ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

By Nagaraja

ಪೊಲರಿಸ್ ಇಂಡಿಯಾದ ಅಧೀನತೆಯಲ್ಲಿರುವ ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಇಂಡಿಯನ್ ಮೋಟಾರ್ ಸೈಕಲ್ಸ್ ಭಾರತದಲ್ಲಿ ಅತಿ ನೂತನ ಸ್ಕೌಟ್ ಸಿಕ್ಸ್ಟಿ ಬೈಕನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 11.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಇದು ಇಂಡಿಯನ್ ಮೋಟಾರ್ ಸೈಕಲ್ ಭಾರತದಲ್ಲಿ ಒದಗಿಸುತ್ತಿರುವ ಅತಿ ಕಡಿಮೆ ಬೆಲೆ ಬೈಕ್ ಆಗಿರಲಿದೆ. ಅಲ್ಲದೆ ಥಂಡರ್ ಬ್ಲ್ಯಾಕ್, ಇಂಡಿಯನ್ ಮೋಟಾರ್ ಸೈಕಲ್ ರೆಡ್ ಮತ್ತು ಪಿಯರ್ಲ್ ವೈಟ್ ಗಳೆಂಬ ಮೂರು ಆಖರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

ಇಂಡಿಯನ್ ಮೋಟಾರ್ ಸೈಕಲ್ ಸ್ಕೌಂಟ್ ಸಿಕ್ಸ್ಟಿ ವಿತರಣೆ ಪ್ರಕ್ರಿಯೆಯು 2016 ಜುಲೈ ತಿಂಗಳಿನಿಂದ ಪ್ರಾರಂಭವಾಗಲಿದೆ.

ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

ಅತ್ಯಂತ ಶಕ್ತಿಶಾಲಿ 999 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಇಂಡಿಯನ್ ಸ್ಕೌಟ್, 88.8 ಎನ್ ಎಂ ತಿರುಗುಬಲದಲ್ಲಿ 78 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸೀಟು, ಹ್ಯಾಂಡಲ್ ಬಾರ್, ಫೂಟ್ ಪೆಗ್ ನಿಂದ ಆರಂಭವಾಗಿ ಸರಿ ಸುಮಾರು 200 ರಷ್ಟು ಆಕ್ಸೆಸರಿಗಳನ್ನು ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೈಕ್ ನಲ್ಲಿ ನೀಡಲಾಗುತ್ತಿದೆ.

ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

ಶ್ರೀಮಂತ ಬೈಕ್ ಖರೀದಿಗಾರರಿಗೆ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಲು ಹಗುರ ಭಾರದ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಪರಿಪೂರ್ಣ ಆಯ್ಕೆಯಾಗಿರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

  • ಚಕ್ರಾಂತರ: 1562
  • ಸೀಟು ಎತ್ತರ: 643
  • ಗ್ರೌಂಡ್ ಕ್ಲಿಯರನ್ಸ್: 135
  • ಒಟ್ಟಾರೆ ಅಗಲ: 880
  • ಒಟ್ಟಾರೆ ಎತ್ತರ: 1207
  • ಒಟ್ಟಾರೆ ಉದ್ದ: 2311
  • ಇಂಧನ ಟ್ಯಾಂಕ್ ಸಾಮರ್ಥ್ಯ: 12.5 ಲೀಟರ್
  • ಭಾರ: 254 ಕೆ.ಜಿ
  • ಇಂಡಿಯನ್ ಮೋಟಾರ್ ಸೈಕಲ್ ಅಗ್ಗದ ಬೈಕ್ ಬಿಡುಗಡೆ

    ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಭಾರತವನ್ನು ತಲುಪುತ್ತಿದೆ. ಹಾಗೊಂದು ವೇಳೆ ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತವನ್ನು ಅನುಸರಿಸಿದ್ದಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ಬೆಲೆ ಕಾಪಾಡಬಹುದಿತ್ತು. ಸದ್ಯಕ್ಕಂತೂ ಸಂಸ್ಥೆಗೆ ಈ ಸಂಬಂಧ ಯಾವುದೇ ಯೋಚನೆಗಳಿಲ್ಲ.

Most Read Articles

Kannada
English summary
Indian Motorcycle Launch Most Affordable Model In India Called Scout Sixty
Story first published: Tuesday, May 24, 2016, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X