articles

Kannada
Read more on ಯಮಹಾ yamaha
English summary
Yamaha India Removes Five Motorcycles From Official Website
Story first published: Friday, August 28, 2015, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X