ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

By Nagaraja

ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್, ಸಂಪೂರ್ಣವಾಗಿಯೂ ತನ್ನದೇ ಘಟಕದಲ್ಲಿಯೇ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿರುವ ಮೊತ್ತ ಮೊದಲ ಸ್ಪ್ಲೆಂಡರ್ ಐಸ್ಮಾರ್ಟ್ 110 ಪ್ರಯಾಣಿಕ ಬೈಕನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಿದೆ.

ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 100 ಪ್ರಯಾಣಿಕ ಬೈಕ್‌ನ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 53,800 ರು.ಗಳಾಗಿರಲಿದೆ. ಇದು ಈ ವಿಭಾಗದಲ್ಲಿ ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಮೊದಲ ಬೈಕೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

ಹೋಂಡಾ ಜೊತೆಗಿನ ಬಾಂಧವ್ಯವನ್ನು ಕಡಿದುಕೊಂಡ ಬಳಿಕ ಹೊಸ ಪ್ರಯಾಣವನ್ನು ಆರಂಭಿಸಿರುವ ಹೀರೊ ಸಂಪೂರ್ಣವಾಗಿ ಸ್ವದೇಶವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡುತ್ತಿರುವ ಮೊದಲ ಬೈಕ್ ಇದಾಗಿದೆ. ತನ್ಮೂಲಕ ದ್ವಿಚಕ್ರ ವಿಭಾಗದಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಹೀರೊ ಮೊಟೊಕಾರ್ಪ್ ಗಿಟ್ಟಿಸಿಕೊಂಡಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • ನೂತನ ಐ3ಎಸ್ ತಂತ್ರಜ್ಞಾನ,
  • ಹೊಸ ಚಾಸೀ ಹಾಗೂ ಫ್ರೇಮ್,
  • ಟಾರ್ಕ್ ಆನ್ ಡಿಮ್ಯಾಂಡ್ ಎಂಜಿನ್ (ಬಿಎಸ್ IV),
  • ಬೆಸ್ಟ್ ಇನ್ ಕ್ಲಾಸ್ ಮೈಲೇಜ್, ಪವರ್, ಆಕ್ಸಿಲೇರೇಷನ್,
  • ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ (ಎಎಚ್ ಒ),
  • ಹೆಚ್ಚಿನ ಅನುಕೂಲಕ್ಕಾಗಿ ಉದ್ದವಾದ ಸೀಟು
  • ಹೊಸ ಮಫ್ಲರ್
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

    • ನವದೆಹಲಿ: 53,300 ರು.
    • ಬೆಂಗಳೂರು: 53,800 ರು.
    • ಮುಂಬೈ: 53,100 ರು.
    • ಚೆನ್ನೈ: 53,700 ರು.
    • ಕೋಲ್ಕತ್ತಾ: 54,200 ರು.
    • ಹೈದರಾಬಾದ್: 54,100 ರು.
    • ಪುಣೆ: 53,100 ರು.
    • ವಿನ್ಯಾಸ

      ವಿನ್ಯಾಸ

      ಸ್ಮಾರ್ಟ್, ಆಧುನಿಕ ಮತ್ತು ನಾವೀನ್ಯತೆ ವಿನ್ಯಾಸ ಶೈಲಿಗೆ ಮೊರೆ ಹೋಗಿರುವ ಹೀರೊ ಸ್ಪ್ಲೆಂಡರ್ 110 ಸಿಸಿ ಬೈಕ್ ನ್ಲಲಿ ಹೊಸ ಗ್ರಾಫಿಕ್ಸ್, ಡ್ಯುಯಲ್ ಟೋನ್ ಮಿರರ್, ಫೆಂಡರ್ ಮತ್ತು ಕವಚಗಳನ್ನು ಕಾಣಬಹುದಾಗಿದೆ. ಹೊಸತಾದ ಟೈಲ್ ಲೈಂಟ್, ಮಫ್ಲರ್ ಮತ್ತು ಕ್ರೋಮ್ ಟಿಪ್ ಗಳು ಹೆಚ್ಚು ಆಕರ್ಷಣೆಯನ್ನು ಕಾಪಾಡಿಕೊಂಡಿದೆ.

      ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

      2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿ ನೂತನ ಬಿಎಸ್ IV, 110 ಸಿಸಿ ಟಾರ್ಕ್ ಆನ್ ಡಿಮ್ಯಾಂಡ್ (ಟಿಒಡಿ) ಎಂಜಿನ್ ಆಳವಡಿಸಲಾಗಿದೆ.

      ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

      ಇದರ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ 9 ಎನ್ ಎಂ ತಿರುಗುಬಲದಲ್ಲಿ (5500 ಆರ್‌ಪಿಎಂ) 9.4 ಅಶ್ವಶಕ್ತಿಯನ್ನು (7500 ಆರ್‌ಪಿಎಂ) ಉತ್ಪಾದಿಸಲಿದೆ. ಹಾಗೆಯೇ 7.45 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗವರ್ಧಿಸಲಿದೆ.

