ಭಾರತೀಯರಿಗೆ ಅಚ್ಚು ಮೆಚ್ಚಿನ 10 ದ್ವಿಚಕ್ರ ವಾಹನಗಳು

By Nagaraja

ಇಡೀ ವಿಶ್ವವನ್ನೇ ಪರಿಗಣಿಸಿದಾಗ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದರಂತೆ ದೇಶದ ಮುಂಚೂಣಿಯ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ನೂತನ ಹಾಗೂ ಪರಿಷ್ಕೃತ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ.

ಇವುಗಳ ಪೈಕಿ ಕೆಲವು ಮಾದರಿಗಳು ಯಶ ಸಾಧಿಸಿದರೆ ಇನ್ನು ಕೆಲವು ಭಾರತೀಯರ ಮನಗೆಲ್ಲುವಲ್ಲಿ ವಿಫಲವಾಗುತ್ತಿದೆ. ಇಲ್ಲಿ ಬೆಲೆಯಿಂದ ಹಿಡಿದು ಮೈಲೇಜ್, ನಿರ್ವಹಣೆ, ವೈಶಿಷ್ಟ್ಯ ಹೀಗೆ ಪ್ರತಿಯೊಂದು ಘಟಕಗಳು ಅತ್ಯಂತ ಮಹತ್ವಪೂರ್ಣವೆನಿಸುತ್ತದೆ. ಹೀಗೆ ಭಾರತೀಯರ ಗ್ರಾಹಕರಿಗೆ ಅಚ್ಚು ಮೆಚ್ಚು ಎನಿಸಿಕೊಂಡಿರುವ ದೇಶದ ಅಗ್ರ 10 ದ್ವಿಚಕ್ರ ವಾಹನಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

10. ಟಿವಿಎಸ್ ಜೂಪಿಟರ್

10. ಟಿವಿಎಸ್ ಜೂಪಿಟರ್

ದೇಶದ ದ್ವಿಚಕ್ರ ವಾಹನ ಖರೀದಿಗಾರರಿಗೆ ಅಚ್ಚುಮೆಚ್ಚಿನ ಟಾಪ್ 10 ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎರಡೇ ಎರಡು ಸ್ಕೂಟರ್ ಗಳ ಪೈಕಿ ಟಿವಿಎಸ್ ಜೂಪಿಟರ್ ಒಂದಾಗಿದೆ. ಹಾಗಿದ್ದರೆ ಮಗದೊಂದು ಸ್ಕೂಟರ್ ಯಾವುದೆಂಬುದನ್ನು ಊಹಿಸಬಲ್ಲೀರಾ? ಉತ್ತರಕ್ಕಾಗಿ ಮುಂದಿನ ಪುಟದತ್ತ ಸಾಗಿರಿ. ಕಳೆದೊಂದು ವರ್ಷದಲ್ಲಿ ಟಿವಿಎಸ್ ಜೂಪಿಟರ್ (2015 ಎಪ್ರಿಲ್ ನಿಂದ 2016 ಮಾರ್ಚ್ ವರೆಗೆ) ಒಟ್ಟು 537,432 ಯುನಿಟ್ ಗಳ ಮಾರಾಟ ದಾಖಲಿಸಿದೆ.

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿವಿಎಸ್ ಜೂಪಿಟರ್ 8 ಎನ್ ಎಂ ತಿರುಗುಬಲದಲ್ಲಿ 7.9 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ದೆಹಲಿ ಎಕ್ಸ್ ಶೋರೂಂ ಬೆಲೆ 48,809 ರು.ಗಳಾಗಿದೆ.

