ಬಂದೇ ಬಿಡ್ತು ಎಪ್ರಿಲಿಯಾ 150 ಸಿಸಿ ಸ್ಕೂಟರ್; ಬೈಕ್‌ಗೆ ಸೆಡ್ಡು?

By Nagaraja

ಅಂತೂ ಇಂತೂ ಕಾಯುವಿಕೆ ಅವಧಿ ಕೊನೆಗೊಂಡಿದ್ದು, ಬಹುನಿರೀಕ್ಷಿತ ಎಪ್ರಿಲಿಯಾ ಎಸ್ ಆರ್ 150 ಕ್ರಾಸೋವರ್ ಸ್ಪೋರ್ಟ್-ಸ್ಕೂಟರ್ ಬೈಕ್ ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಪರಿಚಯಾತ್ಮಕ ಬೆಲೆ: 65,000 ರು. (ಎಕ್ಸ್ ಶೋ ರೂಂ ಪುಣೆ)

ಇದು ಇಟಲಿಯ ಐಕಾನಿಕ್ ವಾಹನ ಸಂಸ್ಥೆ ಪಿಯಾಜಿಯೊ, ಭಾರತದಲ್ಲಿ ವೆಸ್ಪಾ ಬಳಿಕ ಪರಿಚಯಿಸುತ್ತಿರುವ ಎರಡನೇ ಸ್ಕೂಟರ್ ಬ್ರಾಂಡ್ ಆಗಿದೆ. ಬೈಕ್ ಗಳಿಗೆ ಸೆಡ್ಡು ಹೊಡೆದು ನಿಲ್ಲಲಿರುವ ಎಪ್ರಿಲಿಯಾ ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿ ಮಾಡಲಿದೆ.

ಎಪ್ರಿಲಿಯಾ ಎಸ್ ಆರ್ 150


ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊದ ಬರಮತಿ ಘಟಕದಲ್ಲಿ ಎಪ್ರಿಲಿಯಾ ಎಸ್ ಆರ್ 150 ಗೇರ್ ಲೆಸ್ ಸ್ಕೂಟರ್ ನಿರ್ಮಾಣವಾಗಲಿದೆ. ತನ್ಮೂಲಕ ದೇಶದ ದ್ವಿಚಕ್ರ ವಾಹನ ಇತಿಹಾಸದಲ್ಲಿ ಮಗದೊಂದು ಇತಿಹಾಸ ಬರೆಯುವ ಇರಾದೆಯಲ್ಲಿದೆ.

ವಿನ್ಯಾಸ

  • ಆಕ್ರಮಣಕಾರಿ, ಅಗತ್ಯ ಮತ್ತು ಕಾಂಪಾಕ್ಟ್ ಶೈಲಿ
  • ಸ್ಪೋರ್ಟ್ ಡಿಸೈನ್ ಹ್ಯಾಂಡಲ್ ಬಾರ್,
  • ಸ್ಟ್ರೀಮ್ ಫ್ರೇಮ್ ರಚನೆಯಿಂದ ಹೆಚ್ಚಿನ ಬಿಗಿತ,
  • ಏರೋಡೈನಾಮಿಕ್ ವಿನ್ಯಾಸ

ಎಂಜಿನ್
155 ಸಿಸಿ, 3 ವಾಲ್ವ್, 4 ಸ್ಟ್ರೋಕ್
11.6 ಪಿಎಸ್ @ 7000 ಆರ್ ಪಿಎಂ
11.5 ಎನ್ ಎಂ ತಿರುಗುಬಲ @ 5500 ಆರ್ ಪಿಎಂ

ಕೂಲಿಂಗ್: ಏರ್

ವಿತರಣೆ: ಕಾರ್ಬ್ಯುರೇಟರ್
ಗೇರ್ ಬಾಕ್ಸ್: ಸಿವಿಟಿ
ಗರಿಷ್ಠ ವೇಗ: ಗಂಟೆಗೆ 120 ಕೀ.ಮೀ,
ಮೈಲೇಜ್: ಪ್ರತಿ ಲೀಟರ್ ಗೆ 45 ಕೀ.ಮೀ. (ಅಂದಾಜು)