      ಐಡಲ್-ಸ್ಟ್ಯಾರ್ಟ್-ಸ್ಟಾಪ್ ಸಿಸ್ಟಂ (i3S)

      ಐಡಲ್-ಸ್ಟ್ಯಾರ್ಟ್-ಸ್ಟಾಪ್ ಸಿಸ್ಟಂ (i3S)

      ಹೆಚ್ಚಿನ ಇಂಧನ ಕ್ಷಮತೆಗಾಗಿ ನೂತನ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿ ಐಡಲ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಉಳಿತಾಯ ನಿಟ್ಟಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಕೆಲಸ ಮಾಡಲಿದ್ದು, ಬಳಿಕ ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ.

      ಚಾಸೀ ಮತ್ತು ಫ್ರೇಮ್

      ಚಾಸೀ ಮತ್ತು ಫ್ರೇಮ್

      ನೂತನ ಚಾಸೀ ಮತ್ತು ಫ್ರೇಮ್ ಜೋಡಣೆ ಮಾಡಲಾಗಿದ್ದು, ಇದರಿಂದ ವರ್ಧಿತ ಬಾಳ್ವಿಕೆ, ಹೆಚ್ಚು ಕಾರ್ಯಕ್ಷಮತೆ ಮತ್ತು ಕಠಿಣ ಹಾದಿಗಳಲ್ಲೂ ಆರಾಮದಾಯಕ ಚಾಲನಾ ಅನುಭವ ನೀಡಲಿದೆ. ಒಟ್ಟಾರೆಯಾಗಿ ಅತ್ಯುತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲಿದೆ.

      ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್

      ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್

      ಇದರಲ್ಲಿರುವ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ತಂತ್ರಜ್ಞಾನವು ಇತರೆಲ್ಲ ಬೈಕ್ ಗಿಂತಲೂ ಸ್ಪ್ಲೆಂಡರ್ ಐಸ್ಮಾರ್ಟ್ 100 ಬೈಕನ್ನು ಪ್ರತ್ಯೇಕಿಸಲಿದೆ. ಇದು ಅತ್ಯುತ್ತಮ ಗೋಚರತೆಯನ್ನು ಕಾಪಾಡಿಕೊಳ್ಳಲಿದೆ.

      ಆಕರ್ಷಕ ಬಣ್ಣಗಳು

      ಆಕರ್ಷಕ ಬಣ್ಣಗಳು

      • ಸಿಲ್ವರ್ ಆಂಡ್ ಬ್ಲ್ಯಾಕ್,
      • ರೆಡ್ ಆಂಡ್ ಬ್ಲ್ಯಾಕ್,
      • ಬ್ಲೂ ಆಂಡ್ ಬ್ಲ್ಯಾಕ್,
      • ಸ್ಪೋರ್ಟ್ಸ್ ರೆಡ್.
      • ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

        ದೇಶದ ದ್ವಿಚಕ್ರ ಪ್ರಯಾಣಿಕ ವಿಭಾಗದಲ್ಲಿ ಶೇಕಡಾ 65ರಷ್ಟು ಮಾರಾಟ ಶೇರನ್ನು ಹೊಂದಿರುವ ಹೀರೊ ನೂತನ ಸ್ಪ್ಲೆಂಡರ್ ಐಸ್ಮಾರ್ಟ್ 100 ಬೈಕ್ ನೊಂದಿಗೆ ಮತ್ತಷ್ಟು ಮಾರಾಟ ವೃದ್ಧಿಯನ್ನು ಗುರಿಯಿರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸ್ಪ್ಲೆಂಡರ್ ಶ್ರೇಣಿಯ ಬೈಕ್ ಗಳು, ಪ್ಯಾಶನ್ ಮತ್ತು ಎಚ್ ಎಫ್ ಡಿಲಕ್ಸ್ ಬ್ರ್ಯಾಂಡ್ ಗಳು ನಿರ್ಣಾಯಕ ಪಾತ್ರ ವಹಿಸಿವೆ.

        ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

        ಅಂದ ಹಾಗೆ ಜೈಪುರದಲ್ಲಿರುವ ಹೀರೊ ಸೆಂಟರ್ ಇನ್ನೋವೇಷನ್ ಆಂಡ್ ಟೆಕ್ನಾಲಜಿ (ಸಿಐಟಿ) ಅಧ್ಯಯನ ಮತ್ತು ಅಭಿವೃದ್ಧಿ ಘಟಕದಲ್ಲಿ ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕನ್ನು ನಿರ್ಮಿಸಲಾಗಿದೆ.

Most Read Articles

Kannada
English summary
Hero Splendor iSmart 110 Launched In India, Priced At Rs. 53,300
Story first published: Thursday, July 14, 2016, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X