ಮೈಲೇಜ್: 62 km/l

09. ಬಜಾಜ್ ಸಿಟಿ 100

09. ಬಜಾಜ್ ಸಿಟಿ 100

ಭಾರತದಲ್ಲಿರುವ ದ್ವಿಚಕ್ರ ವಾಹನಗಳ ಪೈಕಿ ಅತಿ ಕಡಿಮೆ ಬೆಲೆ ಲಭ್ಯವಾಗುವ ಬೈಕ್ ಇದಾಗಿದೆ. ಕಳೆದೊಂದು ವರ್ಷದ ಅವಧಿಯಲ್ಲಿ (2015 ಎಪ್ರಿಲ್ ನಿಂದ 2016 ಮಾರ್ಚ್ ವರೆಗೆ) ಬಜಾಜ್ ಸಿಟಿ100 ಪ್ರಯಾಣಿಕ ಬೈಕ್ ಒಟ್ಟಾರೆ 590,067 ಯುನಿಟ್ ಗಳ ಮಾರಾಟ ದಾಖಲಿಸಿದೆ.

ಬಜಾಜ್ ಸಿಟಿ 100

ಬಜಾಜ್ ಸಿಟಿ 100

99.27 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಸಿಟಿ 100 8.05 ಎನ್ ಎಂ ತಿರುಗುಬಲದಲ್ಲಿ 9.1 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 35,034 ರು.ಗಳಾಗಿದೆ.

ಮೈಲೇಜ್: 89 km/l (ARAI)

08. ಬಜಾಜ್ ಪಲ್ಸರ್

08. ಬಜಾಜ್ ಪಲ್ಸರ್

ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಬಜಾಜ್ ಪಲ್ಸರ್ ಈಗಲೂ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದೊಂದು ವರ್ಷದ ಅವಧಿಯಲ್ಲಿ (2015-2016 ಆರ್ಥಿಕ ಸಾಲು) ಬಜಾಜ್ ಪಲ್ಸರ್ ಶ್ರೇಣಿಯ ಬೈಕ್ ಗಳು ಒಟ್ಟಾರೆ 618,371 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಭಾರತದಲ್ಲಿ ಪಲ್ಸರ್ ಶ್ರೇಣಿಯು 135 ಎಲ್ ಎಸ್ ನಿಂದ ಆರಂಭವಾಗಿ ಶಕ್ತಿಶಾಲಿ ಆರ್ ಎಸ್ 200 ಮಾದರಿಗಳು ಮಾರಾಟದಲ್ಲಿದೆ.

ಬಜಾಜ್ ಪಲ್ಸರ್ 135 ಎಲ್ ಎಸ್

ಬಜಾಜ್ ಪಲ್ಸರ್ 135 ಎಲ್ ಎಸ್

ಬಜಾಜ್ ನ ಎಂಟ್ರಿ ಲೆವೆಲ್ ಪಲ್ಸರ್ ಬೈಕ್ ಆಗಿರುವ 135 ಎಲ್ ಎಸ್, 135 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 11.4 ಎನ್ ಎಂ ತಿರುಗುಬಲದಲ್ಲಿ 13.3 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇನ್ನೊಂದೆಡೆ ಪಲ್ಸರ್ ಶಕ್ತಿಶಾಲಿ ಆರ್ ಎಸ್ 200 ಬೈಕ್ ನಲ್ಲಿರುವ 199.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 18.6 ಎನ್ ಎಂ ತಿರುಗುಬಲದಲ್ಲಿ 24.1 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮೈಲೇಜ್, ಬೆಲೆ

ಮೈಲೇಜ್, ಬೆಲೆ

ಪಲ್ಸರ್ 135 ಎಲ್‌ಎಸ್ ಮೈಲೇಜ್: 64 km/l (ARAI)

ಪಲ್ಸರ್ ಆರ್ 200 (ಎಬಿಎಸ್) ಮೈಲೇಜ್: 35 km/l (ARAI)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪಲ್ಸರ್ 135 ಎಲ್‌ಎಸ್: 63,269 ರು.

ಪಲ್ಸರ್ ಆರ್ 200 (ಎಬಿಎಸ್): 130945 ರು.

