ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

By Nagaraja

ದೇಶದ ಮುಂಚೂಣಿಯ ಮೋಟಾರ್ ಸ್ಪೋರ್ಟ್ಸ್ ತಂಡಗಳಲ್ಲಿ ಒಂದಾಗಿರುವ ಟಿವಿಎಸ್ ರೇಸಿಂಗ್ (TVS Racing ) ತಂಡವು ಬೆಂಗಳೂರಿನ ಉದಯೋನ್ಮುಖ ರೇಸರ್ ಶ್ರೇಯಾ ಸುಂದರ್ ಅಯ್ಯರ್ ಜೊತೆ ಸಹಿ ಹಾಕಿಕೊಂಡಿದೆ. ಇದರಂತೆ ಮುಂಬರುವ ಭಾರತದ ರಾಷ್ಟ್ರೀಯ ರಾಲಿ ಚಾಂಪಿಯನ್ ಶಿಪ್ ನಲ್ಲಿ (Indian National Rally championship) ಶ್ರೇಯಾ ಟಿವಿಎಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ಮೂಲಕ ಮಹಿಳಾ ರೇಸರ್ ಜೊತೆ ಸಹಿ ಹಾಕಿದ ಭಾರತದ ಮೊದಲ ರೇಸಿಂಗ್ ತಂಡವೆಂಬ ಹೆಗ್ಗಳಿಕೆಗೆ ಟಿವಿಎಸ್ ಪಾತ್ರವಾಗಿದೆ. ಅಂತೆಯೇ ಭಾರತದ ಯಾವುದೇ ರೇಸಿಂಗ್ ತಂಡದಲ್ಲಿ ಭಾಗವಹಿಸುತ್ತಿರುವ ಮೊದಲ ಮಹಿಳೆ ಎಂಬ ಶ್ರೇಯಸ್ಸಿಗೂ ಶ್ರೇಯಾ ಪಾತ್ರವಾಗಿದ್ದಾರೆ.

ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

24ರ ಹರೆಯದ ಶ್ರೇಯಾ, ಮೋಟಾರ್ ಸ್ಪೋರ್ಟ್ಸ್ ರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ತಮ್ಮ 17ರ ಹರೆಯದಲ್ಲೇ ರೇಸಿಂಗ್ ಆರಂಭಿಸಿರುವ ಬೆಂಗಳೂರಿನ ಹುಡುಗಿ, ದುಬೈನ ಮರಳುಗಾಡಿಯಲ್ಲಿ ರೇಸ್ ಪೂರ್ಣಗೊಳಿಸಿದ ದೇಶದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

ಹಿಮಾಲಯದಲ್ಲಿರುವ ಏಕಾಂತವಾದ ಸುರು ಕಣಿವೆ ಸೇರಿದಂತೆ ಭಾರತದ್ಯಂತ ಸವಾರಿ ಮಾಡಿರುವ ಈಕೆ, 2,000 ಕೀ.ಮೀ.ಗಳಷ್ಟು ದೂರದ ದಕ್ಷಿಣ ಭಾರತದ ಅತ್ಯಂತ ಕಠಿಣವಾದ ದಂಡಯಾತ್ರೆಯನ್ನು (ಬಂಡೀಪುರ, ಪಾಲಕ್ಕಾಡ್, ಆಲೆಪ್ಪಿ, ಕಲ್ಪೆಟ್ಟಾ, ವಿರಾಜ್ ಪೇಟೆ, ಮಾನಂದವಾಡಿ, ಕಕ್ಕಬೆ, ಹುನ್ಸೂರು) ಕೇವಲ ಆರು ದಿನಗಳಲ್ಲಿ ಪೂರ್ಣಗೊಳಿಸಿದ್ದರು.

ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

ಪ್ರಸ್ತುತ ಟಿವಿಎಸ್ ರೇಸಿಂಗ್ ತಂಡದ ಭಾಗವಾಗಿರುವುದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿರುವ ಶ್ರೇಯಾ, "ಶ್ರೇಷ್ಠ ಸವಾರರನ್ನು ಮತ್ತು ತರಬೇತುದಾರರನ್ನು ಒಳಗೊಂಡಿರುವ ಟಿವಿಎಸ್ ರೇಸಿಂಗ್ ದೇಶದ ಅತ್ಯುತ್ತಮ ರೇಸಿಂಗ್ ತಂಡ" ಎಂದಿದ್ದಾರೆ. ಮಾತು ಮುಂದುವರಿಸಿದ ಅಯ್ಯರ್ "ಈ ಸಹಯೋಗದಿಂದ ಅತ್ಯುತ್ತಮ ಮೆಷಿನ್, ರೇಸರ್ ಮತ್ತು ತಂತ್ರಜ್ಞಾನದೊಂದಿಗೆ ಕೆಲಸ ಮಾಡಲು ಅವಕಾಶ ದೊರಕಲಿದೆ" ಎಂದು ವಿವರಿಸಿದ್ದಾರೆ.

ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

ದೇಶದ ಯುವ ಬೈಕರ್ ಗಳಿಗೆ ವಿಶೇಷವಾಗಿಯೂ ಮಹಿಳೆಯರನ್ನು ಪ್ರೋತ್ಸಾಹಿಸುವ ಇರಾದೆ ಹೊಂದಿರುವ ಶ್ರೇಯಾ, ತಮ್ಮ ಕನಸನ್ನು ಹಿಂಬಾಲಿಸುವಂತೆ ಪ್ರೇರೇಪಿಸುವುದಾಗಿ ತಿಳಿಸುತ್ತಾರೆ.

ಟಿವಿಎಸ್ ರೇಸಿಂಗ್ ತಂಡದಲ್ಲಿ ಬೆಂಗಳೂರಿನ ಉದಯೋನ್ಮುಖ ಪ್ರತಿಭೆ ಶ್ರೇಯಾ

ಪ್ರಸಕ್ತ ಸಾಲಿನಲ್ಲಿ ಶ್ರೇಯಾ ಸುಂದರ್ ಅಯ್ಯರ್ ಅವರು ತಮ್ಮ ನೆಚ್ಚಿನ ಟಿವಿಎಸ್ ಅಪಾಚಿ ಆರ್‌ಟಿಆರ್ ಬೈಕ್ ನಲ್ಲಿ ರೇಸಿಂಗ್ ಕಣಕ್ಕಿಳಿಯಲಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪುರಸ್ಕೃತರಾಗಿರುವ ಈಕೆ ವೃತ್ತಿಯಲ್ಲಿ ಸ್ವತಂತ್ರ ವಿನ್ಯಾಸಕಿಯಾಗಿದ್ದಾರೆ. ಜೊತೆಗೆ ಕ್ಲಾಸಿಕ್ ಹಾಡು ಮತ್ತು ನೃತ್ಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಟಿವಿಎಸ್ ರೇಸಿಂಗ್ ಬಗ್ಗೆ ಒಂದಿಷ್ಟು...

ಟಿವಿಎಸ್ ರೇಸಿಂಗ್ ಬಗ್ಗೆ ಒಂದಿಷ್ಟು...

33 ವರ್ಷಗಳ ಹಿಂದೆ ಸುಂದರಂ ಕ್ಲೇಟನ್ ಲಿಮಿಟೆಡ್ ನಿಂದ 50 ಸಿಸಿ ಮೊಪೆಡ್ ಗಳಿಂದ ಆರಂಭವಾದ ರೇಸಿಂಗ್ ಅಭಿಯಾನವು ರೋಡ್ ರೇಸಿಂಗ್, ಸೂಪರ್ ಕ್ರಾಸ್, ಮೊಟೊಕ್ರಾಸ್, ಡರ್ಟ್ ಟ್ರ್ಯಾಕ್, ರಾಲಿ ಸೇರಿದಂತೆ ಆನ್ ಮತ್ತು ಆಫ್ ರೋಡ್ ರೇಸಿಂಗ್ ತನಕ ಬಂದು ತಲುಪಿದೆ. 2015ರಲ್ಲಿ ವಿಶ್ವದ ಅತ್ಯಂತ ಕಠಿಣ ಡಕಾರ್ ರಾಲಿಯಲ್ಲಿ ಭಾಗವಹಿಸಿದ ದೇಶದ ಮೊದಲ ಸಂಸ್ಥೆ ಎಂಬ ಗೌರವಕ್ಕೆ ಟಿವಿಎಸ್ ಪಾತ್ರವಾಗಿತ್ತು. ಅಲ್ಲದೆ ಕಳೆದ ವರ್ಷ ಸೂಪರ್ ಕ್ರಾಸ್, ರಾಲಿ ಮತ್ತು ರೋಡ್ ರೇಸಿಂಗ್ ಸೇರಿದ ಎಲ್ಲ ಮೋಟಾರ್ ಸ್ಪೋರ್ಟ್ ಸ್ಪರ್ಧೆಗಳಲ್ಲಿ ಒಟ್ಟಾರೆ ಎಂಟು ಚಾಂಪಿಯನ್ ಶಿಪ್ ಗಳನ್ನು ಗೆದ್ದುಕೊಂಡಿದೆ.

Most Read Articles

Kannada
Read more on ಟಿವಿಎಸ್
English summary
TVS Racing Signs Agreement With Their First Woman Rider
Story first published: Thursday, April 28, 2016, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X