2 ಲಕ್ಷ ರು.ಗಳೊಳಗೆ ಲಭ್ಯವಿರುವ 7 ಶಕ್ತಿಶಾಲಿ ಬೈಕ್‌ಗಳು

By Nagaraja

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆ ಬದಲಾವಣೆ ಪರ್ವದಲ್ಲಿದ್ದು, ವಾಹನ ಪ್ರೇಮಿಗಳು ಹೆಚ್ಚು ಶಕ್ತಿಶಾಲಿ ಬೈಕ್ ಗಳತ್ತ ವಾಲುತ್ತಿದ್ದಾರೆ. ಎಂಟ್ರಿ ಲೆವೆಲ್ 150 ಸಿಸಿ ವಿಭಾಗದಿಂದ ಹಿಡಿದು ಈಗ ಹೆಚ್ಚು ಶಕ್ತಿಶಾಲಿ ಕ್ರೀಡಾ ಬೈಕ್ ಗಳನ್ನು ಕೊಳ್ಳುವತ್ತ ಒಲವು ತೋರುತ್ತಿದ್ದಾರೆ.

ಕ್ರೀಡಾ ಬೈಕ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿರುವ ಪ್ರಮುಖ ವಾಹನ ಸಂಸ್ಥೆಗಳು ದೇಶದತ್ತ ಚಿತ್ತ ಹಾಯಿಸಿದೆ. ಇದರೊಂದಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ಏರ್ಪಟ್ಟಿದೆ. ಪ್ರಸ್ತುತ ಈ ಲೇಖನದಲ್ಲಿ ಎರಡು ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ಲಭ್ಯವಿರುವ ಏಳು ಆಕರ್ಷಕ ಬೈಕ್ ಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಕೆಟಿಎಂ 390 ಡ್ಯೂಕ್

ಕೆಟಿಎಂ 390 ಡ್ಯೂಕ್

ಭಾರತ ಮಾರುಕಟ್ಟೆಯಲ್ಲಿ ಆಗಲೇ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಿರುವ ಕೆಟಿಎಂ ಡ್ಯೂಕ್ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಮೈಗೂಡಿಸಿಕೊಂಡು ಬಂದಿದೆ. ಕೇಸರಿ ಹಾಗೂ ಕಪ್ಪು ವರ್ಣ ಮಿಶ್ರಿತ ಕೆಟಿಎಂ ಡ್ಯೂಕ್, ತನ್ನ ನಿರ್ವಹಣೆಯಿಂದಲೇ ಗಮನ ಸೆಳೆದಿದೆ.

 ಕೆಟಿಎಂ 390 ಡ್ಯೂಕ್

ಕೆಟಿಎಂ 390 ಡ್ಯೂಕ್

373.2 ಸಿಸಿ 1 ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕೆಟಿಎಂ 390 ಡ್ಯೂಕ್, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇದರ ಎಬಿಎಸ್ ಮಾದರಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.95 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್

ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಐಕಾನಿಕ್ ರಾಯಲ್ ಎನ್ ಫೀಲ್ಡ್ ಸಾಲಿಗೆ ಸೇರಿರುವ ನೂತನ ಬೈಕ್ ಇದಾಗಿದೆ. ಅಡ್ವೆಂಚರ್ ಟೂರರ್ ಬೈಕ್ ಎಂಬ ಪಟ್ಟ ಕಟ್ಟಿಕೊಂಡಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಸಾಹಸ ಪ್ರೇಮಿಗಳಿಗೆ ರಸದೌತಣವನ್ನು ನೀಡಲಿದೆ. ಇದರ ಬೆಂಗಳೂರು ಆನ್ ರೋಡ್ ಬೆಲೆ 1.84 ಲಕ್ಷ ರು.ಗಳಾಗಿದೆ. ದೆಹಲಿಯಲ್ಲಿದ್ದು 1.78 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್

ರಾಯಲ್ ಎನ್ ಫೀಲ್ಡ್ ಹಿಮಾಲಯನ್

411 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿhttp://jupiter.greynium.com/index.php#dashboard_image_sliderಯನ್ನು ಉತ್ಪಾದಿಸಲಿದೆ.

ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

ಅಲ್ಟಿಮೇಟ್ ಹೈವೇ ಕ್ರೂಸರ್ ಬೈಕ್ ಆಗಿರುವ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500 ಕ್ಲಾಸಿಕ್ ಚಾಲನಾ ಅನುಭವವನ್ನು ನೀಡಲಿದೆ. ಇದರಲ್ಲಿರುವ 499 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಏರ್ ಕೂಲ್ಡ್ ಎಂಜಿನ್ 41.3 ಎನ್ ಎಂ ತಿರುಗುಬಲದಲ್ಲಿ 27.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