ಅಲ್ಯೂಮಿನಿಯಂ ಸಿಲಿಂಡರ್ ಹೆಡ್, ಓವರ್ ಹೆಡ್ ಕ್ಯಾಮ್, ರೋಲರ್ ರಾಕರ್ ಆರ್ಮ್, ಎಂಎಪಿ ಸೆನ್ಸಿಂಗ್ ಮತ್ತು ವೆರಿಯಬಲ್ ಸ್ಪಾರ್ಕ್ ಟೈಮಿಂಗ್ ಮ್ಯಾನೇಜ್ ಮೆಂಟ್.

ಎಪ್ರಿಲಿಯಾ ಎಸ್ ಆರ್ 150


ವಿಶಿಷ್ಟತೆಗಳು

  • 14 ಇಂಚುಗಳ ಬ್ಲ್ಯಾಕ್ 5 ಸ್ಪೋಕ್ ಅಲಾಯ್ ವೀಲ್,
  • ಟ್ಯೂಬೆಲೆಸ್ ಅಗಲವಾದ ಸ್ಪೋರ್ಟ್ ಸ್ಟ್ರೀಟ್ ಚಕ್ರಗಳು,
  • ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್ ಲೈಟ್,
  • ಡಬಲ್ ಬ್ಯಾರೆಲ್ ಹೆಡ್ ಲೈಟ್,
  • ಟ್ವಿನ್ ಪೊಡ್ ಅನಲಾಗ್ ಯುನಿಟ್ ಸ್ಪೀಡೋಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್

ಬ್ರೇಕ್
ಮುಂದುಗಡೆ: 220 ಎಂಎಂ ಟ್ವಿನ್ ಪಿಸ್ತಾನ್ ವೆಂಟಿಲೇಟಡ್ ಡಿಸ್ಕ್ ಬ್ರೇಕ್
ಹಿಂದುಗಡೆ: 240 ಎಂಎಂ ರಿಯರ್ ಡ್ರಮ್ ಬ್ರೇಕ್

ಸಸ್ಪೆನ್ಷನ್
ಮುಂಭಾಗ: ಹೈಡ್ರಾಲಿಕ್ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಸಸ್ಪೆನ್ಷನ್ (32 ಎಂಎಂ)
ಹಿಂದುಗಡೆ: ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ಚಕ್ರಗಳು
ಮುಂಭಾಗ: 120/70 - 14 ಇಂಚು
ಹಿಂಭಾಗ: 120/70 - 14 ಇಂಚು

ಇಂಧನ ಟ್ಯಾಂಕ್: 6 ಲೀಟರ್

ಅನುಕೂಲ

  • ಹಿಂತೆಗೆದುಕೊಳ್ಳುವ ಫ್ರಂಟ್ ಬ್ಯಾಗ್ ಹುಕ್,
  • ಮಡಬಹುದಾದ ಸ್ಟೈಲಿಷ್ ಸಹ ಸವಾರ ಫೂಟ್ ಸ್ಟೆಪ್,
  • ಸೀಟು ಕೆಳಗಡೆ ಸ್ಟೋರೆಜ್ ಜಾಗ,
  • ಫೋನ್ ಚಾರ್ಜ್ ಮಾಡಿಸಲು ಯುಎಸ್ ಬಿ ಕನೆಕ್ಟರ್

ಬಣ್ಣಗಳು: ಮ್ಯಾಟ್ ಬ್ಲ್ಯಾಕ್, ವೈಟ್

ಆಸಕ್ತ ಗ್ರಾಹಕರು 5,000 ರುಪಾಯಿಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಪೇಟಿಎಂ ಮುಖಾಂತರವೂ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

Most Read Articles

Kannada
English summary
Aprilia Launches Its Most Affordable Two-Wheeler In India — The SR 15
Story first published: Tuesday, August 23, 2016, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X