ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

By Nagaraja

ಭಾರತದಲ್ಲೂ ತನ್ನ ಸಾನಿಧ್ಯ ತೋರ್ಪಡಿಸಿರುವ ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹಾರ್ಲೆ ಡೇವಿಡ್ಸನ್, 2020ರ ವೇಳೆಯಾಗುವಾಗ ತನ್ನ ಚೊಚ್ಚಲ ವಿದ್ಯುತ್ ಚಾಲಿತ ಬೈಕನ್ನು ಬಿಡುಗಡೆಗೊಳಿಸಲಿದೆ.

ಸುಸ್ಥಿರ ಪರಿಸರಕ್ಕಾಗಿ ಇಡೀ ವಾಹನ ಜಗತ್ತೇ ಪರ್ಯಾಯ ಮಾರ್ಗವನ್ನು ಹುಡುಕುತ್ತಿರುವ ಈ ವೇಳೆಯಲ್ಲಿ ಹಾರ್ಲೆ ಡೇವಿಡ್ಸನ್ ತನ್ನ ಕೊಡುಗೆಯನ್ನು ಸಲ್ಲಿಸಲಿದ್ದು, ಬದಲಾವಣೆಯ ಮಾರ್ಗದಲ್ಲಿ ಸಂಚರಿಸಲಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ನಿಮ್ಮ ಮಾಹಿತಿಗಾಗಿ, ಕೆಲವು ವರ್ಷಗಳ ಹಿಂದೆಯಷ್ಟೇ ಹಾರ್ಲೆ ಡೇವಿಡ್ಸನ್, ಲೈವ್ ವೈರ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಯೋಜನೆಯನ್ನು ಪರಿಚಯಿಸಿತ್ತು.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ 2020ರ ವೇಳೆಯಾಗುವಾಗ ಹಾರ್ಲೆ ಎಲೆಕ್ಟ್ರಿಕ್ ಬೈಕ್ ಗಳು ನಿರ್ಮಾಣ ಹಂತವನ್ನು ತಲುಪಲಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಯಾವತ್ತೂ ಗರಿಷ್ಠ ನಿರ್ವಹಣಾ ಸಾಮರ್ಥ್ಯದ ಕ್ರೂಸರ್ ಮೋಟಾರ್ ಸೈಕಲ್ ನಿರ್ಮಾಣದಲ್ಲಿ ಗಮನ ಕೇಂದ್ರಿಕರಿಸಿರುವ ಹಾರ್ಲೆ ಈಗ ಎಲೆಕ್ಟ್ರಿಕ್ ವಿಭಾಗದಲ್ಲೂ ಯಶಸ್ವಿ ಸಾಧಿಸಿತೇ ಎಂಬುದು ಕುತೂಹಲವೆನಿಸಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ತನ್ನ ಪ್ರತಿಸ್ಪರ್ಧಿ ವಿಕ್ಟರಿ ಮೋಟಾರ್ ಸೈಕಲ್ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಬೈಕ್ ಗಳ ನಿರ್ಮಾಣದ ಬೆನ್ನಲ್ಲೇ ಹಾರ್ಲೆಯ ಈ ಮಹತ್ವದ ಘೋಷಣೆ ಹೊರಬಂದಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ವಿಕ್ಟರಿ ಮೋಟಾರ್ ಸೈಕಲ್ಸ್ ಈಗಾಗಲೇ ಇಸ್ಲೆ ಆಫ್ ಮ್ಯಾನ್ ಟಿಟಿ ಮತ್ತು ಪೈಕ್ಸ್ ಪೀಕ್ ಇಂಟರ್ ನ್ಯಾಷನಲ್ ಹಿಲ್ ಕ್ಲೈಂಬ್ ಕಾರ್ಯಕ್ರಮಗಳಲ್ಲಿ ತನ್ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಗಳನ್ನು ಪ್ರದರ್ಶಿಸಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಲೈವ್ ವೈರ್ ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಹಾರ್ಲೆ ಯೋಜನೆಗಳಿಗೆ ತೊಡಕುಂಟಾಗಿತ್ತು. ಒಂದು ಇಂತಹ ಉತ್ಪನ್ನ ನಿರ್ಮಿಸಲು ಸರಿ ಸುಮಾರು 33.4 ಲಕ್ಷ ರು.ಗಳಷ್ಟು ಖರ್ಚು ತಗಲುತ್ತದೆ. ಇದು ಸಾಂಪ್ರದಾಯಿಕ ಆಂತರಿಕ ದಹನಕಾರಿ ಮೋಟಾರ್ ಸೈಕಲ್ ಗಿಂತಲೂ ದುಂದು ವೆಚ್ಚವಾಗಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಅನುಭವಿಸಿದ ಮಗದೊಂದು ಹಿನ್ನಡೆಯೆಂದರೆ ಇದರ ಬ್ಯಾಟರಿ 80 ಕೀ.ಮೀ. ವ್ಯಾಪ್ತಿಯಷ್ಟು ಮಾತ್ರ ಸಾಮರ್ಥ್ಯ ಹೊಂದಿತ್ತು. ನಿರ್ಮಾಣ ಆವೃತ್ತಿಗೂ ಮುನ್ನ ಇದನ್ನು ದ್ವಿಗುಣಗೊಳಿಸುವುದು ಸಂಸ್ಥೆ ಯೋಜನೆಯಾಗಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಮೂರು ಹಂತದ ಇಂಡಕ್ಷನ್ ಮೋಟಾರುನಿಂದ ನಿಯಂತ್ರಿಸಲ್ಪಡುವ ಹಾರ್ಲೆ ಡೇವಿಡ್ಸನ್ ಲೈವ್ ವೈರ್ ಮೋಟಾರ್ ಸೈಕಲ್, 71 ಎನ್ ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿ ಉತ್ಪಾದಿಸುವಷ್ಟ ಸಾಮರ್ಥ್ಯ ಹೊಂದಿದೆ.

ಅಮೆರಿಕದ ಐಕಾನಿಕ್ ಹಾರ್ಲೆಯಿಂದ ಚೊಚ್ಚಲ ಎಲೆಕ್ಟ್ರಿಕ್ ಬೈಕ್

ಒಟ್ಟಾರೆಯಾಗಿ ಜಪಾನ್ ಅಥವಾ ಯುರೋಪ್ ಮೂಲದ ಸಂಸ್ಥೆಗಳು ಎಲೆಕ್ಟ್ರಿಕ್ ಕಾನ್ಸೆಪ್ಟ್ ನೊಂದಿಗೆ ಹೊರ ಬರುವ ಮುನ್ನವೇ ವಿದ್ಯುತ್ ಚಾಲಿತ ಬೈಕ್ ಗಳನ್ನು ಪರಿಚಯಿಸುವುದು ಹಾರ್ಲೆ ಉದ್ದೇಶವಾಗಿದೆ. ಈ ಮುಖಾಂತರ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದೆ.

Most Read Articles

Kannada
English summary
First Electric Harley-Davidson Bike To Launch By 2020
Story first published: Monday, June 13, 2016, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X