ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಭಾರತದಲ್ಲಿ ಕ್ಲಾಸಿಕ್ ಶೈಲಿಯ ಬೈಕನ್ನು ಕವಾಸಕಿ ಬಿಡುಗಡೆಗೊಳಿಸಲಿದೆ.

By Nagaraja

ಭಾರತದಲ್ಲಿ ದುಬಾರಿ ಸೂಪರ್ ಬೈಕ್ ಗಳ ದೊಡ್ಡ ಸಂಗ್ರಹವನ್ನೇ ಹೊಂದಿರುವ ಜಪಾನ್ ಮೂಲದ ಕವಾಸಕಿ, ಈಗ ಸಾಂಪ್ರದಾಯಿಕ ಸ್ಪರ್ಶವನ್ನು ತುಂಬುತ್ತಿದ್ದು ರೆಟ್ರೊ ಕ್ಲಾಸಿಕ್ ಶೈಲಿಯ ಮೋಟಾರ್ ಸೈಕಲ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಅತಿ ನೂತನ ಕವಾಸಕಿ ಡಬ್ಲ್ಯು800 ಈಗಾಗಲೇ ಡೀಲರುಗಳನ್ನು ತಲುಪಿದ್ದು, ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ನೆರೆಯ ಇಂಡೋನೇಷ್ಯಾ ಮಾರುಕಟ್ಟೆಯನ್ನು ಕವಾಸಕಿ ಡಬ್ಲ್ಯು800 ತಲುಪಿದ್ದು, ಪ್ರಸ್ತುತ ಭಾರತದತ್ತ ಹೆಜ್ಜೆಯನ್ನಿಟ್ಟಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಸಾಂಪ್ರದಾಯಿಕ ಮೋಟಾರು ಸವಾರಿ ಇಷ್ಟಪಡುವ ವಾಹನ ಪ್ರೇಮಿಗಳಿಗೆ ತಕ್ಕುದಾಗಿ ವೃತ್ತಕಾರಾದ ಹೆಡ್ ಲೈಟ್, ಇಂಧನ ಟ್ಯಾಂಕ್, ಉದ್ದವಾದ ಸೀಟು, ಕ್ರೋಮ್ ಮಡ್ ಗಾರ್ಡ್, ಸ್ಪೋಕ್ ಚಕ್ರಗಳು, ಕಪ್ಪು ಸ್ಪರ್ಶಿತ ಸೈಲನ್ಸರ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಕಾಯಿಲ್ ಸ್ಪ್ರಿಂಗ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ವ್ಯವಸ್ಥೆಯು ಜೋಡಣೆಯಾಗಲಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಇನ್ನು ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದರಲ್ಲಿರುತ್ತದೆ. ಅಲ್ಲದೆ ಎಬಿಎಸ್ ಕೊರತೆಯನ್ನು ಅನುಭವಿಸಲಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

773 ಸಿಸಿ ವಿ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕವಾಸಕಿ ಡಬ್ಲ್ಯು800, 60 ಎನ್ ಎಂ ತಿರುಗುಬಲದಲ್ಲಿ 48 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಭಾರತದಲ್ಲಿ 10 ಲಕ್ಷ ರುಪಾಯಿಗಳಿಗೂ ಹೆಚ್ಚು ದುಬಾರಿಯೆನಿಸಲಿರುವ ಕವಾಸಕಿ ಡಬ್ಲ್ಯು800 ಕಂಪ್ಲೀಟ್ ಬಿಲ್ಟ್ ಯುನಿಟ್ ಹಾದಿಯಲ್ಲಿ ದೇಶವನ್ನು ತಲುಪಲಿದೆ.

ಸೂಪರ್ ಬೈಕ್ ವೀರ ಕವಾಸಕಿಯಿಂದ ಕ್ಲಾಸಿಕ್ ಬೈಕ್ ಭಾರತಕ್ಕೆ

ಇನ್ನು ಅಂತಿಮವಾಗಿ ದೇಶದಲ್ಲಿ ಟ್ರಯಂಪ್ ಬೊನ್ ವಿಲ್ ಸ್ಟ್ರೀನ್ ಟ್ವಿನ್ ಮತ್ತು ಡುಕಾಟಿ ಸ್ಕ್ಯಾಂಬ್ಲರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Most Read Articles

Kannada
English summary
Kawasaki W800 Modern Classic, India Launch By Early 2017
Story first published: Monday, December 5, 2016, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X