 07. ಹೀರೊ ಗ್ಲಾಮರ್

07. ಹೀರೊ ಗ್ಲಾಮರ್

ಮೈಲೇಜ್ ಮತ್ತು ನೋಟದ ವಿಚಾರದಲ್ಲಿ ಯಾವುದೇ ರಾಜಿಗೆ ತಯಾರಾಗದ ಹೀರೊ ಗ್ಲಾಮರ್ ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು 618371 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಹೀರೊ ಗ್ಲಾಮರ್

ಹೀರೊ ಗ್ಲಾಮರ್

ಇದರಲ್ಲಿರುವ 124.8 ಸಿಸಿ ಎಂಜಿನ್ 10.35 ಎನ್ ಎಂ ತಿರುಗುಬಲದಲ್ಲಿ 7.8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮೈಲೇಜ್: 55 km/l (ARAI)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಕಾರ್ಬ್ಯುರೇಟಡ್: 55,925 ರು.

ಫ್ಯೂಯಲ್ ಇಂಜೆಕ್ಟ್: 65,600 ರು.

06. ಟಿವಿಎಸ್ ಎಕ್ಸ್ ಎಲ್ ಸೂಪರ್

06. ಟಿವಿಎಸ್ ಎಕ್ಸ್ ಎಲ್ ಸೂಪರ್

ಸಣ್ಣ ಪುಟ್ಟ ಉದ್ಯಮಗಳನ್ನು ಹರಸಿಕೊಂಡು ಜೀವನ ನಡೆಸುವವರಿಗೆ ಟಿವಿಎಸ್ ಎಕ್ಸ್ ಎಸಲ್ ಸೂಪರ್ ಈಗಲೂ ನೆಚ್ಚಿನ ಬೈಕ್ ಎನಿಸಿಕೊಂಡಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಟಿವಿಎಸ್ ಮೊಪೆಡ್ ಬೈಕ್, ಕಳೆದೊಂದು ಸಾಲಿನಲ್ಲಿ 723,767 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಟಿವಿಎಸ್ ಎಕ್ಸ್ ಎಲ್ ಸೂಪರ್

ಟಿವಿಎಸ್ ಎಕ್ಸ್ ಎಲ್ ಸೂಪರ್

ಟು ಸ್ಟ್ರೋಕ್ ಎಂಜಿನ್ ಆಯ್ಕೆಯಲ್ಲಿರುವ ಟಿವಿಎಸ್ ಎಕ್ಸ್ ಎಲ್ ಸೂಪರ್ 69.9 ಸಿಸಿ ಸಿಂಗಲ್ ಸಿಲಿಂಡರ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 5 ಎನ್ ಎಂ ತಿರುಗುಬಲದಲ್ಲಿ 3.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ದೇಶದಲ್ಲಿರುವ ಏಕ ಮಾತ್ರ ಟು ಸ್ಟ್ರೋಕ್ ಬೈಕ್ ಆಗಿದೆ.

ಮೈಲೇಜ್: 66 km/l (ARAI)

ಬೆಲೆ: 26,857 ರು. (ಎಕ್ಸ್ ಶೋ ರೂಂ ದೆಹಲಿ)

05. ಹೋಂಡಾ ಸಿಬಿ ಶೈನ್

05. ಹೋಂಡಾ ಸಿಬಿ ಶೈನ್

ದೇಶದ ಅಗ್ರ 125 ಸಿಸಿ ಮತ್ತು ಕಾರ್ಯ ನಿರ್ವಾಹಕ ಬೈಕ್ ಆಗಿರುವ ಹೋಂಡಾ ಸಿಬಿ ಶೈನ್ 2015-16ನೇ ಆರ್ಥಿಕ ಸಾಲಿನಲ್ಲಿ ಒಟ್ಟಾರೆ 798,699 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಹೋಂಡಾ ಸಿಬಿ ಶೈನ್

ಹೋಂಡಾ ಸಿಬಿ ಶೈನ್

124.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿರುವ ಹೋಂಡಾ ಸಿಬಿ ಶೈನ್ 10.3 ಎನ್ ಎಂ ತಿರುಗುಬಲದಲ್ಲಿ 10.57 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮೈಲೇಜ್: 65 km/l (ARAI)

ಬೆಲೆ: 55,559 ರು. (ಎಕ್ಸ್ ಶೋ ರೂಂ ದೆಹಲಿ)

