ಲೀಟರ್‌‌ಗೆ 148 ಕೀ.ಮೀ. ಮೈಲೇಜ್ ನೀಡುವ ಜಲಜನಕ ಚಾಲಿತ ಬೈಕ್

By Nagaraja

ತಮಿಳುನಾಡು ಮೂಲದ ಉತ್ಸಾಹಿ ಎಂಜಿನಿಯರ್ ವಿದ್ಯಾರ್ಥಿಗಳ ತಂಡ ಜಲಜನಕದಿಂದ ಚಾಲಿತ ಬೈಕ್ ವೊಂದನ್ನು ಅಭಿವೃದ್ಧಿಪಡಿಸಿದ್ದು, ಪ್ರತಿ ಲೀಟರ್ ಗೆ ಬರೋಬ್ಬರಿ 148 ಕೀ.ಮೀ. ಮೈಲೇಜ್ ನೀಡುವಷ್ಟು ಸಮರ್ಥವಾಗಿದೆ.

ಭಾರತದ ಟಾಪ್ 10 ಮೈಲೇಜ್ ಕಾರುಗಳು

ಆರ್‌ವಿಎಸ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಆಟೋಮೊಬೈಲ್ ವಿದ್ಯಾರ್ಥಿಗಳಾದ ಆರ್. ಬಾಲಾಜಿ, ಗೌತಮ್ ರಾಜ್, ಜೆರ್ರಿ ಜಾರ್ಜ್ ಮತ್ತು ಖಾಲಿದ್ ಇಬ್ರಾಹಿಂ ಈ ವಿನೂತನ ಸಾಧನೆ ಮಾಡಿದ್ದಾರೆ.

ಲೀಟರ್‌‌ಗೆ 148 ಕೀ.ಮೀ. ಮೈಲೇಜ್ ನೀಡುವ ಜಲಜನಕ ಚಾಲಿತ ಬೈಕ್

ಜಾಗತಿಕ ತಾಪಮಾನಕ್ಕೆ ಒಗ್ಗುವಂತಹ ಈ ವಿಶಿಷ್ಟ ವಿನ್ಯಾಸಿತ ಬೈಕ್ ಪರಿಸರ ಸ್ನೇಹಿಯಾಗಿದ್ದು, ಕಡಿಮೆ ವಾಯು ಮಾಲಿನ್ಯವನ್ನು ಹೊಂದಿದೆ. ಅಲ್ಲದೆ ಪರ್ಯಾಯ ಇಂಧನ ವ್ಯವಸ್ಥೆ ಹುಡುಕುತ್ತಿರುವ ವಾಹನ ಕ್ಷೇತ್ರಕ್ಕೆ ಸೂಕ್ತ ಬದಲಿ ವ್ಯವಸ್ಥೆಯಾಗಿರಲಿದೆ.

ಲೀಟರ್‌‌ಗೆ 148 ಕೀ.ಮೀ. ಮೈಲೇಜ್ ನೀಡುವ ಜಲಜನಕ ಚಾಲಿತ ಬೈಕ್

ಪ್ರಾಧ್ಯಾಪಕ ಲಕ್ಷ್ಮಣನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜಲಜನಕ ಚಾಲಿತ ದ್ವಿಚಕ್ರ ವಾಹನ ನಿರ್ಮಿಸಿದ್ದಾರೆ. ಈಗಿರುವ ಬೈಕ್ ಗಳನ್ನು ಜಲಜನಕ ಬೈಕಾಗಿ ಪರಿವರ್ತಿಸಬಹುದು ಎಂದು ತಂಡ ಅಭಿಪ್ರಾಯಪಟ್ಟಿದೆ.

ಲೀಟರ್‌‌ಗೆ 148 ಕೀ.ಮೀ. ಮೈಲೇಜ್ ನೀಡುವ ಜಲಜನಕ ಚಾಲಿತ ಬೈಕ್

ಪೆಟ್ರೋಲ್‌ಗೆ ಹೋಲಿಸಿದರೆ ಜನಜನಕಕ್ಕೆ ಪ್ರತಿ ಲೀಟರ್ ಗೆ 30ರುಪಾಯಿಗಳಷ್ಟೇ ತಗುಲಲಿದೆ. ಅಲ್ಲದೆ ವೈಬ್ರೇಷನ್ ಕೂಡಾ ಕಡಿಮೆ ಆಗಿರಲಿದೆ. ಒಟ್ಟಿನಲ್ಲಿ ಪರಿಸರ ಸ್ನೇಹಿ ಜಲಜನಕ ಬೈಕ್ ನಿರ್ಮಿಸಲು 7,000 ರುಪಾಯಿಗಳಷ್ಟು ಖರ್ಚು ತಗುಲಿದೆ.

ಲೀಟರ್‌‌ಗೆ 148 ಕೀ.ಮೀ. ಮೈಲೇಜ್ ನೀಡುವ ಜಲಜನಕ ಚಾಲಿತ ಬೈಕ್

ರಾಸಾಯನಿಕ ಮೂಲಧಾತುವಾಗಿರುವ ಜಲಜನಕ ವಿಶ್ವದೆಲ್ಲೆಡೆ ಹೇರಳವಾಗಿ ಲಭ್ಯವಾಗುತ್ತಿದೆ. ಇದೊಂದು ಸರಳ ಮತ್ತು ಹಗುರವಾದ ಮೂಲಧಾತುವಾಗಿದೆ. ಇದಕ್ಕೆ ಬಣ್ಣ, ರುಚಿ, ವಾಸನೆ ಇರುವುದಿಲ್ಲ. ಇದರಲ್ಲಿ ಒಂದು ಪ್ರೋಟಾನ್ ಮತ್ತು ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ.

ಇವನ್ನೂ ಓದಿ

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ - ಸಂಪೂರ್ಣ ಸುದ್ದಿ ಓದಲು ಕ್ಲಿಕ್ಕಿಸಿ

ಇವನ್ನೂ ಓದಿ

ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಬಹುಮೂಲ್ಯ ಟಿಪ್ಸ್‌ಗಳು - ಮುಂದಕ್ಕೆ ಓದಿ

Most Read Articles

Kannada
English summary
Indian Students Create Eco-Friendly Bike That Gives 148km/l Mileage
Story first published: Thursday, May 5, 2016, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X