ಟ್ರಯಂಪ್ ಶಕ್ತಿಶಾಲಿ ಬೈಕ್ ಭಾರತಕ್ಕೆ

Written By:

ಬ್ರಿಟನ್ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಮುಂಬರುವ 2017 ಫೆಬ್ರವರಿ ತಿಂಗಳಲ್ಲಿ ಬೊನ್ ವಿಲ್ ಬಾಬರ್ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಲಿದೆ. ತನ್ಮೂಲಕ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಟ್ರಯಂಪ್ ತನ್ನ ಸಾನಿಧ್ಯವನ್ನು ಮತ್ತಷ್ಟು ಶಕ್ತಿಪಡಿಸಲಿದೆ.

ಟ್ರಯಂಪ್ ಬೊನ್ ವಿಲ್ ಟಿ120 ತಳಹದಿಯಲ್ಲಿ ನಿರ್ಮಾಣವಾಗಿರುವ ಬೊನ್ ವಿಲ್ ಬಾಬರ್, ದೆಹಲಿ ಎಕ್ಸ್ ಶೋರೂಂ ಬೆಲೆಯ ಪ್ರಕಾರ 10ರಿಂದ 12 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಟ್ರಯಂಪ್ ಬ್ರಿಟನ್ ಸಂಸ್ಥೆಯೇ ಆಗಿರಬಹುದು ಆದರೆ 1960ರ ದಶಕದ ಬ್ರಿಟನ್ ವಿನ್ಯಾಸ ಹಾಗೂ 1930ರ ದಶಕದ ಅಮೆರಿಕ ಬಾಬರ್ ಶೈಲಿಯಿಂದ ಸ್ಪೂರ್ತಿ ಪಡೆದಿದೆ.

ಬೊನ್ ವಿಲ್ ಟಿ120 ತಳಹದಿಯ ಜೊತೆಗೆ ಹೊಸತಾದ ಚಾಸೀ, ಸಸ್ಪೆನ್ಷನ್ ಇತ್ಯಾದಿ ವೈಶಿಷ್ಟ್ಯಗಳು ಗಿಟ್ಟಿಸಿಕೊಳ್ಳಲಿದ್ದು, ಸಂಪೂರ್ಣ ತಾಜಾತನವನ್ನು ಪಡೆಯಲಿದೆ.

ಹಿಂಭಾಗದಲ್ಲಿ ಹಾರ್ಡ್ ಟೈಲ್ ಲುಕ್, ಹೊಸತಾದ ಪಂಜರ ವಿಧದ ಸ್ವಿಂಗಾರ್ಮ್, ಸೀಟುಗಳಡಿಯಲ್ಲಿ ಮೊನೊಶಾಕ್ ಮತ್ತು ಫ್ರಂಟ್ ಫಾರ್ಕ್ ವ್ಯವಸ್ಥೆಯಿರಲಿದೆ.

ಎರಡು ವಿಧದ ಸಿಟ್ಟಿಂಗ್ ವ್ಯವಸ್ಥೆ ಹೊಂದಿಕೆಯಾಗುವ ರೀತಿಯಲ್ಲಿ ಏಕಮಾತ್ರ ಸೀಟು ಜೋಡಿಸಲಾಗಿದೆ. ಇನ್ನು ಕಿರಿದಾದ ಎಕ್ಸಾಸ್ಟ್ ಕೊಳವೆಯಿದೆ.

ಸಮತಲವಾದ ಹ್ಯಾಂಡಲ್ ಬಾರ್, ವೃತ್ತಾಕಾರಾದ ಮಿರರ್, ದೊಡ್ಡದಾದ ಇಂಧನ ಟ್ಯಾಕ್ ಹಾಗೂ ಸ್ಪೋಕ್ ಚಕ್ರಗಳು ಇದರಲ್ಲಿದೆ.

 

 

ಇನ್ನು ಸವಾರರ ವೈಯಕ್ತಿಕ ಬೇಡಿಕೆಗಳಿಗೆ ಅನುಸಾರವಾಗಿ 150ರಷ್ಟು ಆಕ್ಸೆಸರಿಗಳು ಲಭ್ಯವಾಗಲಿದೆ. ಇದು ಸ್ಟೈಲಿಷ್, ಅನುಕೂಲಕರ ಮತ್ತು ಹೆಚ್ಚಿನ ನಿರ್ವಹಣೆಯನ್ನು ಖಾತ್ರಿಪಡಿಸಲಿದೆ.

ಅಂದ ಹಾಗೆ ಬೊನ್ ವಿಲ್ ಬಾಬರ್ ನಲ್ಲಿರುವ 1200 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಮೋಟಾರು 105 ಎನ್ ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ರೈಡ್ ಬೈ ವೈರ್, ವಿವಿಧ ರೈಡಿಂಗ್ ಮೋಡ್, ಟ್ರಾಕ್ಷನ್ ಕಂಟ್ರೋಲ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಟಾರ್ಕ್ ಅಸಿಸ್ಟ್ ಕ್ಲಚ್ ವ್ಯವಸ್ಥೆಗಳಿರಲಿದೆ.

English summary
Triumph Bonneville Bobber Likely To Be Launched In India In February 2017
Please Wait while comments are loading...

Latest Photos