ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

By Nagaraja

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಲಾಂಚ್ ಎಂದೇ ಬಿಂಬಿಸಲಾಗಿರುವ ಬಿಎಂಡಬ್ಲ್ಯು ಜಿ310ಆರ್ ಕ್ರೀಡಾ ಬೈಕ್ ಬಿಡುಗಡೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಂತೂ ವಾಹನ ಪ್ರೇಮಿಗಳ ಕನಸು ನನಸಾಗುವುದು ಕಷ್ಟಕರವಾಗಿದೆ.

ಜರ್ಮನಿಯ ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆ ಬಿಎಂಡಬ್ಲ್ಯು ಮೊಟೊರಾಡ್, ನಿರ್ಮಿಸುತ್ತಿರುವ ಅತ್ಯಂತ ಕಡಿಮೆ ಸಾಮರ್ಥ್ಯದ ಕ್ರೀಡಾ ಬೈಕ್ ಇದಾಗಿದೆ. ಭಾರತದ ಮುಂಚೂಣಿಯ ಸಂಸ್ಥೆ ಟಿವಿಎಸ್ ಪಾಲುದಾರಿಕೆಯೊಂದಿಗೆ ಬಿಎಂಡ್ಲ್ಯು ಜಿ310ಆರ್ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ.

ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

ತಮಿಳುನಾಡಿನಲ್ಲಿರುವ ಹೊಸೂರು ಘಟಕದಲ್ಲಿ ಬಿಎಂಡಬ್ಲ್ಯು ಜಿ310ಆರ್ ನಿರ್ಮಾಣವಾಗಲಿದ್ದು 2017ನೇ ಸಾಲಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು ಜಿ310ಆರ್, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

ಗಂಟೆಗೆ 143 ಕೀ.ಮೀ. ವೇಗದಲ್ಲಿ ಸಾಗಬಲ್ಲ ಬಿಎಂಡಬ್ಲ್ಯು ಜಿ310ಆರ್, ಒಟ್ಟು 158.5 ಕೆ.ಜಿ ಭಾರವನ್ನು ಹೊಂದಿರುತ್ತದೆ.

ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

ಬಿಎಂಡಬ್ಲ್ಯು 310ಆರ್ ಬೈಕ್‌ನ ಟಿವಿಎಸ್ ಪ್ರತಿರೂಪವಾಗಿರುವ ಅಕುಲಾ ಸಂಪೂರ್ಣ ಫೇರ್ಡ್ ವರ್ಷನ್ ಆವೃತ್ತಿಯು, 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದನ್ನು ಸಂಸ್ಥೆಯ ಜನಪ್ರಿಯ 'ಅಪಾಚಿ' ಎಂಬ ಹೆಸರಿನಲ್ಲಿ ಮಾರಾಟವಾಗುವುದು ಬಹುತೇಕ ಖಚಿತವಾಗಿದೆ.

ಬಿಎಂಡಬ್ಲ್ಯು ಜಿ310ಆರ್ ಆಗಮನಕ್ಕೆ ಆರಂಭದಲ್ಲೇ ಎದುರಾಯ್ತು ವಿಘ್ನ

2013ನೇ ಇಸವಿಯಲ್ಲಿ ಜೊತೆಗೂಡಿರುವ ಬಿಎಂಡಬ್ಲ್ಯು-ಟಿವಿಎಸ್ 500 ಸಿಸಿ ಒಳಗಡೆಯ ಸಾಮರ್ಥ್ಯದ ಬೈಕ್ ಗಳನ್ನು ನಿರ್ಮಿಸಲು ಪಣತೊಟ್ಟಿವೆ. ಅಲ್ಲದೆ ಮುಂಬರುವ ದಿನಗಳಲ್ಲಿ ದ್ವಿಚಕ್ರ ವಿಭಾಗದಲ್ಲಿ ಹೊಸತನಕ್ಕೆ ಕಾರಣವಾಗಲಿದೆ.

Most Read Articles

Kannada
English summary
BMW G310R India Launch Reportedly Delayed To Early 2017
Story first published: Friday, July 22, 2016, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X