ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಬಿಎಸ್ ಎ ಕಂಪನಿಯನ್ನು ಖರೀದಿಸುವ ಮೂಲಕ ಜಾಗತಿಕ ವಾಹನ ವ್ಯಾಪಾರದಲ್ಲಿ ಮಹೀಂದ್ರ ದೊಡ್ಡ ಹೆಜ್ಜೆಯನ್ನೇ ಮುಂದಿಟ್ಟಿದೆ.

By Nagaraja

ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಬ್ರಿಟನ್ ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ ಬರ್ಮಿಂಗ್ ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿ (ಬಿಎಸ್ಎ) ಯನ್ನು ಖರೀದಿಸಿದೆ. ಮಹೀಂದ್ರ ಉಪಾಂಗ ಸಂಸ್ಥೆಯಾಗಿರುವ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಟಿಮೆಡ್, ಬರೋಬ್ಬರಿ 28 ಕೋಟಿ ರುಪಾಯಿಗಳಿಗೆ ಬಿಎಸ್ ಎ ಕಂಪನಿಯನ್ನು ತನ್ನದಾಗಿಸಿಕೊಂಡಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಬಿಎಸ್ ಎ ಸಂಸ್ಥೆಯ ಶೇಕಡಾ 100ರಷ್ಟು ಶೇರನ್ನು ಮಹೀಂದ್ರ ಖರೀದಿಸಿದ್ದು, ತನ್ಮೂಲಕ ಕ್ಲಾಸಿಕ್ ಮೋಟಾರ್ ಸೈಕಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಇದರೊಂದಿಗೆ ಬಿಎಸ್ ಎ ನೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಲು ಮಹೀಂದ್ರಗೆ ಸಾಧ್ಯವಾಗಲಿದೆ. ಇದು ಬ್ರಿಟನ್ ಹೊರತಾಗಿ ಜಪಾನ್, ಸಿಂಗಾಪುರ, ಮಲೇಷ್ಯಾ, ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಕಳೆದ ವರ್ಷ ಪ್ಯೂಜೊ ಮೋಟಾರ್ ಸೈಕಲ್ (ಪಿಎಂಟಿಸಿ) ಶೇಕಡಾ 51ರಷ್ಟು ಶೇರನ್ನು ಮಹೀಂದ್ರ ವಶಪಡಿಸಿಕೊಂಡಿತ್ತು. ಈಗ ಪಿಎಸ್ ಎ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು, ಭವಿಷ್ಯದ ಯೋಜನೆಗಳು ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಆಗಲೇ ಫಿನಿನ್ ಫರಿನಾ ವಿನ್ಯಾಸ ಸಂಸ್ಥೆ ಹಾಗೂ ಸ್ಯಾಂಗ್ಯೊಂಗ್ ವಾಹನ ಸಂಸ್ಥೆಗಳನ್ನು ಖರೀದಿಸಿರುವ ಮಹೀಂದ್ರ ಕೈನಾಟಿಕ್ ನಿಂದ ಎಸ್ ವೈಎಂ ಹಾಗೂ ರೇವಾ ಎಲೆಕ್ಟ್ರಿಕ್ ಕಾರು ಸಂಸ್ಥೆಗಳನ್ನು ತನ್ನದಾಗಿಸಿಕೊಂಡಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಚರಿತ್ರೆಯತ್ತ ಕಣ್ಣಾಯಿಸಿದಾಗ ಬಿಎಸ್ ಎ 1910ನೇ ಇಸವಿಯಲ್ಲಿ ಮೊದಲ ಮೋಟಾರ್ ಸೈಕಲ್ ಹೊರತಂದಿತ್ತು. ಒಂದು ಹಂತದಲ್ಲಿ ಟ್ರಯಂಪ್ ಬ್ರಾಂಡ್ ಅನ್ನು ಹೊಂದಿದ್ದ ಬಿಎಸ್ ಎ ವಿಶ್ವದ ಅತಿ ದೊಡ್ಡ ಮೋಟಾರ್ ಸೈಕಲ್ ನಿರ್ಮಾಣ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಳಿಕ 1970ರಲ್ಲಿ ನಿರ್ಮಾಣವನ್ನು ಸ್ಥಗಿತಗೊಳಿಸಿತ್ತು.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಪ್ರಸ್ತುತ ಬಿಎಸ್ ಎ ಕ್ಲಾಸಿಕ್ ಮೋಟಾರ್ ಸೈಕಲ್ ಗಳನ್ನು ಮರು ನಿರ್ಮಿಸಿ ಬಿಡುಗಡೆ ಮಾಡುವ ಯೋಜನೆಯನ್ನು ಮಹೀಂದ್ರ ಹೊಂದಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಸ್ಕೂಟರ್, ಬೈಕ್ ಹೊಂದಿರುವ ಮಹೀಂದ್ರ 300 ಸಿಸಿ ಮೊಜೊ ಬೈಕ್ ಕಣಕ್ಕಿಳಿಸುವ ಮೂಲಕ ಪ್ರೀಮಿಯಂ ಎಂಟ್ರಿ ಲೆವೆಲ್ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಬಲಪಡಿಸಿತ್ತು.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ವಿಶ್ವ ದರ್ಜೆಯ ಗುಣಮಟ್ಟದ ದ್ವಿಚಕ್ರ ವಾಹನಗಳನ್ನು ನೀಡಲು ಮಹೀಂದ್ರ ಬದ್ಧವಾಗಿದೆ. ಬಿಎಸ್ ಎ ಸಂಸ್ಥೆಯನ್ನು ಖರೀದಿಸುವುದರೊಂದಿಗೆ ಮಹೀಂದ್ರ ದೊಡ್ಡ ಹೆಜ್ಜೆಯನ್ನೇ ಮುಂದಿಟ್ಟಿದೆ.

ದೊಡ್ಡ ಹೆಜ್ಜೆ; ಮಹೀಂದ್ರ ತೆಕ್ಕೆಗೆ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆ

ಬಿಎಸ್ ಎ, ಪ್ಯೂಜೊಗಳಂತಹ ಐಕಾನಿಕ್ ಸಂಸ್ಥೆಗಳು ತನ್ನ ತೆಕ್ಕೆಗೆ ಸೇರುವುದರೊಂದಿಗೆ ನೂತನ ಉತ್ಪನ್ನಗಳನ್ನು ಅಭಿವೃದ್ಧಿ ಹಾಗೂ ವಿನ್ಯಾಸಗೊಳಿಸಲು ಮಹೀಂದ್ರಗೆ ಹಾದಿ ಸುಲಭವಾಗಲಿದೆ.

Most Read Articles

Kannada
English summary
Mahindra Buys Motorcycle Manufacturer BSA Company
Story first published: Tuesday, October 25, 2016, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X