ಪಲ್ಸರ್ ಶ್ರೇಣಿಯ ಬೈಕ್ ಗಳ ಸಂಪೂರ್ಣ ಬೆಲೆ, ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ

Written By:

ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ, 2017 ಪಲ್ಸರ್ ಶ್ರೇಣಿಯ ಬೈಕ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಪಲ್ಸರ್ ದೇಶದ ನಂ.1 ಎಂಟ್ರಿ ಲೆವೆಲ್ ಕ್ರೀಡಾ ಬೈಕಾಗಿದ್ದು, ನೂತನ ಪಲ್ಸರ್ 135ಎಸ್, 150, 180 ಮತ್ತು 220 ಎಫ್ ಮಾದರಿಗಳು ಮತ್ತಷ್ಟು ಬಲ ತುಂಬಲಿದೆ.

ಸಂಪೂರ್ಣ ಬೆಲೆ ಮಾಹಿತಿ ಇಲ್ಲಿದೆ (ಎಕ್ಸ್ ಶೋ ರೂಂ ದೆಹಲಿ)

ಪಲ್ಸರ್ 135 ಎಲ್‌ಎಸ್: 60,178 ರು.
ಪಲ್ಸರ್ 150: 73,513 ರು.
ಪಲ್ಸರ್ 180: 79,545 ರು.
ಪಲ್ಸರ್ 220ಎಫ್: 91,201 ರು.

ಬಿಎಸ್ IV ಎಂಜಿನ್

ಪಲ್ಸರ್ 150 ಮಾದರಿಯ ಹೊರತಾಗಿ ಇತರೆಲ್ಲ ಮೂರು ಮಾದರಿಗಳು ಬಿಎಸ್ IV ಎಂಜಿನ್ ಗಿಟ್ಟಿಸಿಕೊಂಡಿದೆ.

ಲೇಸರ್ ಎಡ್ಜ್ಡ್

2017 ಪಲ್ಸರ್ ಶ್ರೇಣಿಯ ಬೈಕ್ ಗಳ ಸಂಗ್ರಹವನ್ನು ದೇಶದ ಜನಪ್ರಿಯ ಸಂಸ್ಥೆಯು 'ಲೇಸರ್ ಎಡ್ಜ್ಡ್' ಎಂದು ಹೆಸರಿಸಿದೆ.

ಡ್ಯುಯಲ್ ಟೋನ್ ಬಣ್ಣ

ಈ ಎಲ್ಲ ಮಾದರಿಗಲು ಡ್ಯುಯಲ್ ಟೋನ್ ನೀಲಿ ಮತ್ತು ಬಿಳಿ ಬಣ್ಣಗಳ ಮಿಶ್ರಣವನ್ನು ಗಿಟ್ಟಿಸಿಕೊಳ್ಳಲಿದೆ.

ವೈಶಿಷ್ಟ್ಯಗಳು

  • ಆರಾಮದಾಯಕ ಸೀಟು,
  • ಪರಿಷ್ಕೃತ ಎಕ್ಸಾಸ್ಟ್ ಘಟಕ,
  • ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಬ್ಲೂ ಬ್ಯಾಕ್ ಲಿಟ್ ಬೆಳಕಿನ ಸಂಯೋಜನೆ

ಎಂಜಿನ್ - ಪಲ್ಸರ್ 135

135 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಪಲ್ಸರ್ 135 ಎಲ್ ಎಸ್ ಮಾದರಿಯು 11.4 ಎನ್ ಎಂ ತಿರುಗುಬಲದಲ್ಲಿ 13.3 ಅಶ್ವಶಕ್ತಿಯನ್ನು ನೀಡಲಿದೆ.

ಪಲ್ಸರ್ 180

ಅತ್ತ 180 ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಪಲ್ಸರ್ 180, 14.22 ಎನ್ ಎಂ ತಿರುಗುಬಲದಲ್ಲಿ 17 ಅಶ್ವಶಕ್ತಿಯನ್ನು ನೀಡುತ್ತದೆ.

ಪಲ್ಸರ್ 220ಎಫ್

ಇನ್ನು ಹೆಚ್ಚು ಶಕ್ತಿಶಾಲಿ 220 ಸಿಸಿ ಎಂಜಿನ್ ನಿಂದ ಕೂಡಿರುವ ಪಲ್ಸರ್ 220 ಮಾದರಿಯು 19 ಎನ್ ಎಂ ತಿರುಗುಬಲದಲ್ಲಿ 20.7 ಅಶ್ವಶಕ್ತಿಯನ್ನು ನೀಡಲಿದೆ.

ಈ ಎಲ್ಲ ಮಾದರಿಗಳು ಐದು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ. ಆದರೆ ಪಲ್ಸರ್ 150 ಬೈಕ್ ಮಾತ್ರ ಬಿಎಸ್ III ಎಂಜಿನ್ ನಿಂದ ಮುಂದುವರಿಯಲಿದೆ.

English summary
2017 Bajaj Pulsar 180, 150 & 135 LS Launched; Prices Start At Rs 60,178
Please Wait while comments are loading...

Latest Photos