ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

By Nagaraja

ದೀರ್ಘ ಕಾಯುವಿಕೆಗೆ ಅಂತ್ಯ ಹಾಡಿರುವ ಬಹುನಿರೀಕ್ಷಿತ 2017 ಹೋಂಡಾ ಸಿಬಿಆರ್250ಆರ್‌ಆರ್ ಇಂಡೋನೇಷ್ಯಾದಲ್ಲಿ ಅಧಿಕೃತವಾಗಿ ಅನಾವರಣಗೊಂಡಿದೆ. ಇದರೊಂದಿಗೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಮಗದೊಂದು ಕೊಡುಗೆ ಲಭಿಸಿದಂತಾಗಿದೆ.

ನೂತನ 2017 ಹೋಂಡಾ ಸಿಬಿಆರ್250ಆರ್‌ಆರ್ ಪ್ರಮುಖವಾಗಿಯೂ ಕವಾಸಕಿ ನಿಂಜಾ 250, ಯಮಹಾ ಆರ್25 ಮತ್ತು ಕೆಟಿಎಂ ಆರ್ ಸಿ 390 ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ನೂತನ 2017 ಹೋಂಡಾ ಸಿಬಿಆರ್250ಆರ್‌ಆರ್, 250 ಸಿಸಿ 8 ವಾಲ್ವ್, ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಡಿಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ನೂತನ 2017 ಹೋಂಡಾ ಸಿಬಿಆರ್250ಆರ್‌ಆರ್ ಇಂಡೋನೇಷ್ಯಾದಲ್ಲಿ 3.2 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಎಬಿಎಸ್ ಹಾಗೂ ಎಬಿಎಸ್ ರಹಿತ ಆವೃತ್ತಿಗಳಲ್ಲಿ ಮಾರಾಟವಾಗಲಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಹೋಂಡಾದ ಅತಿ ನೂತನ ಥ್ರಾಟಲ್-ಬೈ-ವೈರ್ (ಟಿಬಿಡಬ್ಲ್ಯು) ತಂತ್ರಗಾರಿಕೆಯನ್ನು ನೂತನ 2017 ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ನಲ್ಲಿ ಆಳವಡಿಸಲಾಗುವುದು.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಈ ಹಿಂದೆ ತೋರಿಸಲಾಗಿರುವ ಕಾನ್ಸೆಪ್ಟ್ ಮಾದರಿಗೆ ಸಮಾನವಾದ ವಿನ್ಯಾಸ ನೀತಿಯನ್ನು ಉಳಿಸಿಕೊಳ್ಳಲಾಗಿದೆ. ಆಕ್ರಮಣಕಾರಿ ಶೈಲಿ ಜೊತೆ ಕ್ರೀಡಾತ್ಮಕ ನೋಟವನ್ನು ಕಾಪಾಡಿಕೊಂಡಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಮುಂಭಾಗದಲ್ಲಿ ಡ್ಯುಯಲ್ ಎಲ್ ಇಡಿ ಹೆಡ್ ಲೈಟ್ ಜೊತೆ ಸ್ಟೈಲಿಷ್ ಎಲ್ ಇಡಿ ಐಬ್ರೊ, ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಳವಡಿಸಲಾಗಿದೆ. ಅಲ್ಲದೆ ಇಂಡೋನೇಷ್ಯಾದಲ್ಲಿರುವ ಸಂಸ್ಥೆಯ ಘಟಕದಲ್ಲೇ ನಿರ್ಮಿಸಲಾಗುವುದು.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಪ್ರಸಕ್ತ ಸಾಲಿನಲ್ಲೇ ಇಂಡೋನೇಷ್ಯಾ ಮಾರುಕಟ್ಟೆ ತಲುಪಲಿರುವ 2017 ಹೋಂಡಾ ಸಿಬಿಆರ್250ಆರ್‌ಆರ್ ಭಾರತಕ್ಕೂ ತಲುಪಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ 2017 ಹೋಡಾ ಸಿಬಿಆರ್250ಆರ್‌ಆರ್

ಈ ನಡುವೆ ಮತ್ತಷ್ಟು ಶಕ್ತಿಶಾಲಿ 350 ಸಿಸಿ ಸಿಬಿಆರ್ ಆವೃತ್ತಿಯನ್ನು ಹೋಂಡಾ ಅಭಿವೃದ್ಧಿ ಮಾಡುತ್ತಿದೆ. ಇದು ಯುರೋಪ್, ಅಮೆರಿಕ ಸೇರಿದಂತೆ ಭಾರತ ಮಾರುಕಟ್ಟೆಗೂ ತಲುಪಲಿದೆ.

Most Read Articles

Kannada
Read more on ಹೋಂಡಾ honda
English summary
2017 Honda CBR250RR Photos, Videos, Details
Story first published: Wednesday, July 27, 2016, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X