2016 ಆಟೋ ಎಕ್ಸ್ ಪೋದಲ್ಲಿ ಟ್ರಯಂಪ್ ಬೈಕ್‌ಗಳ ಆರ್ಭಟ

By Nagaraja

ಬ್ರಿಟನ್‌ನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟ್ರಯಂಪ್ ಇಂಡಿಯಾ, ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ಬೊನೆವಿಲ್ ಸರಣಿಯ ತ್ರಿವಳಿ ಬೈಕ್ ಗಳನ್ನು ಪ್ರದರ್ಶನಕ್ಕಿರಿಸಿದೆ. ಅವುಗಳೆಂದರೆ,

  • ಬೊನೆವಿಲ್ ಸ್ಟ್ರೀಟ್ ಟ್ವಿನ್,
  • ಬೊನೆವಿಲ್ ಟಿ120,
  • ಬೊನೆವಿಲ್ ಥ್ರಕ್ಸ್ಟನ್ ಆರ್
ಟ್ರಯಂಪ್
ಈ ಎಲ್ಲ ಟ್ರಯಂಪ್ ಬೊನೆವಿಲ್ ಶ್ರೇಣಿಯ ಬೈಕ್ ಗಳಲ್ಲಿ ಮುಂದಿನ ತಲೆಮಾರಿನ ಎಂಜಿನ್ ಬಳಕೆಯಾಗಲಿದ್ದು, ಗರಿಷ್ಠ ನಿರ್ವಹಣೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಬೊನೆವಿಲ್ ಸ್ಟ್ರೀಟ್ ಟ್ವಿನ್
900 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸ್ಟ್ರೀಟ್ ಟ್ವಿನ್, 3200 ಆರ್‌ಪಿಎಂನಲ್ಲಿ 80 ಎನ್‌ಎಂ ತಿರುಗಬಲವನ್ನು ನೀಡಲಿದೆ.

ಬಣ್ಣಗಳು: ಕ್ರ್ಯಾನ್ ಬೆರ್ರಿ ರೆಡ್, ಅಲ್ಯೂಮಿನಿಯಂ ಸಿಲ್ವರ್, ಜೆಟ್ ಬ್ಲ್ಯಾಕ್ ಮತ್ತು ಮ್ಯಾಟ್ ಬ್ಲ್ಯಾಕ್.
ಬಿಡುಗಡೆ, ಬೆಲೆ: ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆ ತಲುಪಲಿರುವ ಟ್ರಯಂಪ್ ಸ್ಟ್ರೀಟ್ ಟ್ವಿನ್ 6.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಟ್ರಯಂಪ್


ಬೊನೆವಿಲ್ ಟಿ120

ಇನ್ನು ಟ್ರಯಂಪ್ ಬೊನೆವಿಲ್ ಟಿ120 ಬೈಕ್ ನಲ್ಲಿ ಶಕ್ತಿಶಾಲಿ 1200 ಸಿಸಿ ಎಂಜಿನ್ ಆಳವಡಿಸಲಾಗಿದ್ದು, 3100 ಆರ್‌ಪಿಎಂನಲ್ಲಿ 105 ಎನ್‌ಎಂ ತಿರುಗುಬಲವನ್ನು ನೀಡಲಿದೆ.

ಬಣ್ಣಗಳು: ಲಾವಾ ರೆಡ್, ಕ್ರ್ಯಾನ್ ಬೆರ್ರಿ ರೆಡ್/ಅಲ್ಯೂಮಿನಿಯಂ ಸಿಲ್ವರ್, ಜೆಟ್ ಬ್ಲ್ಯಾಕ್ ಮತ್ತು ಜೆಟ್ ಬ್ಲ್ಯಾಕ್/ಪ್ಯೂರ್ ವೈಟ್.
ಬಿಡುಗಡೆ, ಬೆಲೆ: ಎಪ್ರಿಲ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿರುವ ಟಿ120 8.70 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬೊನೆವಿಲ್ ಥ್ರಕ್ಸ್ಟನ್ ಆರ್
ಟಿ120 ಆವೃತ್ತಿಗೆ ಸಮಾನವಾದ 1200 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಥ್ರಕ್ಸ್ಟನ್ ಆಱ್, 4950 ಆರ್‌ಪಿಎಂನಲ್ಲಿ 112 ಎನ್‌ಎಂ ತಿರುಗುಬಲವನ್ನು ನೀಡಲಿದೆ.

ಬಣ್ಣಗಳು: ಡಯಾಬ್ಲೊ ರೆಡ್ ಮತ್ತು ಸಿಲ್ವರ್ ಐಸ್.
ಬಿಡುಗಡೆ, ಬೆಲೆ: ಅಂದ ಹಾಗೆ ಟ್ರಯಂಪ್ ಥ್ರಕ್ಸ್ಟನ್ ಆರ್ ಬೆಲೆ ಇನ್ನಷ್ಟೇ ಘೋಷಣೆಯಾಗಬೇಕಾಗಿದ್ದು, 2016 ಜುಲೈ ತಿಂಗಳಲ್ಲಿ ಮಾರುಕಟ್ಟೆ ತಲುಪಲಿದೆ.

ವಿಶಿಷ್ಟತೆಗಳು

  • ಎಬಿಎಸ್,
  • ರೈಡ್ ಬೈ ವೈರ್,
  • ಟ್ರಾಕ್ಷನ್ ಕಂಟ್ರೋಲ್,
  • ಸ್ಲಿಪ್ ಅಸಿಸ್ಟ್ ಕ್ಲಚ್,
  • ಫಿಂಗರ್ ಟ್ರಿಪ್ ಕಂಟ್ರೋಲ್ ಬಟನ್,
  • ರೈಡರ್ ಮೋಡ್,
  • ಎಲ್‌ಇಡಿ ಬೆಳಕು,
  • ಡೇಟೈಮ್ ರನ್ನಿಂಗ್ ಹೆಡ್ ಲೈಟ್.
Most Read Articles

Kannada
English summary
Triumph Bonneville Next Generation Showcased At The 2016 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X