ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

By Nagaraja

ಈ ಬಾರಿಯ ಕೋಲ್ಕತ್ತಾದಲ್ಲಿ ಸಾಗಿದ ದುರ್ಗಾ ಪೂಜೆ ಹಲವಾರು ವಿಶೇಷತೆಗಳಿಂದ ಕೂಡಿತ್ತು. ಜೀವನದಲ್ಲಿ ಗೆಲುವು ಬೇಕೆಂದಾದರೆ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲೇಬೇಕು. ಈ ಮೊದಲೇ ನಾವು ವರದಿ ಮಾಡಿರುವಂತೆಯೇ ಹಬ್ಬದ ಸಂಭ್ರಮದ ಜೊತೆಗೆ ನಗರ ಜೀವನವನ್ನು ಆಳವಾಗಿ ಅರಿಯುವ ಗುರಿ ನಮ್ಮದಾಗಿತ್ತು. ನಮ್ಮ ಈ ಸವಾಲನ್ನು ಸ್ವೀಕರಿಸಲು ಅತಿ ನೂತನ ಟಿವಿಎಸ್ ವಿಗೊ ಸಾಥ್ ನೀಡಿತ್ತು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಜನಜಂಗುಳಿಯಿಂದ ಕೂಡಿರುವ ಭಾರತೀಯ ನಗರಗಳಲ್ಲಿ ಸ್ಕೂಟರ್ ನಲ್ಲಿ ಸಂಚರಿಸುವುದೇ ಬಹು ದೊಡ್ಡ ಸವಾಲಾಗಿದೆ. ನೀವು ಯಾರ ಬಳಿಯೂ ವಿಚಾರಿಸಿದರೂ ದ್ವಿಚಕ್ರ ವಾಹನಗಳಲ್ಲಿ ತಿರುಗಾಟ ನಡೆಸುವವರು ಸದಾ ತಮ್ಮ ಗಮ್ಯಸ್ಥಾನವನ್ನು ತಲುಪಲು ಅಡ್ಡಾದಿಡ್ಡಿ ಕಿರಿದಾದ ದಾರಿಗಳನ್ನೇ ಹಿಡಿಯುತ್ತಾರೆ ಎಂಬುದು ತಿಳಿದು ಬರುತ್ತದೆ. ವಿಪರೀತ ವಾಹನ ದಟ್ಟಣೆಯಿಂದ ಪಾರಾಗುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಈ ಸಂಭ್ರಮದ ವೇಳೆಯಲ್ಲಿ ಟಿವಿಎಸ್ ವಿಗೊ ಸ್ಕೂಟರ್ ಏರುವುದು ನಮ್ಮ ಇರಾದೆಯಾಗಿತ್ತು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಟಿವಿಎಸ್ ವಿಗೊ ಎಂಬ ಹೆಸರು ಸೂಚಿಸುವಂತೆಯೇ ನಾವು ಜೊತೆಯಾಗಿ ಮುಂದಕ್ಕೆ ಸಾಗೋಣ ಎಂಬ ಸಂದೇಶವನ್ನು ಸಾರುತ್ತದೆ. ದೇಶದ ಯುವ, ಪ್ರತಿಭಾಶಾಲಿ ಜನಾಂಗಕ್ಕಾಗಿ ಸ್ಟೈಲಿಷ್ ಟಿವಿಎಸ್ ವಿಗೊ ತಯಾರಿಸಲಾಗಿದೆ. ವೃತ್ತಿಪರರಿಂದ ಹಿಡಿದು ಕಾಲೇಜು ಹೋಗುವ ಯುವಕ/ಯುವತಿಯರಿಗೂ ಇದು ಸೂಕ್ತ ಆಯ್ಕೆಯಾಗಲಿದೆ. ಇವೆಲ್ಲದಕ್ಕೂ ತಕ್ಕುದಾದ ಮೈಬಣ್ಣವನ್ನು ಹಚ್ಚಲಾಗಿದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ದೇಶದ ಜೀವನಾಡಿಯೇ ಯುವ ಜನಾಂಗವಾಗಿರುವಾಗ ಸವಾಲು ಸ್ವೀಕರಿಸಲು ಟಿವಿಎಸ್ ವಿಗೊ ಯೋಗ್ಯವೆನಿಸಿತ್ತು. ಇದೇ ಕಾರಣಕ್ಕಾಗಿ ಈ ದುರ್ಗಾ ಪೂಜೆಯ ಹಬ್ಬದ ಸಂಭ್ರಮದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಕೋಲ್ಕತ್ತಾ ನಗರಕ್ಕೆ ಹೊರಡಲು ನಿರ್ಧರಿಸಿತ್ತು.

