17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

By Nagaraja

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, 2016ನೇ ಸಾಲಿನ ಮೊದಲಾರ್ಧದಲ್ಲಿ ಜನಪ್ರಿಯ ಹೀರೊ ಸ್ಪ್ಲೆಂಡರ್ ಮಾರಾಟವನ್ನು ಹಿಂದಿಕ್ಕಿರುವ ಹೋಂಡಾ ಆಕ್ಟಿವಾ, ದೇಶದ ನಂ.1 ದ್ವಿಚಕ್ರ ವಾಹನವೆಂಬ ಕೀರ್ತಿಗೆ ಪಾತ್ರವಾಗಿದೆ.

ಸ್ಕೂಟರ್ ಆಗಿರುವ ಹೊರತಾಗಿಯೂ ಬೈಕ್ ಮಾರಾಟವನ್ನೇ ಹಿಂದಿಕ್ಕಿರುವ ಆಕ್ಟಿವಾ ಸಾಧನೆ ಮೆಚ್ಚಲೇಬೇಕಾಗುತ್ತದೆ. ದಣಿವು ರಹಿತ ಸುಲಭ ಚಾಲನೆ, ಗೇರ್ ಲೆಸ್, ಆರಾಮದಾಯಕ, ಅನುಕೂಲ ಮತ್ತು ಮೈಲೇಜ್ ಗಳು ಹೋಂಡಾ ಆಕ್ಟಿವಾಗೆ ವರದಾನವಾಗಿ ಪರಿಣಮಿಸಿದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

17 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷದ ಮೊದಲ ಆರು ತಿಂಗಳ ದೇಶೀಯ ಮಾರಾಟದಲ್ಲಿ ಸ್ಕೂಟರ್ ವೊಂದು ಅಗ್ರಸ್ಥಾನಕ್ಕೇರುತ್ತಿದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

2016 ಜನವರಿಯಿಂದ ಜೂನ್ ತಿಂಗಳ ವರೆಗಿನ ಅವಧಿಯಲ್ಲಿ ಹೋಂಡಾ ಆಕ್ಟಿವಾ ಒಟ್ಟು 1338015 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಈ ಮೂಲಕ ಕಳೆದ ವರ್ಷ ಇದೇ ಅವಧಿಕ್ಕಿಂತಲೂ (1233725) ಶೇಕಡಾ 8ರಷ್ಟು ಮಾರಾಟ ಏರಿಕೆ ಕಂಡಿದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

ತನ್ನ ನಿಕಟ ಪ್ರತಿಸ್ಪರ್ಧಿ ಹೀರೊ ಸ್ಪ್ಲೆಂಡರ್ ಬೈಕನ್ನು ಹಿಂದಕ್ಕಿರುವ ಹೋಂಡಾ ಆಕ್ಟಿವಾ ಕೇವಲ ಒಂದು ವರ್ಷದ ಅವಧಿಯೊಳಗೆ 104290 ಯುನಿಟ್ ಗಳ ಭಾರಿ ಮಾರಾಟ ಏರುಗತಿಯನ್ನು ಸಾಧಿಸಿದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

ಇನ್ನು ಅಚ್ಚರಿಗೊಳಿಸುವ ಸಂಗತಿಯೆಂದರೆ 2002ನೇ ಸಾಲಿನಲ್ಲಿ ಬಿಡುಗಡೆಯ ವೇಳೆ 55,000 ಯುನಿಟ್ ಗಳಿಷ್ಟಿದ್ದ ಆಕ್ಟಿವಾ ಮಾರಾಟವು 2016ನೇ ಆರ್ಥಿಕ ಸಾಲಿಗೆ ತಲುಪಿದಾಗ 2.45 ದಶಲಕ್ಷ ಯುನಿಟ್ ಗಳಿಗೆ ಏರಿಕೆಯಾಗಿರುವುದು ಗಮನಾರ್ಹವೆನಿಸುತ್ತದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

ಅಷ್ಟೇ ಯಾಕೆ ದೇಶದಲ್ಲಿ ಖರೀದಿಸುವ ಪ್ರತಿ ಎರಡನೇ ಆಟೋಮ್ಯಾಟಿಕ್ ಸ್ಕೂಟರ್ ಹೋಂಡಾ ಆಕ್ಟಿವಾ ಆಗಿರುತ್ತದೆ. ಇದು ದೇಶೀಯ ದ್ವಿಚಕ್ರ ವಿಭಾಗದಲ್ಲಿ ಶೇಕಡಾ 15ರಷ್ಟು ಮಾರಾಟವನ್ನು ವಶಪಡಿಸಿಕೊಂಡಿದೆ.

17 ವರ್ಷಗಳ ಬಳಿಕ ಸ್ಪೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

ಆಕ್ಟಿವಾ ಸಂತಸಕ್ಕೆ ಮತ್ತಷ್ಟು ಮೆರಗು ತುಂಬುತ್ತಿರುವಂತೆಯೇ 2016 ಜೂನ್ ತಿಂಗಳ ಮಾರಾಟದಲ್ಲೂ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಈ ಅವಧಿಯಲ್ಲಿ ಒಟ್ಟು 6,97,938 ಯುನಿಟ್ ಗಳಷ್ಟು ಮಾರಾಟವನ್ನು ಆಕ್ಟಿವಾ ದಾಖಲಿಸಿದೆ.

Most Read Articles

Kannada
English summary
Honda Activa No.1 Selling Two-Wheeler For 6 Months Straight
Story first published: Thursday, July 21, 2016, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X