100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

By Nagaraja

ದೇಶದ ದ್ವಿಚಕ್ರ ವಾಹನ ಇತಿಹಾಸದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹಾಗೂ ಮನ್ನಣೆಗೆ ಪಾತ್ರವಾಗಿರುವ ಮೈಲೇಜ್ ಚಾಂಪಿಯನ್ ಹೀರೊ ಸ್ಪ್ಲೆಂಡರ್ ಹೊಸ ಸ್ವರೂಪವನ್ನು ಪಡೆದುಕೊಳ್ಳಲು ಸಜ್ಜಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಪ್ರತಿ ಲೀಟರ್ ಗೆ 100 ಕೀ.ಮೀ. ಮೈಲೇಜ್ ನೀಡಲು ಸಾಮರ್ಥ್ಯ ಹೊಂದಿರಲಿದೆ.

ಈಗಾಗಲೇ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಡೀಲರುಗಳ ಬಳಿ ಪ್ರತ್ಯಕ್ಷಗೊಂಡಿದ್ದು, ಪ್ರಯಾಣಿಕ ದ್ವಿಚಕ್ರ ವಿಭಾಗದಲ್ಲಿ ಮಗದೊಮ್ಮೆ ಬಿರುಗಾಳಿಯೆಬ್ಬಿಸುವ ಇರಾದೆಯಲ್ಲಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಐಸ್ಮಾರ್ಟ್ ಬೈಕ್ ನಲ್ಲಿ 110 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದೆ. ಇದು 9 ಎನ್ ಎಂ ತಿರುಗುಬಲದಲ್ಲಿ 8.9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇರುತ್ತದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಹೀರೊ ಮೊಟೊಕಾರ್ಪ್, ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ತನ್ನದೇ ಘಟಕದಲ್ಲಿ ಐಸ್ಮಾರ್ಟ್ ಅಭಿವೃದ್ಧಿಪಡಿಸಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ಮೈಲೇಜ್ ಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿರುವ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಸರಿ ಸುಮಾರು 58,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ನಾಯ್ಸ್, ವೈಬ್ರೇಷನ್ ಮತ್ತು ಹಾರ್ಶ್ ನೆಶ್ ಮಟ್ಟವನ್ನು ಕಡಿಮೆಗೊಳಿಸಲಾಗಿದ್ದು, ನಗರ ಪ್ರದೇಶದ ದೈನಂದಿನ ಸವಾರಿಗೂ ಹೆಚ್ಚು ಹೊಂದಿಕೆಯಾಗಲಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ಹೀರೊ ಸ್ಪ್ಲೆಂಡರ್ ನಲ್ಲಿರುವ ಸ್ಟ್ಯಾರ್ಟ್ ಸ್ಟಾಪ್ ತಂತ್ರಜ್ಞಾನವು ಗರಿಷ್ಠ ಮೈಲೇಜ್ ನೀಡಲು ನೆರವಾಗಲಿದೆ. ಇದು ತೀವ್ರವಾದ ವಾಹನ ದಟ್ಟಣೆಯಲ್ಲೂ ಪೆಟ್ರೋಲ್ ಜಾಸ್ತಿ ಬಳಕೆಯಾಗದಂತೆ ನೋಡಿಕೊಳ್ಳಲಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ಇನ್ನುಳಿದಂತೆ ಸಿಂಗಲ್ ಡೌನ್ ಟ್ಯೂಬ್ ಫ್ರೇಮ್ ಜೊತೆ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಐಚ್ಛಿಕ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಸಸ್ಪೆನ್ಷನ್ ಮತ್ತು ಸ್ಟ್ಯಾಂಡರ್ಡ್ ಡ್ರಮ್ ಬ್ರೇಕ್ ಇರಲಿದೆ.

100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ಜೋಡಿ ಬಣ್ಣದ ಆಯ್ಕೆಯು ಗ್ರಾಹಕರಿಗೆ ಆಧುನಿಕತೆಯ ಸ್ಪರ್ಶವನ್ನು ತುಂಬಲಿದೆ. ಇನ್ನು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಂದರೂ ಅಚ್ಚರಿಪಡಬೇಕಾಗಿಲ್ಲ.

Most Read Articles

Kannada
English summary
Dealerships Receive Their Splendor iSmart 110 Ahead Of Launch
Story first published: Saturday, July 2, 2016, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X