ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾದ ಬೈಕ್ ಯಾವುದು?

By Nagaraja

ಕಲಿಕಾ ಸಮಯ ಜೀವನದ ಅತ್ಯಂತ ಸುವರ್ಣ ಕಾಲಘಟ್ಟವೆಂದು ವರ್ಣಿಸಲಾಗುತ್ತದೆ. ಅದರಲ್ಲೂ ಕಾಲೇಜು ಲೈಫ್ ಅಂತೂ ಫುಲ್ ಬಿಂದಾಸ್ ಆಗಿರುತ್ತದೆ. ಸ್ನೇಹಿತರ ಜೊತೆಗಿನ ತಿರುಗಾಟ, ಮೋಜು, ಮಸ್ತಿ ಇವೆಲ್ಲವೂ ಕಾಲೇಜು ಜೀವನದಲ್ಲಿ ಸಾಮಾನ್ಯ.

ಕೈಯಲ್ಲಿ ಕಾಸಿಲ್ಲದಿದ್ದರೂ ಶೋಕಿ ಬಟ್ಟೆ ಧರಿಸಿ ದುಬಾರಿ ಬೈಕ್ ಗಳಲ್ಲಿ ತಿರುಗಾಡುವ ಸ್ನೇಹಿತರು ನಮ್ಮ ನಡುವೆಯೇ ಇದ್ದಾರೆ. ಹಾಗಿರುವಾಗ ಹೆತ್ತವರಿಗೆ ಜಾಸ್ತಿ ಒತ್ತಡ ಕೊಡದೇ ಖರೀದಿಸಬಹುದಾದ ಕೆಲವು ಸೂಕ್ತವಾದ ದ್ವಿಚಕ್ರ ವಾಹನಗಳನ್ನು ನಾವಿಲ್ಲಿ ಪರಿಚಯಿಸಲಿದ್ದೇವೆ.

ಹೋಂಡಾ ನವಿ

ಹೋಂಡಾ ನವಿ

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೊಸ ಬೈಕ್ ಇದಾಗಿದೆ. ತನ್ನದೇ ಆದ ವಿಶಿಷ್ಟ ಶೈಲಿಯೊಂದಿಗೆ ಬೈಕೋ ಅಥವಾ ಸ್ಕೂಟರೋ ಎಂಬ ಗೊಂದಲವನ್ನುಂಟು ಮಾಡುತ್ತಿರುವ ಹೋಂಡಾ ನವಿ, ಸುಲಭ ಚಾಲನೆಯನ್ನು ಪ್ರದಾನ ಮಾಡಲಿದೆ.

ಹೋಂಡಾ ನವಿ

ಹೋಂಡಾ ನವಿ

ಜನಪ್ರಿಯ ಆಕ್ಟಿವಾದಲ್ಲಿರುವುದಕ್ಕೆ ಸಮಾನವಾದ 110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ನವಿ, 9 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಸಿವಿಟಿ ಗೇರ್ ಸಹ ಪಡೆದಿದೆ. ಅಂತೆಯೇ ಪ್ಯಾಟ್ರಿಯಟ್ ರೆಡ್, ಶಾಸ್ತಾ ವೈಟ್ ಬ್ಲ್ಯಾಕ್, ಹೂಪರ್ ಗ್ರೀನ್ ಮತ್ತು ಸ್ಪಾರ್ಕಿ ಆರೆಂಜ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬೆಲೆ ಮಾಹಿತಿ: 39,500 ರು.ಗಳಿಂದ 49,500 ರು. (ಎಕ್ಸ್ ಶೋ ರೂಂ ದೆಹಲಿ)

 ಪಿಯಾಜಿಯೊ ವೆಸ್ಪಾ

ಪಿಯಾಜಿಯೊ ವೆಸ್ಪಾ

ಕಾಲೇಜು ಯುವತಿಯರಿಗೆ ಪಿಯಾಜಿಯೊ ವೆಸ್ಪಾ ಅತ್ಯುತ್ತಮ ಆಯ್ಕೆಯಾಗಿರಲಿದೆ. ಪ್ರೀಮಿಯಂ ಶೈಲಿ, ನಿರ್ಮಾಣ ಗುಣಮಟ್ಟತೆ ಹಾಗೂ ಆಕ್ರಮಣಕಾರಿ ನೋಟ ಇವೆಲ್ಲವೂ ಸೊಂಟ ಬಳುಕಿಸುವ ಕಾಲೇಜು ಕನ್ಯೆಯರಿಗೆ ಸೂಕ್ತ ಆಯ್ಕೆಯಾಗಿರಲಿದೆ.

