2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಅತಿ ದುಬಾರಿ ಚೀಫ್ ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

By Nagaraja

ಪೊಲರಿಸ್ ಮಾಲಿಕತ್ವದ ಇಂಡಿಯನ್ ಮೋಟಾರ್ ಸೈಕಲ್ ಭಾರತದಲ್ಲಿ ಅತ್ಯಂತ ದುಬಾರಿ 2016 ಇಂಡಿಯನ್ ಚೀಫ್ ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 31.99 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಪ್ರಸಕ್ತ ಸಾಲಿನಲ್ಲಿ ಪೊಲರಿಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ನಾಲ್ಕನೇ ಇಂಡಿಯನ್ ಮೋಟಾರ್ ಸೈಕಲ್ ಬೈಕ್ ಇದಾಗಿದ್ದು, ಸಂಪೂರ್ಣ ಮ್ಯಾಟ್ ಫಿನಿಶ್ ಕಪ್ಪು ವರ್ಣವನ್ನು ಗಿಟ್ಟಿಸಿಕೊಂಡಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಡಾರ್ಕ್ ಹಾರ್ಸ್ ಶ್ರೇಣಿಯಲ್ಲಿ ಚೀಫ್ ಕ್ಲಾಸಿಕ್ ಜೊತೆ ಸಮಾನತೆಯನ್ನು ಹಂಚಿಕೊಂಡಿರುವ 2016 ಇಂಡಿಯನ್ ಚೀಫ್ ಟೈನ್, ತಾಂತ್ರಿಕತೆಯನ್ನು ಹಂಚಿಕೊಂಡಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಕ್ರೋಮ್ ಸ್ಪರ್ಶತೆಯ ಬದಲಾಗಿ ಕಪ್ಪು ವರ್ಣದ ಫೇರಿಂಗ್, ಇಂಧನ ಟ್ಯಾಂಕ್, ಫೆಂಡರ್ ಮತ್ತು ಒಟ್ಟಾರೆ ಮೈಬಣ್ಣವು ಆಕರ್ಷಕವೆನಿಸಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಅಷ್ಟೇ ಯಾಕೆ ಹೆಡ್ರೆಸ್, ಫಾರ್ಕ್, ರಿಯರ್ ವ್ಯೂ ಮಿರರ್, ಹ್ಯಾಂಡಲ್ ಬಾರ್, ಸ್ವಿಚ್, ಟರ್ನ್ ಸಿಗ್ನಲ್, ಟ್ಯಾಂಕ್ ಕನ್ಸಾಲ್, ಎಂಜಿನ್, ಏರ್ ಬಾಕ್ಸ್ ಕವರ್, ಫ್ಲೋರ್ ಬೋರ್ಡ್ ಮತ್ತು ಟೈಲ್ ಲೈಟ್ ಹೌಸಿಂಗ್ ಸಂಪೂರ್ಣವಾಗಿ ಕಪ್ಪು ವರ್ಣಮಯಗೊಳಿಸಲಾಗಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಅಂದ ಹಾಗೆ 2016 ಇಂಡಿಯನ್ ಚೀಫ್ ಟೈನ್ ಡಾರ್ಕ್ ಹಾರ್ಸ್ ನಲ್ಲಿರುವ 1811 ಸಿಸಿ ವಿ ಟ್ವಿನ್ ಥಂಡರ್ ಸ್ಟ್ರೋಕ್ 111 ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 73 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ನಲ್ಲಿ ಶಕ್ತಿ ವರ್ಗಾವಣೆಯಾಗಲಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

46 ಎಂಎಂ ಫ್ರಂಟ್ ಫಾರ್ಕ್, ಮುಂದೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್ ಹಾಗೂ 21 ಲೀಟರ್ ಗಳ ಇಂಧನ ಟ್ಯಾಂಕ್ ಜೋಡಿಸಲ್ಪಟ್ಟಿದೆ. ಬೈಕ್ ನ ಒಟ್ಟಾರೆ ಭಾರ 300 ಕೆ.ಜಿ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ, ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಗಡಿಯಾರ, ತಾಪಮಾನ, ಪ್ರೀಮಿಯಂ ಆಡಿಯೋ ವ್ಯವಸ್ಥೆ ಇದರಲ್ಲಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ರಿಮೋಟ್ ಕೀ ಜೊತೆ ಕೀಲೆಸ್ ಇಗ್ನಿಷನ್ ಇತ್ಯಾದಿ ಸೌಲಭ್ಯಗಳಿರಲಿದೆ.

2016 ಇಂಡಿಯನ್ ಚೀಫ್‌ಟೈನ್ ಡಾರ್ಕ್ ಹಾರ್ಸ್ ಕ್ರೂಸರ್ ಬೈಕ್ ಬಿಡುಗಡೆ

ಇತ್ತೀಚೆಗಷ್ಟೇ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಸ್ಪ್ರಿಂಗ್ ಫೀಲ್ಡ್ ಬೈಕ್ ಬಿಡುಗಡೆಗೊಳಿಸಿತ್ತು. ಅಮೆರಿಕದ ಈ ದೈತ್ಯ ದ್ವಿಚಕ್ರ ವಾಹನ ಸಂಸ್ಥೆಯೀಗ ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣ ಮಾಡುವ ಮೂಲಕ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

Most Read Articles

Kannada
English summary
Polaris Launches Indian Chieftain Dark Horse Cruiser Motorcycle
Story first published: Monday, November 28, 2016, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X