04. ಹೀರೊ ಪ್ಯಾಶನ್

04. ಹೀರೊ ಪ್ಯಾಶನ್

ಭಾರತದಲ್ಲಿ ಹೀರೊ ಪ್ಯಾಶನ್ ಶ್ರೇಣಿಯ ಬೈಕ್ ಗಳಿಗೂ ಅತಿ ಹೆಚ್ಚಿನ ಬೇಡಿಕೆಯಿದೆ ಎಂಬದನ್ನು ಮಾರಾಟ ಅಂಕಿಅಂಶಗಳನ್ನು ಗಮನಿಸಿದಾಗಲೇ ಬೆಳಕಿಗೆ ಬರುತ್ತದೆ. 2015-16ನೇ ಆರ್ಥಿಕ ಸಾಲಿನಲ್ಲಿ ಪ್ಯಾಶನ್ ಶ್ರೇಣಿಯ ಬೈಕ್ ಗಳು ಒಟ್ಟಾರೆ 1,139,576 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಹೀರೊ ಪ್ಯಾಶನ್

ಹೀರೊ ಪ್ಯಾಶನ್

99.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಪ್ಯಾಶನ್ 8.05 ಎನ್ ಎಂ ತಿರುಗುಬಲದಲ್ಲಿ 8.24 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮೈಲೇಜ್: 84 km/l (ARAI)

ಬೆಲೆ: 48,900 ರು. (ಎಕ್ಸ್ ಶೋ ರೂಂ ದೆಹಲಿ)

03. ಹೀರೊ ಎಚ್ ಎಫ್ ಡಿಲಕ್ಸ್

03. ಹೀರೊ ಎಚ್ ಎಫ್ ಡಿಲಕ್ಸ್

ಕಡಿಮೆ ಬೆಲೆಗೆ ದೊರಕುವ ಅತ್ಯುತ್ತಮ ಪ್ರಯಾಣಿಕ ಬೈಕ್ ಎಂಬ ಪಟ್ಟವೇ ಹೀರೊ ಎಚ್ ಎಫ್ ಡಿಲಕ್ಸ್ ಗೆ ವರದಾನವಾಗಿದೆ. ತನ್ನದೇ ಪ್ಯಾಶನ್ ಶ್ರೇಣಿಯ ಬೈಕ್ ಗಳಿಂದ ನಿಕಟ ಪೈಪೋಟಿಯನ್ನು ಎದುರಿಸಿತ್ತಾದರೂ ಹೀರೊ ಎಚ್ ಎಫ್ ಡಿಲಕ್ಸ್ ಕಳೆದ ಸಾಲಿನಲ್ಲಿ 1,148,254 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಹೀರೊ ಎಚ್ ಎಫ್ ಡಿಲಕ್ಸ್

ಹೀರೊ ಎಚ್ ಎಫ್ ಡಿಲಕ್ಸ್

99.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಎಚ್ ಎಫ್ ಡಿಲಕ್ಸ್ 8.05 ಎನ್ ಎಂ ತಿರುಗುಬಲದಲ್ಲಿ 8.24 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮೈಲೇಜ್: 83 km/l (ARAI)

ಬೆಲೆ: 43,100 ರು. (ಎಕ್ಸ್ ಶೋ ರೂಂ ದೆಹಲಿ)

