ಸ್ಕೂಟರ್‌ಗೂ ಸೈ; ಬೈಕ್‌ಗೂ ಜೈ: ಟಿವಿಎಸ್ ಹೊಸ ಜಾದೂ ನೋಡಿ!

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಟಿವಿಎಸ್ ಸ್ಕೂಟರ್ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿರುವ ವಿಚಾರ ನಿಮಗೆಲ್ಲರಿಗೂ ಗೊತ್ತು. ಈ ನಡುವೆ ಅಪಾಚಿಯಂತಹ ಜನಪ್ರಿಯ ಮಾದರಿಗಳನ್ನು ಕೊಡುಗೆಯಾಗಿರುವ ನೀಡಿರುವ ಟಿವಿಎಸ್, ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗೂಡಿ ಅತಿ ನೂತನ ಬೈಕ್ ಬಿಡುಗಡೆಗೊಳಿಸುವ ಬಗ್ಗೆ ನಾವು ಮಾಹಿತಿ ಕೊಟ್ಟಿರುತ್ತೇವೆ.

ಟಿವಿಎಸ್ ಸಾರಥ್ಯದಲ್ಲಿ ಬಿಎಂಡಬ್ಲ್ಯು ಚೊಚ್ಚಲ ಬೈಕ್ ಭಾರತಕ್ಕೆ

ಇದರ ಮುಂದುವರಿದ ಬೆಳವಣಿಗೆಯಂತೆ 2016 ಆಟೋ ಎಕ್ಸ್ ಪೋದಲ್ಲಿ ಟಿವಿಎಸ್ ಪರಿಚಯಿಸಿರುವ ಅಕುಲಾ 310 ಕಾನ್ಸೆಪ್ಟ್ ಬೈಕ್ ಇನ್ನು ಮುಂದೆ ಹೊಸ ಹೆಸರಿನಲ್ಲಿ ಗುರುತಿಸ್ಪಡಲಿದೆ. ಹೌದು, ದೇಶದ ವಾಹನ ಪ್ರೇಮಿಗಳ ನೆಚ್ಚಿನ ಬೈಕ್ ಆಗಿರುವ ಅಪಾಚಿ ಹೆಸರನ್ನು ಇದಕ್ಕಿಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ನೂತನ ಟಿವಿಎಸ್ ಅಕುಲಾ 310 ಇನ್ನು ಮುಂದೆ ಅಪಾಚಿ ಆರ್ ಟಿಆರ್ 310 ಎಂದೆನಿಸಿಕೊಳ್ಳಲಿದೆ. ಇದು ಅಪಾಚಿ ಶ್ರೇಣಿಯ ಬೈಕ್ ಗಳ ವಿಸ್ತರಣೆಗೆ ಸಹಕಾರಿಯಾಗಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ಬಿಎಂಡಬ್ಲ್ಯು ಜಿ 310ಆರ್ ತಳಹದಿಯಲ್ಲಿ ನೂತನ ಟಿವಿಎಸ್ ಬೈಕ್ ನಿರ್ಮಾಣವಾಗುತ್ತಿದೆ. ಜರ್ಮನಿಯ ಪ್ರಸಿದ್ಧ ಸಂಸ್ಥೆಯ ಜೊತೆಗಿನ ನೆರವನ್ನು ಟಿವಿಎಸ್ ಪಡೆಯಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

313 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು ಜಿ310 ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇದು 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದೇ ಎಂಜಿನ್ ನೂತನ ಅಪಾಚೆಗೂ ಬಳಕೆಯಾಗಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಟ್ವಿನ್ ಹೆಡ್ ಲ್ಯಾಂಪ್, ದೊಡ್ಡದಾದ ವಿಂಡ್ ಶೀಲ್ಡ್, ಶಕ್ತಿಯುತ ಇಂಧನ ಟ್ಯಾಂಕ್, ವಿಭಜಿತ ಸೀಟು, ಎಲ್ ಇಡಿ ಟೈಲ್ ಲೈಟ್ ಮುಂತಾದ ಸೇವೆಗಳಿರಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ಮೆಕ್ಯಾನಿಕಲ್ ಬಗ್ಗೆ ಮಾತನಾಡುವುದಾದ್ದಲ್ಲಿ ಯುಎಸ್ ಡಿ ಫ್ರಂಟ್ ಫಾರ್ಕ್ ಮತ್ತು ರಿಯರ್ ಮೊನೊಶಾಕ್ ಇರಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ಡ್ಯುಯಲ್ ಆ್ಯಂಟಿ ಬ್ರೇಕ್ ಲಾಕಿಂಗ್ ಸಿಸ್ಟಂ ಮತ್ತು ಪೈರಲ್ಲಿ ಚಕ್ರಗಳು ಲಭ್ಯವಾಗುವ ಸಾಧ್ಯತೆಯಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಕೆಟಿಎಂ ಆರ್‌ಸಿ 390 ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಹೀರೊ ಎಚ್ಸ್ ಎಕ್ಸ್ 250 ಮಾದರಿಗಳಿಗೆ ನೂತನ ಟಿವಿಎಸ್ ಅಪಾಚೆ ಆರ್ ಟಿಆರ್ 300 ಪ್ರತಿಸ್ಪರ್ಧಿಯಾಗಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 300

ಟಿವಿಎಸ್ ವಿಕ್ಟರ್ ಅಬ್ಬರ; ಸಮಗ್ರ ಚಾಲನಾ ವಿಮರ್ಶೆ ಓದಿ

ಟಿವಿಎಸ್ ಅಪಾಚೆ ಆರ್‌ಟಿಆರ್ 300

ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

Most Read Articles

Kannada
Read more on ಟಿವಿಎಸ್
English summary
TVS Akula Production Model Will Be Named As TVS Apache RTR 300
Story first published: Tuesday, May 3, 2016, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X