ಕೋಲ್ಕತ್ತಾ ನಗರವನ್ನೇ ಆಯ್ಕೆ ಮಾಡಿದ್ಯಾಕೆ?

ಕೋಲ್ಕತ್ತಾ ನಗರವನ್ನೇ ಆಯ್ಕೆ ಮಾಡಿದ್ಯಾಕೆ?

ಕಾಳಿ ದೇವತೆಯ ಹೆಸರಿನಿಂದ ಹುಟ್ಟಿಕೊಂಡಿರುವ ಕೋಲ್ಕತ್ತಾ ನಗರವು ಕಾಲಿಘಾಟ್ ಅಥವಾ ಕಲ್ಕತ್ತ ಎಂಬ ಹೆಸರಿನಿಂದಲೂ ಅರಿಯಲ್ಪಟ್ಟಿದೆ. ದೇಶದ ಅತಿ ಪುರಾತನ ಹಾಗೂ ಸಾಂಪ್ರದಾಯಿಕ ಐತಿಹ್ಯವುಳ್ಳ ಈ ನಗರವು 1911ನೇ ಇಸವಿಯ ವರೆಗೆ ಬ್ರಿಟಿಷರ ಸಾಮ್ರಾಜ್ಯಶಾಹಿ ಆಳ್ವಿಕೆಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ರಾಜಧಾನಿಯೂ ಆಗಿತ್ತು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಕೋಲ್ಕತ್ತಾದಲ್ಲಿ ಹಲವಾರು ಐತಿಹಾಸಿಕ ಸ್ಥಳಗಳಿವೆ. ಇವುಗಳ ನಡುವೆ ಕೂಲಿಗಳು ಎಳೆದುಕೊಂಡು ಓಡುತ್ತಾ ಸಾಗುವ ಕೈ ರಿಕ್ಷಾದಿಂದ ಹಿಡಿದು ದೇಶದ ಪ್ರಪ್ರಥಮ ತ್ವರಿತ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸುರಂಗ ರೈಲು ಸೇವೆ ಇಲ್ಲಿದೆ. ನಮ್ಮಲ್ಲಿನ ದಸರಾ ಹಬ್ಬವನ್ನು ಇಲ್ಲಿ ದುರ್ಗಾ ಪೂಜೆ ಎಂದು ವೈಭವದಿಂದ ಆಚರಿಸುತ್ತಾರೆ. ಈ ವೇಳೆಯಲ್ಲಂತೂ ಕೋಲ್ಕತ್ತಾ ನಗರವನ್ನು ನೋಡುವುದು ತುಂಬಾನೇ ಚೆನ್ನಾಗಿರುತ್ತದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಈ ದಿನಗಳಲ್ಲಿ ನಗರವು ಮಲಗುವುದೇ ಇಲ್ಲ. ನಗರದೆಲ್ಲೆಡೆ ಜನಸಾಗರ ಹರಿದಾಡುತ್ತದೆ. ಎಲ್ಲಿ ನೋಡಿದರೂ ಬಣ್ಣ ಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗೆಯ ಮೂರ್ತಿಗಳು, ತಳಿರು ತೋರಣ, ವ್ಯಾಪಾರ ಮಳಿಗೆಗಳು ಕಣ್ಮನ ಸೆಳೆಯುತ್ತದೆ. ಈ ಎಲ್ಲ ಸವಾಲುಗಳನ್ನು ಸ್ವೀಕರಿಸಲು ಟಿವಿಎಸ್ ವಿಗೊ ಜೊತೆ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರಧಾನ ಸಂಪಾದಕರಾದ ಜೊಬೊ ಕುರುವಿಲ್ಲಾ, ಉಪ ಸಂಪಾದಕ ರಾಜ್ ಕಮಲ್ ಮತ್ತು ಛಾಯಾಗ್ರಾಹಕ ಅಭಿಜಿತ್ ಪ್ರಯಾಣ ಬೆಳೆಸಿದ್ದರು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಇತಿಹಾಸ ಪ್ರಸಿದ್ಧ ನಗರಕ್ಕೆ ಭೇಟಿ ನೀಡಿದಾಗಲೇ ಮೊದಲು ದರ್ಶನವಾಗಿರುವುದು 1857ರಲ್ಲಿ ನಿರ್ಮಿತ ಏಷ್ಯಾದ ಅತಿ ಪುರಾತನ ಯಂಗ್ ಮೆನ್ಸ್ ಕ್ರಿಸ್ಟಿಯನ್ ಅಸೋಸಿಯೇಷನ್ ಕಟ್ಟಡ. ಇದೂ ಈಗಲೂ ಹೆಚ್ಚಿನ ಬದಲಾವಣೆಗಳಿಲ್ಲದೆ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ಗಮನಾರ್ಹವೆನಿಸುತ್ತದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಕಾರು, ಬೈಕ್ ಮಾತ್ರವಲ್ಲದೆ ಸ್ಕೂಟರ್ ಮೇಲಿನ ಪ್ರೀತಿಯೇ ಟಿವಿಎಸ್ ವಿಗೊ ಜೊತೆಗೆ ನಮ್ಮ ತಂಡದ ಸದಸ್ಯರಿಗೆ ಕೋಲ್ಕತ್ತಾ ನಗರಕ್ಕೆ ಕಾಲಿಡಲು ಪ್ರೇರಣೆಯಾಗಿದೆ. ಚಲಿಸುವ ವಾಹನಗಳಿಗೆ ಗಡಿ ರೇಖೆಗಳಿರುವುದಿಲ್ಲ ಎಂಬ ಹಾಗೆ ಉಲ್ಲಾಸದ ನಗರದಲ್ಲಿ ಹನಿ ಹನಿ ಮಳೆಯು ತನ್ನ ಸಿಂಚನದೊಂದಿಗೆ ಸ್ವಾಗತದೊಂದಿಗೆ ಬರಮಾಡಿಕೊಂಡಿತ್ತು. ಆಗಲೇ ಪರಿಣಾಮಕಾರಿ ಎಲೆಕ್ಟ್ರಿಕ್ ಸ್ಟ್ಯಾರ್ಟ್ ನೊಂದಿಗೆ ಕಿಕ್ ಸ್ಟ್ಯಾರ್ಟ್ ನೊಂದಿಗೆ ಟಿವಿಎಸ್ ವಿಗೊ ತನ್ನ ಸಾಮರ್ಥ್ಯವನ್ನು ತೋರಿಸಿತ್ತು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಬೆಂಗಳೂರಿನ ಹಾಗೆ ಸ್ಥಳೀಯ ಪ್ರದೇಶದ ಬಗ್ಗೆ ಯಾವುದೇ ಜ್ಞಾನವಿಲ್ಲದಿರುವುದರಿಂದ ಪದೇ ಪದೇ ಗೂಗಲ್ ಮ್ಯಾಪ್ ನೆರವನ್ನು ಪಡೆಯಲಾಗಿತ್ತು. ಕೋಲ್ಕತ್ತಾದ ಜನಪ್ರಿಯ ಪ್ರದೇಶಗಳಿಗೆ ಭೇಟಿ ನೀಡಿ ದುರ್ಗಾ ಪೂಜೆಯ ಪರಿಪೂರ್ಣ ಆನಂದವನ್ನು ಸವಿಯುವುದು ನಮ್ಮ ಇರಾದೆಯಾಗಿತ್ತು. ಇದಕ್ಕಾಗಿ ಅಲ್ಲಿನ ಸ್ಥಳೀಯರು ನಮ್ಮ ನೆರವಿಗೆ ಬಂದಿದ್ದರು. ಅವರೇ ಸೂಚಿಸಿದ ಕೆಲವು ಜನಪ್ರಿಯ ಸ್ಥಳಗಳು ಇಂತಿದೆ.