02. ಹೋಂಡಾ ಆಕ್ಟಿವಾ

02. ಹೋಂಡಾ ಆಕ್ಟಿವಾ

ಹಲವು ಬಾರಿ ಮಾಸಿಕ ಮಾರಾಟದಲ್ಲಿ ದೇಶದ ನಂ.1 ಸ್ಪ್ಲೆಂಡರ್ ಬೈಕ್ ಅನ್ನೇ ಹಿಂದಿಕ್ಕಿರುವ ಹೋಂಡಾ ಆಕ್ಟಿವಾ ಕೆಲವೇ ಕೆಲವು ಸಾವಿರಗಳ ಅಂತರದಲ್ಲಿ ದೇಶದ ನಂ.1 ದ್ವಿಚಕ್ರ ವಾಹನವೆಂಬ ಪಟ್ಟವನ್ನು ಕಳೆದುಕೊಂಡಿದೆ. ಹಾಗಿದ್ದರೂ ಟಿವಿಎಸ್ ಜೂಪಿಟರ್ ಹಿಂದಿಕ್ಕಿ ದೇಶದ ಅಗ್ರ ಸ್ಕೂಟರ್ ಎಂಬ ಪಟ್ಟ ಕಟ್ಟಿಕೊಂಡಿರುವ ಆಕ್ಟಿವಾ ಶ್ರೇಣಿಯ ಸ್ಕೂಟರ್ ಗಳು 2015-16ನೇ ಆರ್ಥಿಕ ಸಾಲಿನಲ್ಲಿ 2,466,350 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ

109.19 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬೇಸ್ ಆಕ್ಟಿವಾ ಐ ವೆರಿಯಂಟ್ 8.74 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಆಕ್ಟಿವಾದ ತ್ರಿಜಿ ಮಾದರಿಯಲ್ಲೂ ಇದಕ್ಕೆ ಸಮಾನವಾದ ಎಂಜಿನ್ ಬಳಕೆಯಾಗುತ್ತಿದೆ. ಅದೇ ರೀತಿ ಶಕ್ತಿಶಾಲಿ 125 ಮಾದರಿಯು 124.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 10.12 ಎನ್ ಎಂ ತಿರುಗುಬಲದಲ್ಲಿ 8.6 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಆಕ್ಟಿವಾ ಐ ಮೈಲೇಜ್: 66 km/l (ARAI)

ಆಕ್ಟಿವಾ 125 ಮೈಲೇಜ್: 59 km/l (ARAI)

ಆಕ್ಟಿವಾ ಪ್ರಾರಂಭಿಕ ಬೆಲೆ: 46,100 ರು. (ಎಕ್ಸ್ ಶೋ ರೂಂ ದೆಹಲಿ)

01. ಹೀರೊ ಸ್ಪ್ಲೆಂಡರ್

01. ಹೀರೊ ಸ್ಪ್ಲೆಂಡರ್

ಆಕ್ಟಿವಾದಿಂದ ನಿಕಟ ಪೈಪೋಟಿ ಎದುರಿಸಿರುವ ಹೀರೊ ಸ್ಪ್ಲೆಂಡರ್ ಕಳೆದ ವರ್ಷದ ಮಾರಾಟದಲ್ಲಿ 31,124 ಯುನಿಟ್ ಗಳ ಮಾರಾಟ ಹಿನ್ನಡೆ ಅನುಭವಿಸಿದರೂ ಸಹ 2015-16ನೇ ಆರ್ಥಿಕ ಸಾಲಿನಲ್ಲಿ ಒಟ್ಟಾರೆ 2,486,065 ಯುನಿಟ್ ಗಳ ಮಾರಾಟದೊಂದಿಗೆ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೀರೊ ಸ್ಪ್ಲೆಂಡರ್

ಹೀರೊ ಸ್ಪ್ಲೆಂಡರ್

99.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಸ್ಪ್ಲೆಂಡರ್ 8.05 ಎನ್ ಎಂ ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮೈಲೇಜ್: 81 km/l (ARAI)

ಬೆಲೆ: 46,500 ರು. (ಎಕ್ಸ್ ಶೋ ರೂಂ ದೆಹಲಿ)

ಭಾರತೀಯರಿಗೆ ಅಚ್ಚು ಮೆಚ್ಚಿನ 10 ದ್ವಿಚಕ್ರ ವಾಹನಗಳು

ಈಗ ನಿಮ್ಮ ನೆಚ್ಚಿನ ಬೈಕ್ ಮತ್ತು ಅವು ನೀಡುತ್ತಿರುವ ಮೈಲೇಜ್ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

Most Read Articles

Kannada
English summary
Report: Top 10 Most Wanted Two-Wheelers In India
Story first published: Friday, April 29, 2016, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X