ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

By Nagaraja

2016 ಆಟೋ ಎಕ್ಸ್ ಪೋದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ನೂತನ ಡ್ಯುಯೆಟ್ 'ಇ' ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದೆ.

ಇಡೀ ವಾಹನ ಜಗತ್ತು ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಪ್ರಯತ್ನದಲ್ಲಿ ಮುಂದುವರಿದಿರುವಾಗ ನೂತನ ಡ್ಯುಯೆಟ್ ಇ ಸ್ಕೂಟರ್ ಹೆಚ್ಚಿನ ಭರವಸೆಗಳನ್ನು ಮೂಡಿಸುವಲ್ಲಿ ಕಾರಣವಾಗಿದೆ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಈಗ ಮಾರುಕಟ್ಟೆಯಲ್ಲಿರುವ ಡ್ಯುಯೆಟ್ ಮಾದರಿಗೆ ಸಾಮ್ಯತೆಯನ್ನು ಪಡೆದುಕೊಂಡಿರುವ ನೂತನ ಡ್ಯುಯೆಟ್ ಇ ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ 5 ಕೆಬ್ಲ್ಯು ಬಿಎಲ್‌ಡಿಸಿ ಲಿ-ಇಯಾನ್ ಬ್ಯಾಟರಿ ಎಲೆಕ್ಟ್ರಿಕ್ ಮೋಟಾರು ಜೋಡಣೆ ಮಾಡಲಾಗಿದೆ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಇದು 14 ಎನ್ ಎಂ ತಿರುಗುಬಲ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದ್ದು, 65 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಅಲ್ಲದೆ 6.5 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವಷ್ಟು ಶಕ್ತವಾಗಿರಲಿದೆ. ಹೀರೊ ಡ್ಯುಯೆಟ್ ಗರಿಷ್ಠ ವೇಗದ ಬಗ್ಗೆ ಮಾಹಿತಿಗಳು ಬಂದಿಲ್ಲ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಸಾಮಾನ್ಯ ಪ್ಲಗ್ ಇನ್ ಪವರ್ ಸಾಕೆಟ್ ಗಳಿಂದಲೂ ಚಾರ್ಜ್ ಮಾಡಿಸಬಹುದಾದ ಹೀರೊ ಡ್ಯುಯೆಟ್ ಇ ಸ್ಕೂಟರ್ ಸಸ್ಪೆನ್ಷನ್, ಬ್ರೇಕ್, ವೀಲ್ಸ್ ಮತ್ತು ಚಕ್ರಗಳನ್ನು ಡ್ಯುಯೆಟ್ ನಿಂದ ಆಮದು ಮಾಡಲಾಗಿದೆ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಪರಿಸರ ಸ್ನೇಹಿ ವಾಹನಕ್ಕೆ ತಕ್ಕಂತೆ ಬಿಳಿ ಹಾಗೂ ಹಸಿರು ಜೋಡಿ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಅಲ್ಲದೆ ಹಸಿರು ಗ್ರಾಫಿಕ್ಸ್ ಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

ಭವಿಷ್ಯದ ಸ್ಕೂಟರ್; ಹೀರೊ ಡ್ಯುಯೆಟ್ 'ಇ' ಎಲೆಕ್ಟ್ರಿಕ್

ಇನ್ನು ಡ್ಯುಯೆಲ್ ಇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಆ್ಯಂಟಿ ಥೆಪ್ಟ್ ಹಾಗೂ ಬೈಕ್ ಫೈಂಡರ್ ಸಿಸ್ಟಂ ಮುಂತಾದ ಆಧುನಿಕ ವೈಶಿಷ್ಟ್ಯಗಳನ್ನು ಕೊಡಲಾಗಿದೆ.

Most Read Articles

Kannada
English summary
Hero MotoCorp unveils Duet-E Scooter at Auto Expo 2016
Story first published: Friday, February 12, 2016, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X