ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

By Nagaraja

ಕೆಲವು ಸಮಯಗಳ ಹಿಂದೆಯಷ್ಟೇ ಐಎನ್‌ಎಸ್ ವಿಕ್ರಾಂತ್ ಹಡಗಿನಿಂದ ಪ್ರೇರಣೆ ಪಡೆದ ಬಜಾಜ್ ವಿ15 ಬೈಕನ್ನು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ಬಿಡುಗಡೆಗೊಳಿಸಿತ್ತು. ಐಎನ್‌ಎನ್ ವಿಕ್ರಾಂತ್ ಯುದ್ಧ ಹಡಗಿನ ಲೋಹದಿಂದ ನಿರ್ಮಿತ ಬಜಾಜ್ ವಿ15 ಬೈಕ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈಗ ಹೈದರಾಬಾದ್ ತಳಹದಿಯ ದ್ವಿಚಕ್ರ ವಾಹನ ಕಸ್ಟಮೈಸ್ಡ್ ಸಂಸ್ಥೆಯಾಗಿರುವ ಇಮೊರ್ ಕಸ್ಟಮ್ಸ್, ಬಜಾಜ್ ವಿ15 ಬೈಕ್ ಗೆ ಹೊಸ ಸ್ಪರ್ಶವನ್ನು ನೀಡುವ ಮೂಲಕ ದೇಶಪ್ರೇಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಒಂದು ಸಾಮಾನ್ಯ ಮೋಟಾರ್ ಸೈಕಲ್ ಎಂಬುದಕ್ಕಿಂತಲೂ ಮಿಗಿಲಾಗಿ ಬಜಾಜ್ ವಿ15 ಬೈಕ್ ಮತ್ತು ದೇಶಪ್ರೇಮದ ನಡುವೆ ಎಲ್ಲಿಲ್ಲದ ನಂಟಿದೆ. ಇದನ್ನು ಮನಗಂಡಿರುವ ಇಮೊರ್ ಕಸ್ಟಮ್ಸ್ ಸಂಸ್ಥೆಯು ಗಮನಾರ್ಹ ಬದಲಾವಣೆಗಳನ್ನು ತಂದಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಬಜಾಜ್ ವಿ15 ದೇಹ ಭಾಗಕ್ಕೆ ಬ್ಯಾಟಲ್ ಫೀಲ್ಡ್ ಗ್ರೇ ಬಣ್ಣವನ್ನು ಬಳಿಯಲಾಗಿದೆ. ಇನ್ನು ಹಡಗು ನಿರ್ಮಿಸುವ ರೀತಿಯಲ್ಲಿ ಸ್ಟೀಲ್ ಶೀಟ್ ಗಳಿಂದ ವೆಲ್ಡ್ ಮಾಡಲಾಗಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಹಡಗಿನ ಕೆಳಭಾಗದ ಸದೃಶವಾಗಿ ಎಂಜಿನ್ ನಲ್ಲಿ ಕಪ್ಪು ವರ್ಣವನ್ನು ಬಳಿಯಲಾಗಿದೆ. ಹಡಗಿನ ಕೆಳಭಾಗವು ನೀರಿನಲ್ಲಿ ಬೆರೆತುಕೊಂಡು ಕಪ್ಪು ಅಥವಾ ಕೆಂಪು ವರ್ಣವನ್ನು ಪಡೆಯುತ್ತದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಟ್ಯಾಂಕ್ ಮೇಲ್ಗಡೆಯು ಐಎನ್‌ಎಸ್ ವಿಕ್ರಾಂತ್ ಐತಿಹಾಸಿಕ ದಿನಗಳನ್ನು ಸೂಚಿಸುತ್ತದೆ. ಇದು ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಭಾರತೀಯ ತ್ರಿವರ್ಣ ಧ್ವಜದ ಸಹಿತ ಹಡಗಿನ ನೈಜ ನಂಬರ್ ಆಗಿರುವ 'ಆರ್11' ಅನ್ನು ಫ್ರಂಟ್ ಫೆಂಡರ್ ನಲ್ಲಿ ಲಗತ್ತಿಸಲಾಗಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಇನ್ನು ಬಜಾಜ್ ವಿ15 ಬೈಕ್ ಹೆಸರನ್ನು ಅದೇ ರೀತಿ ಉಳಿಸಿಕೊಳ್ಳಲಾಗಿದ್ದು, ಸೇವೆಗಿಳಿದ ವರ್ಷವನ್ನು ಉಲ್ಲೇಖಿಸಲಾಗಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಅಷ್ಟಕ್ಕೂ ಇಮೊರ್ ಕಸ್ಟಮ್ಸ್ ವಿಶಿಷ್ಟ ಬಜಾಜ್ ವಿ15 ನಿರ್ಮಿಸಲು ಕಾರಣವೊಂದಿದೆ. ತಮ್ಮ ಸಂಸ್ಥೆಯನ್ನು ತಲುಪಿದ ಮಹಿಳೆಯೊಬ್ಬಾಕೆಯ ವಿಶೇಷ ಬೇಡಿಕೆಯ ಮೆರೆಗೆ ಇದನ್ನು ನಿರ್ಮಿಸಲಾಗಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಇಮೊರ್ ಕಸ್ಟಮ್ಸ್ ತಲುಪಿದ ಈಕೆ ವಿಶೇಷ ಬಣ್ಣ ಬಳಿಯಲು ಸೂಚಿಸಿದ್ದರು. ಅಲ್ಲದೆ ತಾವು ಉಡುಗೊರೆಯಾಗಿ ನೀಡಬೇಕಾಗಿರುವ ಈ ಬೈಕ್ ವಿಭಿನ್ನವಾಗಿ ಗೋಚರಿಸಬೇಕೆಂಬ ವಿನಂತಿಯನ್ನು ಮಾಡಿಕೊಂಡಿದ್ದರು.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

149.5 ಸಿಸಿ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಮೋಟಾರ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ವಿ15, 13 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಫೈವ್ ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ.

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ನೂತನ ಬಜಾಜ್ ವಿ15 ಕರ್ನಾಟಕ ಎಕ್ಸ್ ಶೋ ರೂಂ ಬೆಲೆ 63,094 ರು.ಗಳಾಗಿದೆ. ಒಟ್ಟಿನಲ್ಲಿ ಬಜಾಜ್ ವಿ15 ಮತ್ತಷ್ಟು ಪ್ರತಿಷ್ಠೆ ವೃದ್ಧಿಸಿಕೊಂಡಿದೆ.

Most Read Articles

Kannada
English summary
Story Behind 'The Invincible' Bajaj V By EIMOR Customs
Story first published: Thursday, June 23, 2016, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X