ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

By Nagaraja

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ಮುಂದಿನ 18 ತಿಂಗಳುಗಳ ಅವಧಿಯೊಳಗೆ ಎಕ್ಸ್ ಟ್ರೀಮ್ 200 ಎಸ್ ನೆಕ್ಡ್ ಬೈಕ್ ಬಿಡುಗಡೆ ಮಾಡಲಿದೆ. ಈ ಮೂಲಕ ನೆಕ್ಡ್ ಕ್ರೀಡಾ ಬೈಕ್ ವಿಭಾಗಕ್ಕೂ ಎಂಟ್ರಿ ಕೊಡಲಿದೆ.

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಹೀರೊ ಎಕ್ಸ್ ಟ್ರೀಮ್ 200ಎಸ್ ಕಾನ್ಸೆಪ್ಟ್ ತಳಹದಿಯಲ್ಲಿ ನೂತನ ಕ್ರೀಡಾ ಬೈಕ್ ನಿರ್ಮಾಣವಾಗಲಿದೆ.

ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಎಕ್ಸ್ ಟ್ರೀಮ್ ಬೈಕ್, 200 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 17.2 ಎನ್ ಎಂ ತಿರುಗುಬಲದಲ್ಲಿ 18.6 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

ನಿಸ್ಸಂಶವಾಗಿಯೂ 2018ರಲ್ಲಿ ಮುಂದಿನ ಆಟೋ ಎಕ್ಸ್ ಪೋ ಆಯೋಜನೆಯಾಗುವುದರ ಮುಂಚಿತವಾಗಿ ಹೊಸ ಹೀರೊ ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್ ದೇಶದಲ್ಲಿ ಬಿಡುಗಡೆಯಾಗಲಿದೆ.

ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

ಡೈಮಂಡ್ ಫ್ರೇಮ್ ಚಾಸೀ, ಸಂಪ್ರದಾಯಿಕ ಫಾರ್ಕ್, ಮೊನೊಶಾಕ್ ರಿಯರ್ ಸಸ್ಪೆನ್ಷನ್ ನಿಂದ ನಿರ್ಮಾಣಗೊಂಡಿರುವ ಹೀರೊ ಎಕ್ಸ್ ಟ್ರೀಮ್ ನಲ್ಲಿ ಐದು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್ ಹೊಂದಿರಲಿರುವ ಹೀರೊ ಎಕ್ಸ್ ಟ್ರೀಮ್, ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳಿಂದ ಕೂಡಿರಲಿದೆ.

ಹೀರೊ ಮುಂದಿನ ಗುರಿ; ಎಕ್ಸ್ ಟ್ರೀಮ್ 200 ಸಿಸಿ ನೆಕ್ಡ್ ಬೈಕ್

ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚಿ 200 4ವಿ ಮಾದರಿಗಳಿಗೆ ಹೊಸ ಎಕ್ಸ್ ಟ್ರೀಮ್ ಪೈಪೋಟಿಯನ್ನು ಒಡ್ಡಲಿದೆ. ಸದ್ಯ ಚೆನ್ನೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಕೆಟಿಎಂ ಡ್ಯೂಕ್ 1.41 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

Most Read Articles

Kannada
English summary
Hero To Launch 200cc Naked Bike Before Next Auto Expo
Story first published: Friday, July 22, 2016, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X