ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

By Nagaraja

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಇಂಡಿಯಾ ಕವಾಸಕಿ ಮೋಟಾರ್, ದೇಶದಲ್ಲಿ ಸದ್ದಿಲ್ಲದೆ ತನ್ನ ಜನಪ್ರಿಯ ನಿಂಜಾ 650 ಮತ್ತು ಇಆರ್-6ಎನ್ ಪರಿಷ್ಕೃತ ಆವೃತ್ತಿಗಳನ್ನು ಪರಿಚಯಿಸಿದೆ. ನೂತನ ಬೈಕ್ ಗಳು ಹೊಸ ಬಣ್ಣ, ಕ್ರೀಡಾತ್ಮಕ ಚಕ್ರದೊಂದಿಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಗಿಟ್ಟಿಸಿಕೊಂಡಿದೆ.

ಪ್ರತಿ ವರ್ಷದಲ್ಲೂ ತನ್ನ ಶ್ರೇಣಿಯ ಬೈಕ್ ಗಳಿಗೆ ಹೊಸ ರೂಪ ಕಲ್ಪಿಸಿಕೊಡುವುದರಲ್ಲಿ ಕವಾಸಕಿ ಮಗ್ನವಾಗಿದೆ. ಇದಕ್ಕೂ ಮೊದಲು ನಿಂಜಾ 300, ಝಡ್ ಎಕ್ಸ್-10ಆರ್, ಝಡ್800 ಮತ್ತು ಝಡ್ ಎಕ್ಸ್-14ಆರ್ 2016 ಆವೃತ್ತಿಗಳನ್ನು ಪರಿಚಯಿಸಿತ್ತು.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಇಆರ್-6ಎಫ್ ಎಂಬುದಾಗಿಯೂ ಗುರುತಿಸ್ಪಟ್ಟಿರುವ ಕವಾಸಕಿ ನಿಂಜಾ 650 ಕ್ರೀಡಾ ಟೂರರ್ ಬೈಕ್, ಹೊಸ ಗ್ರಾಫಿಕ್ಸ್ ಗಳೊಂದಿಗೆ ತಾಜಾತನವನ್ನು ಪಡೆದಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಇನ್ನೊಂದೆಡೆ ಕವಾಸಕಿ ಇಆರ್-6ಎನ್ ಆವೃತ್ತಿಯು ಎಲ್ಲ ಕಪ್ಪು ವರ್ಣದ ಬಣ್ಣದ ಜೊತೆಗೆ ನೂತನ ಗ್ರಾಫಿಕ್ಸ್ ಗಳನ್ನು ಪಡೆಯಲಿದೆ. ಇಲ್ಲೂ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆಗಳಿರುವುದಿಲ್ಲ.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಕವಾಸಕಿ ಜೋಡಿ ಬಣ್ಣಗಳ ಪ್ರಮುಖ ವ್ಯತ್ಯಾಸವೆನೆಂದರೆ ನಿಂಜಾ 650 ಸಂಪೂರ್ಣ ಫೇರ್ಡ್ ಬೈಕ್ ಎನಿಸಿಕೊಂಡಲ್ಲಿ ಇಆರ್-6ಎನ್ ನೆಕ್ಡ್ ಬೈಕಾಗಿರಲಿದೆ.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಕವಾಸಕಿ ನಂಜಾ 650 ಬೈಕ್ ಡನ್ ಲಪ್ ರೋಡ್ ಸ್ಮಾರ್ಟ್ II ಚಕ್ರಗಳನ್ನು ಪಡೆದಿದ್ದು, ಆಫ್ ರೋಡ್ ಮತ್ತು ಟೂರಿಂಗ್ ಚಾಲನೆಗೆ ಹೆಚ್ಚು ಯೋಗ್ಯವೆನಿಸಿದೆ. ಮತ್ತೊಂದೆಡೆ ಇಆರ್-6ಎನ್, ಡನ್ ಲಪ್ ಸ್ಪೋರ್ಟ್ ಮ್ಯಾಕ್ಸ್ ಡಿ214 ಚಕ್ರಗಳನ್ನು ಪಡೆಯಲಿದೆ.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಈ ಎರಡು ಬೈಕ್ ಗಳು 649 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 64 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸದಲ್ಲದೆ ಪರಿಷ್ಕೃತ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಎಂಟ್ರಿ

ಬಲ್ಲ ಮೂಲಗಳ ಪ್ರಕಾರ ಈ ಎರಡು ಮಾದರಿಗಳು ಈಗಾಗಲೇ ಡೀಲರುಗಳನ್ನು ತಲುಪಿದೆ. ಆದರೆ ಭದ್ರತೆಯತ್ತ ದೃಷ್ಟಿ ಹಾಯಿಸಿದಾಗ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಕೊರತೆಯನ್ನು ಕಾಡಲಿದೆ.

Most Read Articles

Kannada
English summary
Kawasaki Ninja 650 & ER-6n Indian Models Get Updated
Story first published: Saturday, July 23, 2016, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X