ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

By Nagaraja

ರಾಯಲ್ ಎನ್ ಫೀಲ್ಡ್ ಅಭಿಮಾನಿಗಳಿಗೆ ಖುಷಿ ಸುದ್ದಿ ಒದಗಿ ಬಂದಿದ್ದು, ಐಕಾನಿಕ್ ಬುಲೆಟ್ ಎಲೆಕ್ಟ್ರಾ ನಿರ್ಮಾಣ ಸ್ಥಗಿತಗೊಂಡಿಲ್ಲ. ಬದಲಾಗಿ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ ಎಂಬುದನ್ನು ಚೆನ್ನೈ ಮೂಲದ ಪ್ರತಿಷ್ಠಿತ ಸಂಸ್ಥೆಯು ಖಚಿತಪಡಿಸಿಕೊಂಡಿದೆ.

ಐಚರ್ ಮೋಟಾರ್ಸ್ ಅಧೀನತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ತನ್ನ ಜನಪ್ರಿಯ 350 ಸಿಸಿ ಬುಲೆಟ್ ಎಲೆಕ್ಟ್ರಾ ನಿರ್ಮಾಣವನ್ನು ಸ್ಥಗಿತಗೊಳಿಸಿದೆಯೆಂಬ ಬಗ್ಗೆ ವರದಿಗಳು ಹಬ್ಬಿದ್ದವು. ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಿಂದ ಬುಲೆಟ್ ಎಲೆಕ್ಟ್ರಾ ಹೆಸರು ಮಾಯಗೊಂಡಿರುವುದೇ ಇವೆಲ್ಲದಕ್ಕೂ ಕಾರಣವಾಗಿತ್ತು.

ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

ಈ ಎಲ್ಲ ವಾರ್ತೆಗಳನ್ನು ಖುದ್ದಾಗಿ ಮುಂದೆ ಬಂದಿರುವ ಸಂಸ್ಥೆಯು ನಿರಾಕರಿಸಿದ್ದು, ನೂತನ ಬೈಕ್ ಬುಲೆಟ್ 350 ಎಲೆಕ್ಟ್ರಿಕ್ ಸ್ಟ್ಯಾರ್ಟ್ (ಇಎಸ್) ಎಂಬ ಹೊಸ ಹೆಸರಿನಲ್ಲಿ ಹೆಸರಿಸಿಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

ರಾಯಲ್ ಎನ್ ಫೀಲ್ಡ್ ಬುಲೆಟ್ 350 ಇಎಸ್ ನಿರ್ಮಾಣವು ಮುಂದುವರಿಯಲಿದ್ದು, ನಾಲ್ಕು ಆಕರ್ಷಕ ಬಣ್ಣಗಳಲ್ಲಿ (ಕಪ್ಪು, ಬೆಳ್ಳಿ, ಬೂದು ಮತ್ತು ನೀಲಿ) ನಮ್ಮ ಡೀಲರುಗಳ ಬಳಿ ಲಭ್ಯವಿರಲಿದೆ ಎಂದು ವಕ್ತಾರರು ಖಚಿತಪಡಿಸಿದ್ದಾರೆ.

ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

ಇದರ ಹಿಂದೆ ಯಾವುದೇ ವಾಣಿಜ್ಯ ಲಾಭ ಉದ್ದೇಶವಿರಿಸಲಾಗಿಲ್ಲ. ಗ್ರಾಹಕರಿಗೆ ಸುಲಭವಾಗಿ ಗುರುತಿಸಲು ಬದಲಾವಣೆ ತರಲಾಗಿದೆ.

ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

ಬುಲೆಟ್ 350 ಹಾಗೂ ಎಲೆಕ್ಟ್ರಾ ಮಾದರಿಗಳು ಪರಸ್ಪರ ಸಮಾನವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆಧರೆ ಎಲೆಕ್ಟ್ರಾದಲ್ಲಿ ಎಲೆಕ್ಟ್ರಿಕ್ ಸ್ಟ್ಯಾರ್ಟ್ ಆಯ್ಕೆಯಿರುವುದು ಇವೆರಡು ಬುಲೆಟ್ ಗಳ ಪ್ರಮುಖ ಬದಲಾವಣೆಯಾಗಿದೆ.

ರಾಯಲ್ ಎನ್ ಫೀಲ್ಡ್ ಬುಲೆಟ್ ಎಲೆಕ್ಟ್ರಾ ಯುಗಾಂತ್ಯ ಕಂಡಿಲ್ಲ; ಇನ್ನೇನು?

346 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ಸ್, ಟ್ವಿನ್ ಸ್ಪಾರ್ಕ್, ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬುಲೆಟ್ 350 ಇಎಸ್, 28 ಎನ್ ಎಂ ತಿರುಗುಬಲದಲ್ಲಿ 19.8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Royal Enfield’s Bullet Electra renamed as Bullet 350 ES
Story first published: Wednesday, September 28, 2016, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X