'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

By Nagaraja

ವಿವಿಧ ಮೂಲಗಳಿಂದ ಸಂಗ್ರಹಿಸಿದ ನಿಧಿಯಿಂದ (ಕ್ರೌಡ್ ಫಂಡಿಂಗ್) ನಿರ್ಮಿಸಿರುವ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಸೈಕಲ್ 'ಸ್ಪೆರೊ' ಎರಡನೇ ಹಂತದ ಮಾರಾಟಕ್ಕೆ ಯಶಸ್ವಿಯಾಗಿ ದಾಪುಗಾಲನ್ನಿಡುತ್ತಿದೆ. ವೈಯಕ್ತಿಕ ಪ್ರಯಾಣಕ್ಕೆ ಹೊಸ ಆಯಾಮವನ್ನು ತುಂಬಿರುವ ಸ್ಪೆರೊ ಇ-ಬೈಕ್ ಮಾಲಿನ್ಯ ರಹಿತ, ಹೆಚ್ಚು ಪರಿಸರ ಸ್ನೇಹಿ ಹಾಗೂ ಪೆಡಲ್ ತುಳಿಯುವ ಅಗತ್ಯವಿರುವುದಿಲ್ಲ.

ಕೊಯಂಬತ್ತೂರು ಮೂಲದ ತಂತ್ರಜ್ಞ ಎಸ್. ಮಣಿಕಂಠನ್ ಎಂಬವರು ಸ್ಪೆರೊ ಇ-ಬೈಕ್ ನಿರ್ಮಿಸಿದ್ದಾರೆ. ಅವರಿಗೆ ಬೆಂಗಳೂರು ತಳಹದಿಯ ಕ್ರೌಡ್ ಫಂಡಿಂಗ್ ಸಂಸ್ಥೆ ಫ್ಯೂಯಲ್ ಎ ಡ್ರೀಮ್ (FuelADream) ಆರ್ಥಿಕ ನೆರವು ಮಾಡುತ್ತಿದೆ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಕೆಲವು ತಿಂಗಳುಗಳ ಹಿಂದೆ ಆರಂಭಿಸಿದ ಸ್ಪೆರೊ ಇ ಸೈಕಲ್ ಮೊದಲ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕಿತ್ತಲ್ಲದೆ 38 ಲಕ್ಷ ರುಪಾಯಿಗಳನ್ನು ಸಂಗ್ರಹ ಮಾಡಲಾಗಿತ್ತು. ದೇಶದ್ಯಾಂತ 100ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತಲ್ಲದೆ ತನ್ನ ಗುರಿಯ ಶೇಕಡಾ 125ರಷ್ಟು ತಲುಪಿತ್ತು.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

38 ವರ್ಷದ ಎಂಬಿಎ ಪದವೀಧರರಾಗಿರುವ ಮಣಿಕಂಠನ್ ಕಳೆದ ಮೂರು ವರ್ಷಗಳಿಂದ ಇ ಸೈಕಲ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮದೇ ಆದ ವಿಶೇಷ ಯೋಜನೆಗಳನ್ನು ಮುಂದಿಟ್ಟಿದ್ದರು.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಫ್ಯೂಯಲ್ ಎ ಡ್ರೀಮ್ ಡಾಟ್ ಕಾಮ್ ವೆಬ್ ಸೈಟ್ ಮುಖಾಂತರ ಆಸಕ್ತರು ಸ್ಪೆರೊ ಇ ಸೈಕಲ್ ಗಾಗಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಸ್ಪೆರ್ ಇ ಬೈಕ್ ಗಳು 30,000 ರು.ಗಳಿಂದ 48,000 ರು.ಗಳ ವರೆಗೆ ದುಬಾರಿಯೆನಿಸುತ್ತದೆ. ಇಲ್ಲಿ ಹಣ ಹೂಡಿದವರಿಗೂ ಇ ಬೈಕ್ ಖರೀದಿಸುವ ಅವಕಾಶವೂ ಇರುತ್ತದೆ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ವಿವಿಧ ರೀತಿಯ ಪರಿಸರ ಸ್ನೇಹಿ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ. ಉದಾಹರಣೆ ಸ್ಯಾಮ್ಸಂಗ್ ಬ್ಯಾಟರಿ ಬಳಕೆ ಮಾಡಲಾಗಿದೆ. ಇನ್ನು ಚಕ್ರಗಳನ್ನು ಕೊರಿಯಾದಿಂದ ತರಿಸಲಾಗಿದೆ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಮಣಿಕಂಠನ್ ತಮ್ಮ ಮಾತುಗಳಲ್ಲೇ ವಿವರಿಸುವಂತೆಯೇ, ಮೊದಲ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಲ್ಲಿ 100 ರುಪಾಯಿಗಳನ್ನು ದಾನವಾಗಿ ನೀಡಿದವರು ಸೇರಿದ್ದರು. ಈಗ ಎರಡನೇ ಹಂತದಲ್ಲೂ ಯಶಸ್ಸು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

ಮೂರು ವೆರಿಯಂಟ್ ಗಳು

ಮೂರು ವೆರಿಯಂಟ್ ಗಳು

ಇ-30: ಒಂದೇ ಚಾರ್ಜ್ ನಲ್ಲಿ 30 ಕೀ.ಮೀ. ವರೆಗೂ ವ್ಯಾಪ್ತಿ (ಪುರುಷರಿಗೆ)