ವೆಸ್ಪಾ

ವೆಸ್ಪಾ

ಇಟಲಿಯ ಐಕಾನಿಕ್ ಸ್ಕೂಟರ್ ಬ್ರಾಂಡ್ ವೆಸ್ಪಾದಲ್ಲಿರುವ 125 ಸಿಸಿ ಎಂಜಿನ್ 10.6 ಎನ್ ಎಂ ತಿರುಗುಬಲದಲ್ಲಿ 10 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಲೆ ಮಾಹಿತಿ: 77,308 ರು.ಗಳಿಂದ 82,137 ರು. (ಎಕ್ಸ್ ಶೋ ರೂಂ ದೆಹಲಿ)

ಅಪಾಚಿ ಆರ್‌ಟಿಆರ್‌ 200 4ವಿ

ಅಪಾಚಿ ಆರ್‌ಟಿಆರ್‌ 200 4ವಿ

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ನೂತನ ಅಪಾಚಿ ಆರ್‌ಟಿಆರ್ 200 4ವಿ ನಿಜಕ್ಕೂ ಕಾಲೇಜು ಯುವಕರ ಪಾಲಿಗೆ ನೆಚ್ಚಿನ ಬೈಕಾಗಿರಲಿದೆ. ಇದು ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದ್ದು, ಪರಿಪೂರ್ಣ ಚಾಲನಾ ಅನುಭವ ನೀಡಲಿದೆ.

ಅಪಾಚಿ ಆರ್‌ಟಿಆರ್‌ 200 4ವಿ

ಅಪಾಚಿ ಆರ್‌ಟಿಆರ್‌ 200 4ವಿ

ಅಪಾಚಿ ಆರ್‌ಟಿಆರ್‌ 200 4ವಿ ನಲ್ಲಿರುವ 200 ಸಿಸಿ ಎಂಜಿನ್ 18.1 ಎನ್ ಎಂ ತಿರುಗುಬಲದಲ್ಲಿ 21 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಲೆ ಮಾಹಿತಿ: 89,215 ರು.ಗಳಿಂದ 94,215 ರು. (ಎಕ್ಸ್ ಶೋ ರೂಂ ದೆಹಲಿ)

ಕೆಟಿಎಂ ಡ್ಯೂಕ್ 200

ಕೆಟಿಎಂ ಡ್ಯೂಕ್ 200

ತನ್ನದೇ ಆದ ವಿಶಿಷ್ಟ ಶಬ್ದದೊಂದಿಗೆ ಆಗಲೇ ಯುವಕರ ಮನಗೆದ್ದಿರುವ ಕೆಟಿಎಂ ಡ್ಯೂಕ್ 200 ಅತ್ಯುತ್ತಮ ಶೈಲಿ ಮತ್ತು ನಿರ್ವಹಣೆಯನ್ನು ಕಾಪಾಡಿಕೊಂಡಿದೆ. ಎತ್ತರವಾದ ಇಂಧನ ಟ್ಯಾಂಕ್ ಹಾಗೂ ಆಕ್ರಮಣಕಾರಿ ನಿಲುವು ಇದರ ಪ್ರಮುಖ ಆಕರ್ಷಣೆಯಾಗಿದೆ.

ಕೆಟಿಎಂ ಡ್ಯೂಕ್ 200

ಕೆಟಿಎಂ ಡ್ಯೂಕ್ 200

199.5 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕೆಟಿಎಂ ಡ್ಯೂಕ್ 200, 19.2 ಎನ್ ಎಂ ತಿರುಗುಬಲದಲ್ಲಿ 25 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಲೆ ಮಾಹಿತಿ: 1,43,401 ರು. (ಎಕ್ಸ್ ಶೋ ರೂಂ ದೆಹಲಿ)

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

ಹೆಸರಲ್ಲೇ ಸೂಚಿಸಿರುವಂತೆಯೇ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ನಲ್ಲಿ ಓಡಾಡುವುದು ನಿಮ್ಮಲ್ಲಿ ರಸ್ತೆಯ ರಾಜನಂತೆ ಭಾಸವಾಗಲಿದೆ. ಎಲ್ಲ ಹಂತದಲ್ಲೂ ಅತಿ ಬೇಡಿಕೆಯ ಬೈಕ್ ಎನಿಸಿಕೊಂಡಿರುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಆರಾಮದಾಯಕ ಚಾಲನೆಯನ್ನು ಪ್ರದಾನ ಮಾಡಲಿದೆ.

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350

346 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350, 28 ಎನ್ ಎಂ ತಿರುಗುಬಲದಲ್ಲಿ 20 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಲೆ ಮಾಹಿತಿ: 1.29 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

Most Read Articles

Kannada
Read more on ಬೈಕ್ bike
English summary
Best Five Two-Wheelers For College Students
Story first published: Wednesday, June 29, 2016, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X