ದೆಹಲಿ ಎಕ್ಸ್ ಶೋ ರೂಂ ಬೆಲೆ 1.79 ಲಕ್ಷ ರು.ಗಳಷ್ಟು ದುಬಾರಿಯೆನಿಸಿರುವ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500, ತನ್ನ ನಿರ್ಮಾಣ ಗುಣಮಟ್ಟದಿಂದಲೇ ಗಮನ ಸೆಳೆದಿದೆ.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿರುವ ಮಹೀಂದ್ರ ಮೊಜೊ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 1.68 ಲಕ್ಷ ರು.ಗಳಾಗಿದೆ. ಇದರಲ್ಲಿರುವ 295 ಸಿಸಿ 1 ಸಿಲಿಂಡರ್ ಡಿಒಎಚ್ ಸಿ ಲಿಕ್ವಿಡ್ ಕೂಲ್ಡ್ ಎಂಜಿನ್ 20 ಕೆಡಬ್ಲ್ಯುನಲ್ಲಿ 30 ಎನ್ ಎಂ ತಿರುಗುಬಲ ಉತ್ಪಾದಿಸಲಿದೆ.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ಶಕ್ತಿಯುತವಾದ ಇಂಧನ ಟ್ಯಾಂಕ್, ಟ್ವಿನ್ ಪಾಡ್ ಹೆಡ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಟ್ವಿನ್ ಎಕ್ಸಾಸ್ಟ್ ಮತ್ತು ಅಪ್ ಸೈಡ್ ಡೌನ್ ಫಾರ್ಕ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಹೋಂಡಾ ಸಿಬಿಆರ್ 250 ಆರ್

ಹೋಂಡಾ ಸಿಬಿಆರ್ 250 ಆರ್

ಕ್ರೀಡಾ ಪ್ರೇಮಿಗಳ ಮನ ಸೊರೆಗೈದಿರುವ ಹೋಂಡಾ ಸಿಬಿಆರ್ 250 ಆರ್ ನಲ್ಲಿರುವ 249.6 ಸಿಸಿ ಲಿಕ್ವಿಡ್ ಕೂಲ್ಡ್ ಫೋರ್ ಸ್ಟ್ರೋಕ್ ಎಸ್ ಐ ಎಂಜಿನ್ 22.9 ಎನ್ಎಂ ತಿರುಗುಬಲದಲ್ಲಿ 26.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

 ಹೋಂಡಾ ಸಿಬಿಆರ್ 250 ಆರ್

ಹೋಂಡಾ ಸಿಬಿಆರ್ 250 ಆರ್

ಹೋಂಡಾ ಸಿಬಿಆರ್ 250 ಆರ್ ಸ್ಟ್ಯಾಂಡರ್ಡ್ ಮತ್ತು ಸಿಬಿಆಸ್ ಮಾದರಿಗಳು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ಅನುಕ್ರಮವಾಗಿ 1.60 ಮತ್ತು 1.89 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಬಜಾಜ್ ಪಲ್ಸರ್ ಆರ್‌ಎಸ್200

ಬಜಾಜ್ ಪಲ್ಸರ್ ಆರ್‌ಎಸ್200

ಹೊಸ ಆಕರ್ಷಕ ಶೈಲಿಯನ್ನು ಪಡೆದಿರುವ ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಬಜಾಜ್ ಪಲ್ಸರ್ ಆರ್‌ಎಸ್200 ಬೈಕ್ ನಲ್ಲಿರುವ 199.5 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಸ್ ಒಎಚ್ ಸಿ 4 ವಾಲ್ವ್ ಲಿಕ್ವಿಡ್ ಕೂಲ್ಡ್ ಟ್ರಿಪಲ್ ಸ್ಪಾರ್ಕ್ ಎಫ್ ಐ ಎಂಜಿನ್ 18.6 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಪಲ್ಸರ್ ಆರ್‌ಎಸ್200

ಬಜಾಜ್ ಪಲ್ಸರ್ ಆರ್‌ಎಸ್200

ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಂಡಿರುವ ಪಲ್ಸರ್ ಆರ್‌ಎಸ್200 ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಎಬಿಎಸ್ ಮತ್ತು ಎಬಿಎಸ್ ರಹಿತ ಮಾದರಿಗಳು ಅನುಕ್ರಮವಾಗಿ 1.31 ಹಾಗೂ 1.19 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಯಮಹಾ ವೈಝಡ್ ಎಫ್ ಆರ್15 2.0

ಯಮಹಾ ವೈಝಡ್ ಎಫ್ ಆರ್15 2.0

ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಹೊಸತನದ ಅನುಭವ ನೀಡಿರುವ ಯಮಹಾ ಈಗಲೂ ಅತ್ಯಂತ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಇದರಲ್ಲಿರುವ 149 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಎಸ್‌ಒಎಚ್‌ಸಿ 4 ವಾಲ್ವ್ ಎಂಜಿನ್ 15 ಎನ್ ಎಂ ತಿರುಗುಬಲದಲ್ಲಿ 17 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

 ಯಮಹಾ ವೈಝಡ್ ಎಫ್ ಆರ್15 2.0

ಯಮಹಾ ವೈಝಡ್ ಎಫ್ ಆರ್15 2.0

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಯಮಹಾ ವೈಝಡ್ ಎಫ್ ಆರ್15 ವರ್ಷನ್ 2.0 ಮಾದರಿಯು 1.18 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
Read more on ಬೈಕ್ motorcycle
English summary
Most powerful motorcycles under 2 lakhs in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X