ದಿ ಲೆಜೆಂಡ್ ಈಸ್ ಬ್ಯಾಕ್; ಟ್ರಯಂಪ್ ಥ್ರಕ್ಸ್ಟನ್ ಆರ್ ಭಾರತ ಎಂಟ್ರಿ

By Nagaraja

ಬ್ರಿಟನ್ ನ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟ್ರಯಂಪ್, ಅತಿ ನೂತನ ಥ್ರಕ್ಸ್ಟನ್ ಆರ್ ಕೆಫೆ ರೇಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 10.90 ಲಕ್ಷ ರು.ಗಳಾಗಿರಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಸ್ಥಿತಗೊಂಡಿರುವ ಅಧಿಕೃತ ಟ್ರಯಂಪ್ ಡೀಲರ್ ಶಿಪ್ ಗಳ ಮುಖಾಂತರ ಥ್ರಕ್ಸ್ಟನ್ ಕೆಫೆ ರೇಸರ್ ಬೈಕ್ ಮಾರಾಟಕ್ಕೆ ಲಭ್ಯವಾಗಲಿದೆ. ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಟಿ ಹಾಗೂ ಬೈಕ್ ಉತ್ಸಾಹಿ ಗುಲ್ ಪನಾಗ್ ಅವರು ನೂತನ ಬೈಕನ್ನು ಅನಾರಣಗೊಳಿಸಿದರು.

ಟ್ರಯಂಪ್ ಥ್ರಕ್ಸ್ಟನ್ ಆರ್


ನೂತನ ಥ್ರಕ್ಸ್ಟನ್ ಆರ್ ಅತ್ಯಂತ ಶಕ್ತಿಶಾಲಿ 1200 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 112 ಎನ್ ಎಂ ತಿರುಗುಬಲದಲ್ಲಿ 96 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸಂಸ್ಥೆಯ ಪ್ರಕಾರ ನೂತನ ಥ್ರಕ್ಸ್ಟನ್ ಆರ್ ಬೈಕ್ ಪ್ರತಿ ಲೀಟರ್ ಗೆ 21.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅದೇ ರೀತಿ ಮುಂದುಗಡೆ ಟ್ವಿನ್ 310 ಎಂಎಂ ಫ್ಲೋಟಿಂಗ್ ಡಿಸ್ಕ್ ಮತ್ತು ಹಿಂದುಗಡೆ 220 ಎಂಎಂ ಡಿಸ್ಕ್ ಬ್ರೇಕ್ ಇರಲಿದೆ. ಅಂತೆಯೇ ಎಬಿಎಸ್ ಸುರಕ್ಷಾ ವೈಶಿಷ್ಟ್ಯವೂ ಲಭ್ಯವಾಗಲಿದೆ.

ಅಂತೆಯೇ ಮುಂದುಗಡೆ ಶೋವಾ ಯುಎಸ್ ಡಿ ಫಾರ್ಕ್ ಜೊತೆ 120 ಎಂಎಂ ಟ್ರಾವೆಲ್ ಮತ್ತು ಹಿಂದುಗಡೆ ಓಹ್ಲಿನ್ ಟ್ವಿನ್ ಶಾಕ್ ಜೊತೆ 120 ಎಂಎಂ ಟ್ರಾವೆಲ್ ಸಸ್ಪೆನ್ಷನ್ ವ್ಯವಸ್ಥೆಯೂ ಕಂಡುಬರಲಿದೆ.

1960 ಹಾಗೂ 1970ರ ದಶಕದಲ್ಲಿದ್ದ ಲೆಜೆಂಡರಿ 500 ಮೈಲ್ ಥ್ರಕ್ಸ್ಟನ್ ಎಂಡ್ಯೂರನ್ಸ್ ರೇಸ್ ಸಿರೀಸ್ ನಿಂದ ಇದಕ್ಕೆ ಈ ಹೆಸರನ್ನಿಡಲಾಗಿದೆ. ಕ್ಲಾಸಿಕಲ್ ಕೆಫೆ ರೇಸರ್ ಶೈಲಿಯ ಹೊರತಾಗಿ ಆಧುನಿಕ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಮುಂದುಗಡೆ ವೃತ್ತಾಕಾರದ ಹೆಡ್ ಲ್ಯಾಂಪ್, ಇಂಧನ ಟ್ಯಾಂಕ್ ಮತ್ತು ದೇಹ ವಿನ್ಯಾಸವು ಹೆಚ್ಚಿನ ಆಕರ್ಷಣೆ ಪಡೆದಿದೆ.

ವೈಶಿಷ್ಟ್ಯಗಳು

  • ಎಬಿಎಸ್,
  • ಟ್ರಾಕ್ಷನ್ ಕಂಟ್ರೋಲ್,
  • ರೈಡ್ ಬೈ ವೈರ್ ಜೊತೆ ಮೂರು ಚಾಲನಾ ವಿಧಗಳು - ರೋಡ್, ರೈನ್ ಮತ್ತು ಸ್ಪೋರ್ಟ್
  • ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
  • ಎಲ್ ಇಡಿ ಟೈಲ್ ಲ್ಯಾಂಪ್,
  • ಎಂಜಿನ್ ಇಂಮೊಬಿಲೈಜರ್,
  • ಅಂಡರ್ ಸೀಟ್ ಯುಎಸ್ ಬಿ ಚಾರ್ಜಿಂಗ್ ಸಾಕೆಟ್

ಇದೇ ಸಂದರ್ಭದಲ್ಲಿ ವಾಹನ ಪ್ರೇಮಿ ಹಾಗೂ ನಟಿ ಗುಲ್ ಪನಾಗ್ ಅವರಿಗೆ ಬೊನ್ ವಿಲ್ ಟಿ120 ಬೈಕ್ ಹಸ್ತಾಂತರಿಸಲಾಯಿತು.

Most Read Articles

Kannada
English summary
Triumph Thruxton R Races Into India; Priced At Rs. 10.90 Lakhs
Story first published: Friday, June 3, 2016, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X