ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

By Nagaraja

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ಸಂಸ್ಥೆ ಕವಾಸಕಿ, ಭಾರತದಲ್ಲಿ ತನ್ನ ಶ್ರೇಣಿಯ ದುಬಾರಿ ಬೈಕ್ ಗಳನ್ನು ಪರಿಷ್ಕೃತಗೊಳಿಸಿದೆ. ಕವಾಸಕಿ ನಿಂಜಾ ಎಚ್2, ಲಿಮಿಟೆಡ್ ಎಡಿಷನ್ ನಿಂಜಾ ಎಚ್2 ಕಾರ್ಬನ್ ಮತ್ತು ನಿಂಜಾ ಎಚ್2ಆರ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ಇದು ಶ್ರೀಮಂತ ದ್ವಿಚಕ್ರ ವಾಹನ ವಿಭಾಗದಲ್ಲಿ ಮತ್ತಷ್ಟು ಬಲವರ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ನಿಂಜಾ ಎಚ್2 ಮತ್ತು ಎಚ್2ಆರ್ ಅನೇಕ ಘಟಕಗಳನ್ನು ಜೊತೆಯಾಗಿ ಹಂಚಿಕೊಳ್ಳುತ್ತಿದೆ. ಇವುಗಳಲ್ಲಿ 998 ಸಿಸಿ 4 ಸಿಲಿಂಡರ್ ಎಂಜಿನ್, ಸೂಪರ್ ಚಾರ್ಜರ್, ಟ್ರೆಲ್ಲಿಸ್ ಫ್ರೇಮ್, ಕಾಂಪಾಕ್ಟ್ ಸೂಪರ್ ಬೈಕ್ ಆಯಾಮ, ಏರೋಡೈನಾಮಿಕ್ ದೇಹ ರಚನೆ, ಸಿಂಗಲ್ ಸೈಡಡ್ ಸ್ವಿಂಗ್ ಆರ್ಮ್, ಪವರ್ ಫುಲ್ ಬ್ರೆಂಬೊ ಬ್ರೇಕ್ ಇತ್ಯಾದಿ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

2016ರಲ್ಲಿ ರಸ್ತೆ ಮಾನ್ಯತೆ ಪಡೆದ ನಿಂಜಾ ಎಚ್2, ಹೊಸತಾದ ಅಸಿಸ್ಟ್ ಮತ್ತು ಸ್ಲಿಪರ್ ಕ್ಲಚ್ ಪಡೆದಿತ್ತಲ್ಲದೆ ದೂರ ಪ್ರಯಾಣ ವೇಳೆ ದಣಿವು ಕಡಿಮೆ, ಆಕ್ರಮಣಕಾರಿ ಡೌನ್ ಶಿಫ್ಟ್ ಮತ್ತು ಲಿವರ್ ಪ್ರೆಶರ್ ಕ್ರಿಯಾತ್ಮಕತೆಯಲ್ಲಿ ಶೇಕಡಾ 40ರಷ್ಟು ಹಗುರವೆನಿಸಿಕೊಂಡಿತ್ತು.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ಪರಿಷ್ಕೃತ ನಿಂಜಾ ಎಚ್2 ಮತ್ತು ಎಚ್2ಆರ್ ಅನೇಕ ಬದಲಾವಣೆಗಳನ್ನು ಪಡೆದಿದೆ. ಇದೀಗ ಇನರ್ಷಿಯಲ್ ಮೆಷರ್ ಮೆಂಟ್ ಯುನಿಟ್ (ಐಎಂಯು), ಪರಿಷ್ಕೃತ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಮತ್ತು ಕವಾಸಕಿ ಇಂಟೆಲಿಜೆಂಟ್ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ಪ್ರಸ್ತುತ ಪ್ಯಾಕೇಜ್ ನಲ್ಲಿ ಯುರೋ IV ಮಾಲಿನ್ಯ ಮಟ್ಟವನ್ನು ಕಾಯ್ದುಕೊಳ್ಳುವ ಪರಿಷ್ಕೃತ ಎಕ್ಸಾಸ್ಟ್ ಸಿಸ್ಟಂ, ಕ್ಲಚ್ ಲೆಸ್ ಡೌನ್ ಶಿಫ್ಟ್, ಕವಾಸಕಿ ನೈಜ ಆಕ್ಸೆಸರಿಗಳನ್ನು ಒಳಗೊಂಡಿರಲಿದೆ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ಕವಾಸಕಿ ನೈಜ ಆಕ್ಸೆಸರಿಗಳ ಮೂಲಕ ಚಾಲಕರಿಗೆ ಚಾಲನಾ ಸ್ಥಾನವನ್ನು ತಮಗೆ ತಕ್ಕಂತೆ ಮಾರ್ಪಾಡುಗೊಳಿಸಬಹುದಾಗಿದೆ. ಇದಕ್ಕಾಗಿ ಎರ್ಗೊ-ಫಿಟ್ ಹ್ಯಾಂಡಲ್ ಬಾರ್ ಕಿಟ್, ಸಪ್ಲೇಯರ್ ಸಸ್ಪೆನ್ಷನ್ ಆಕ್ಷನ್, ಹೈ ಗ್ರೇಡ್ ಓಹ್ಲಿನ್ ಟಿಟಿಎಕ್ಸ್ ರಿಯರ್ ಶಾಕ್, ಸುಧಾರಿತ ಇನ್ಸ್ಟ್ರುಮೆಂಟೇಷನ್, ಪರಿಷ್ಕೃತ ಬೂಸ್ಟ್ ಇಂಡಿಕೇಟರ್ ಮತ್ತು ಐಎಂಯು ಇಂಡಿಕೇಟರ್ ಗಳನ್ನು ಒಳಗೊಂಡಿರಲಿದೆ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ಕಾರ್ಬನ್ ಫೈಬರ್ ಮುಸುಕನ್ನು ಹೊಂದಿರುವ ನಿಂಜಾ ಎಚ್2 ಕಾರ್ಬನ್ ಸಹ ಸೇರಿಕೊಂಡಿದೆ. ಇದು ಸೀಮಿತ ಸಂಖ್ಯೆಯ 120 ಯುನಿಟ್ ಗಳಷ್ಟು ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

ಕವಾಸಕಿ ಪರಿಷ್ಕೃತ ನಿಂಜಾ ಎಚ್2, ಎಚ್2 ಕಾರ್ಬನ್, ಎಚ್2ಆರ್ ಬಿಡುಗಡೆ

ಎಂಜಿನ್ ಬಲಬದಿಯಲ್ಲಿರುವ ಸೂಪರ್ ಚಾರ್ಜರ್ ಪ್ಲೇಟ್ ನಲ್ಲಿ ಪ್ರತಿಯೊಂದು ಎಚ್2 ಕಾರ್ಬನ್ ವೈಯಕ್ತಿಕರಣಗೊಳಿಸಲಾಗುವುದು. ಕವಾಸಕಿ ಸಿಲ್ವರ್ ಮಿರರ್ ಪೈಂಟ್ ಮಿರರ್ ಸಹ ಬಳಕೆ ಮಾಡಲಾಗಿದೆ.

Most Read Articles

Kannada
English summary
Kawasaki Launch The Updated Ninja H2, H2R, And The H2 Carbon In India
Story first published: Monday, October 17, 2016, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X