ನಮ್ಮ ಬೆಂಗಳೂರಿಗೆ ಎಪ್ರಿಲಿಯಾ ಎಂಟ್ರಿ; ಬೆಲೆ, ವೈಶಿಷ್ಟ್ಯಗಳೇನು?

By Nagaraja

ಬೈಕ್‌ಗೆ ಸರಿಸಾಟಿಯಾಗಿ ನಿಲ್ಲುವ ಮೂಲಕ ದೇಶದ ದ್ವಿಚಕ್ರ ವಾಹನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿರುವ ಇಟಲಿಯಾ ಐಕಾನಿಕ್ ಸ್ಕೂಟರ್ ಬ್ರಾಂಡ್ ಎಪ್ರಿಲಿಯಾ ಎಸ್‌ಆರ್150 ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲು ಕ್ಷಣಗಣನೆ ಎದುರಾಗಿದೆ.

ಹಾಗಿರುವಾಗ ಇಟಲಿಯ ಪ್ರತಿಷ್ಠಿತ ಪಿಯಾಜಿಯೊ ಅಧೀನತೆಯಲ್ಲಿರುವ ಈ ಜನಪ್ರಿಯ ಸ್ಕೂಟರ್ ಬೆಂಗಳೂರು ಡೀಲರ್ ಗಳನ್ನು ತಲುಪಿದ್ದು, ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದೆ. ನಮ್ಮ ಬೆಂಗಳೂರಿನಲ್ಲಿರುವ ವೆಸ್ಪಾ ಡೀಲರ್ ಶಿಪ್ ನಲ್ಲಿ ಎಪ್ರಿಲಿಯಾ ಎಸ್ ಆರ್150 ಸ್ಕೂಟರ್ ಪ್ರದರ್ಶನಕ್ಕಿಡಲಾಗಿದೆ. ಈ ಸಂಬಂಧ ನೀವು ತಿಳಿದುಕೊಳ್ಳಬೇಕಾಗಿರುವ ಮಹತ್ವದ ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಬೆಲೆ ಎಷ್ಟು ?

ಬೆಲೆ ಎಷ್ಟು ?

ನಮ್ಮ ತಂಡಕ್ಕೆ ದೊರಕಿರುವ ಎಕ್ಸ್ ಕ್ಲೂಸಿವ್ ಮಾಹಿತಿಗಳ ಪ್ರಕಾರ ಕ್ರಾಸೋವರ್ ಶೈಲಿಯ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ಬೆಂಗಳೂರು ಆನ್ ರೋಡ್ ಬೆಲೆಯ ಪ್ರಕಾರ ಸರಿ ಸುಮಾರು 80,000 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಬುಕ್ಕಿಂಗ್ ಬೆಲೆ?

ಬುಕ್ಕಿಂಗ್ ಬೆಲೆ?

5,000 ರುಪಾಯಿ ಮುಂಗಡವಾಗಿ ಪಾವತಿಸಿ ನಿಮ್ಮ ನೆಚ್ಚಿನ ಎಪ್ರಿಲಿಯಾ ಸ್ಕೂಟರ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದಾದ ಎರಡು ತಿಂಗಳೊಳಗೆ ಎಪ್ರಿಲಿಯಾ ಎಸ್ ಆರ್150 ನಿಮ್ಮ ಕೈ ಸೇರಲಿದೆ.

ನೋಟ

ನೋಟ

ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ನಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ವಿಶಿಷ್ಟ ಬಾಡಿ ಗ್ರಾಫಿಕ್ಸ್, ಡ್ಯುಯಲ್ ಟೋನ್ ಸೀಟು, ಕಾಂಪಾಕ್ಟ್ ಗ್ರಾಬ್ ರೈಲ್, ಟ್ವಿನ್-ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಚಕ್ರಗಳು

ಚಕ್ರಗಳು

ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮೊಟೊ ಜಿಪಿ ಚಾಂಪಿಯನ್ ಶಿಪ್ ಗಳಲ್ಲಿ ಕಂಡುಬರುವ ಎಪ್ರಿಲಿಯಾ ರೇಸಿಂಗ್ ಬೈಕ್ ಗಳಲ್ಲಿರುವುದಕ್ಕೆ ಸಮಾನವಾದ ದೊಡ್ಡದಾದ 14 ಇಂಚುಗಳ ಫೈವ್ ಸ್ಪೋಕ್ ಚಕ್ರಗಳು ಇದಕ್ಕೆ ಜೋಡಣೆ ಮಾಡಲಾಗಿದೆ.

ತಾಂತ್ರಿಕತೆ

ತಾಂತ್ರಿಕತೆ

ಟೆಲಿಸ್ಕಾಪಿಕ್ ಸಸ್ಪೆನ್ಷನ್, ರಿಯರ್ ಮೊನೊ ಶಾಕ್, 120/70 ಫ್ರಂಟ್/ರಿಯರ್ ಚಕ್ರಗಳು, ಮುಂದುಗಡೆ 220 ಎಂಎಂ ಡಿಸ್ಕ್ ಹಾಗೂ ಹಿಂಬದಿಯಲ್ಲಿ 140 ಎಂಎಂ ಡ್ರಮ್ ಬ್ರೇಕ್, ಏಳು ಲೀಟರ್ ಇಂಧನ ಟ್ಯಾಂಕ್ ಹಾಗೂ 775 ಎಂಎಂ ಸೀಟು ಎತ್ತರ ಕಂಡುಬರಲಿದೆ.

ಎಂಜಿನ್

ಎಂಜಿನ್

154.4ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಎಪ್ರಿಲಿಯಾ ಎಸ್‌ಆರ್150, 11 ಎನ್‌ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ವೆಸ್ಪಾ 150 ಸ್ಕೂಟರ್ ನಲ್ಲಿರುವುದಕ್ಕೆ ಸಮಾನವಾಗಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಿಡುಗಡೆ, ನಿರ್ಮಾಣ?

ಬಿಡುಗಡೆ, ನಿರ್ಮಾಣ?

ಬಲ್ಲ ಮೂಲಗಳ ಪ್ರಕಾರ ಅತಿ ನೂತನ ಎಪ್ರಿಲಿಯಾ ಎಸ್ಆರ್150 ಆಗಸ್ಟ್ ತಿಂಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊ ಬರಮತಿ ಘಟಕದಲ್ಲಿ ವೆಸ್ಪಾ ಶ್ರೇಣಿಯ ಸ್ಕೂಟರ್ ಗಳ ಜೊತೆಗೆ ನಿರ್ಮಾಣವಾಗಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಸದ್ಯಕ್ಕಂತೂ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ಗೆ ಮಾರುಕಟ್ಟೆಯಲ್ಲಿ ಯಾವುದೇ ಎದುರಾಳಿಗಳಿಲ್ಲ. ಆದರೆ ಮುಂದಿನ ದಿನಗಳಲ್ಲಿ ತನ್ನ ಸೋದರಿ ವೆಸ್ಪಾ 150 ಸ್ಕೂಟರ್ ಜೊತೆಗೆ ಹೀರೊ ಝಿರ್ ಮತ್ತು ಹೋಂಡಾ ಪಿಸಿಎಕ್ಸ್150 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Aprilia SR 150 Arrives In Bangalore Showroom
Story first published: Wednesday, July 27, 2016, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X