ಇ-60: ಒಂದೇ ಚಾರ್ಜ್ ನಲ್ಲಿ 60 ಕೀ.ಮೀ. ವರೆಗೂ ವ್ಯಾಪ್ತಿ (ಪುರುಷ ಹಾಗೂ ಮಹಿಳೆಯರಿಗೆ)

ಇ-100: ಒಂದೇ ಚಾರ್ಜ್ ನಲ್ಲಿ 100 ಕೀ.ಮೀ. ವರೆಗೂ ವ್ಯಾಪ್ತಿ (ಪುರುಷರಿಗೆ)

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ವೇಗ: ಗಂಟೆಗೆ ಗರಿಷ್ಠ 25 ಕೀ.ಮೀ.

ವೇಗವರ್ಧನೆ: 10 ಸೆಕೆಂಡುಗಳಲ್ಲೇ ಗಂಟೆಗೆ 0-25 ಕೀ.ಮೀ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಗೇರ್: ಎಲೆಕ್ಟ್ರಿಕ್ ವಿಧದಲ್ಲಿ 5 ಡಿಜಿಟಲ್ ಗೇರ್ ಗಳ ಸೌಲಭ್ಯ

ಬ್ಯಾಟರಿ: 48 ವೋಲ್ಟ್ ಲಿ-ಇಯಾನ್ ಬ್ಯಾಟರಿ/ಒಂದು ವರ್ಷದ ವಾರಂಟಿ

4-6 ತಾಸಿನಲ್ಲೇ ಶೇಕಡಾ 20ರಿಂದ ಶೇಕಡಾ 80ರಷ್ಟು ಚಾರ್ಜಿಂಗ್.

ಭಾರ:

ಭಾರ:

ಎಲ್ಲ ಇ ಸೈಕಲ್ ಗಳು 25ರಿಂದ 26 ಕೆ.ಜಿ ಭಾರ

ಬ್ಯಾಟರಿ ಭಾರ

ಇ-30: 2.7 ಕೆ.ಜಿ.

ಇ-60: 3.4 ಕೆ.ಜಿ.

ಇ-100: 3.7 ಕೆ.ಜಿ.

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಸುಲಭ ಚಾರ್ಜಿಂಗ್ ಗಾಗಿ ಬೇರ್ಪಡಿಸಬಹುದಾದ ಬ್ಯಾಟರಿ,

ಸ್ಯಾರ್ಟ್ ಫೋನ್ ತರಹನೇ ಚಾರ್ಜಿಂಗ್ ಮಾಡುವ ಅವಕಾಶ (5amp)

ಸ್ಟ್ಯಾಂಡರ್ಡ್ ಸೈಕಲ್ ಬಿಡಿಭಾಗಗಳು: ಚಕ್ರ, ಕೇಬಲ್, ಮಡ್/ಗೇರ್ ಗಾರ್ಡ್

ಚಕ್ರ: ಕೊರಿಯಾದಿಂದ ಆಮದು

ಮುಂದುವರಿದ ತಂತ್ರಜ್ಞಾನ

ಮುಂದುವರಿದ ತಂತ್ರಜ್ಞಾನ

ಪೆಡಲ್ ಅಸಿಸ್ಟ್ ಮತ್ತು ರಿಜನರೇಷನ್

ಕ್ರೂಸ್ ಕಂಟ್ರೋಲ್,

ಫ್ರಂಟ್ ಶಾಕ್ಸ್, ಡಿಸ್ಕ್ ಬ್ರೇಕ್ ಸೌಲಭ್ಯ

ಹೆಡ್ ಲೈಟ್,

ಪಾಸ್ವರ್ಡ್ ಸುರಕ್ಷತೆ,

ಡ್ರೈವಿಂಗ್ ಲೈಸನ್ಸ್ ಅಥವಾ ವಿಮೆಯ ಅಗತ್ಯವಿಲ್ಲ

'ಸ್ಪೆರೊ' ಇ ಸೈಕಲ್; ಪೆಡಲ್ ತುಳಿಯುವುದು ಬೇಡ, ಪರಿಸರ ಸ್ನೇಹಿ!

ಇನ್ನು ಫ್ಯೂಯಲ್ ಎ ಡ್ರೀಮ್ ಡಾಟ್ ಕಾಮ್ ಮೂಖಾಂತರ ಮುಂಗಡವಾಗಿ ಸೈಕಲ್ ಕಾಯ್ದಿದಿರಿಸುವ ಗ್ರಾಹಕರಿಗೆ ಶೇಕಡಾ 40ರಷ್ಟು ರಿಯಾಯಿತಿ ನೀಡಲಾಗುತ್ತದೆ. ಒಟ್ಟಿನಲ್ಲಿ ನಗರದ ವಾಹನ ದಟ್ಟಣೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸ್ಪೆರೊ ಇ ಸೈಕಲ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

Most Read Articles

Kannada
Read more on ಸೈಕಲ್ cycle
English summary
Spero's E-Bikes Are Available Once Again, Grab Yours Before The Rest Of The Crowd
Story first published: Tuesday, August 30, 2016, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X