ಭಾರತಕ್ಕೆ ಭರ್ಜರಿ ಎಂಟ್ರಿ ಪಡೆದ ಬಜಾಜ್ ವಿ12 ಬೈಕ್

Written By:

ವಿ15 ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ, ಮಗದೊಂದು ಆಕರ್ಷಕ ಬೈಕ್ ವಿ12 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು 125 ಸಿಸಿ ವಿಭಾಗದಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ವೇದಿಕೆ ಸೃಷ್ಟಿ ಮಾಡಲಿದೆ.

ಬಜಾಜ್ ವಿ12 ಎಕ್ಸ್ ಶೋ ರೂಂ ಬೆಲೆಯು 56,200 ರುಪಾಯಿ ನಿಗದಿಯಾಗಿದೆ. ಈ ಸಂಬಂಧ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.

ನೂತನ ಬಜಾಜ್ ವಿ12 ಬೈಕ್ 125 ಸಿಸಿ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇದರ 125ಸಿಸಿ ಎಂಜಿನ್ 10.8 ಎನ್ ಎಂ ತಿರುಗುಬಲದಲ್ಲಿ 10.9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿ15ಗಿಂತಲೂ ವಿಭಿನ್ನವಾದ ಅಲಾಯ್ ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬಜಾಜ್ ವಿ12 ಎರಡು ಬದಿಗಳಲ್ಲೂ ಡ್ರಮ್ ಬ್ರೇಕ್ ಗಿಟ್ಟಿಸಿಕೊಳ್ಳಲಿದೆ. ಇದರೊಂದಿಗೆ ಡಿಸ್ಕ್ ಬ್ರೇಕ್ ಕೊರತೆಯನ್ನು ಅನುಭವಿಸಲಿದೆ.

ಇನ್ನು ವಿ15 ಮಾದರಿಯಲ್ಲಿರುವ ಎಲ್ ಇಡಿ ಯುನಿಟ್ ಬದಲಾಗಿ ಅನಲಾಗ್ ಫ್ಯೂಯಲ್ ಗೇಜ್ ಪಡೆಯಲಿದೆ. ಅಂತೆಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ 100/90 ಹಾಗೂ 90/90 ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ.

ಇಲ್ಲಿ ಕಂಡುಬಂದಿರುವ ಗಮನಾರ್ಹ ಅಂಶವೆಂದರೆ ಬಜಾಜ್ ವಿ12 ಸಹ ಐಕಾನಿಕ್ ಯುದ್ಧ ಹಡಗು ವಿಕ್ರಾಂತ್ ಲೋಹದಿಂದ ನಿರ್ಮಾಣವಾಗಲಿದೆ. ಇದು ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

Click to compare, buy, and renew Car Insurance online

Buy InsuranceBuy Now

English summary
Bajaj V12 Launched In India; Priced At Rs 56,283
Please Wait while comments are loading...

Latest Photos