ದಕ್ಷಿಣ ಕೋಲ್ಕತ್ತಾ

1. ಎಕ್ ದಾಲಿಯಾ ಎವರ್ ಗ್ರೀನ್ - ಗರಿಯಹಟ್

2. ಸಿಂಘಿ ಪಾರ್ಕ್ - ಗರಿಯಹಟ್

3. ಬ್ಯಾಲಿಗಂಗ್ ಕಲ್ಚರಲ್ ಅಸೋಸಿಯೇಷನ್ - ಲೇಕ್ ರೋಡ್

4. ಮಡೋಕ್ಸ್ ಸ್ಕ್ವೇರ್ - ರಿಚ್ಚಿ ರೋಡ್

5. ಸುರುಚಿ ಸಂಘ - ಆಲಿಪೋರ್

6. ಚೆತ್ಲಾ ಆಗ್ರಾಗಾಮಿ - ಚೆತ್ಲಾ

7. ದೇಶಪ್ರಿಯ ಪಾರ್ಕ್ - ರಾಶ್ ಬೆಹಾರಿ ಅವೆನ್ಯೂ

8. ಬೆಹಲಾ ನೊಟನ್ ಡೋಲ್ - ಬೆಹಲಾ

9. ಸೃಷ್ಟಿ - ಬೆಹಲಾ

10. ಸಹಜಾತ್ರಿ - ಬೆಹಲಾ

ಕೋಲ್ಕತ್ತಾ ಕೇಂದ್ರ ಭಾಗ

1. ಮೊಹಮ್ಮದ್ ಅಲಿ ಪಾರ್ಕ್ - ಸೆಂಟ್ರಲ್ ಅವೆನ್ಯೂ

2. ಕಾಲೇಜ್ ಸ್ಕ್ವೇರ್ - ಕಾಲೇಜ್ ಸ್ಟ್ರೀಟ್

3. ಲೆಬುಟೋಲಾ ಪಾರ್ಕ್ - ಸಂತೋಷ್ ಮಿತ್ರ ಸ್ಕ್ವೇರ್

4. ಪಾರ್ಕ್ ಸರ್ಕಲ್ ಮೈದಾನ್ - ಪಾರ್ಕ್ ಸರ್ಕಸ್ 7 ಪಾಯಿಂಟ್ ಕ್ರಾಸಿಂಗ್

5. ಚಲ್ತಾಭಾಗನ್ - ಮನಿಕ್ಟಾಲಾ ಲೋಹಪಟ್ಟಿ

ಉತ್ತರ ಕೋಲ್ಕತ್ತಾ

1. ಕುಮಾರ್ತುಲಿ ಪಾರ್ಕ್ - ಕುಮಾರ್ತುಲಿ

2. ಕಾಶಿ ಬೋಸ್ ಲೇನ್ - ಕಾಶಿ ಬೋಸ್ ಲೇನ್

3. ಆದಿಬಾಶಿ ಬ್ರಿಂದಾ - ಲೇಕ್ ಟೌನ್

4. ತರುಣ್ ಸಂಘ - ಡಮ್ ಡಮ್ ಪಾರ್ಕ್

5. ಭಾಗ್ ಬಜಾರ್ ಸರ್ಬಜೊನಿನ್ - ಭಾಗ್ ಬಜಾರ್ ಪಾರ್ಕ್

ಪೂರ್ವ ಕೋಲ್ಕತ್ತಾ

1. ಎಫ್ ಡಿ ಬ್ಲಾಕ್ - ಸಾಲ್ಟ್ ಲೇಕ್

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಆಧುನಿಕ ಜೀವನದಲ್ಲಿ ಫೋನ್ ಅವಿಭಾಜ್ಯ ಅಂಗವಾಟಿಬಿಟ್ಟಿದೆ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಚಾರ್ಜ್ ತೊಂದರೆಯಿಂದಾಗಿ ಹೊರಗಡೆ ಸುತ್ತಾಡಲು ಆಗುದಿಲ್ಲವೆಂಬ ಕೊರಗು ಹಲವರನ್ನು ಕಾಡುತ್ತಿದೆ. ಇನ್ನು ಹೊಸ ನಗರ ಪ್ರದೇಶಗಳಿಗೆ ಭೇಟಿ ಕೊಡುವಾಗ ಆನ್ ಲೈನ್ ನಲ್ಲಿ ಸ್ಥಳಾನ್ವೇಷಣೆಗಾಗಿ ಸ್ಮಾರ್ಟ್ ಫೋನ್ ಅತ್ಯಗತ್ಯವಾಗಿದೆ. ತ್ರಿಜಿ ಆಗಲಿ ಅಥವಾ 4ಜಿ ಆಗಲಿ ಮೊಬೈಲ್ ಚಾರ್ಜ್ ಬೇಗನೇ ಖಾಲಿ ಆಗುತ್ತದೆ. ಆದರೆ ಟಿವಿಎಸ್ ವಿಗೊದಲ್ಲಿರುವ ಫೋನ್ ಚಾರ್ಜಿಂಗ್ ವ್ಯವಸ್ಥೆಯು ಈ ಎಲ್ಲ ತೊಂದರೆಗಳಿಗೆ ಥಟ್ ಅಂತ ಉತ್ತರ ನೀಡುತ್ತದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಕೋಲ್ಕತ್ತಾ ವಿಗೊ ಚಾಲೆಂಜ್ ನಾವು ಅಂದುಕೊಂಡಿದ್ದಕ್ಕಿಂತಲೂ ಕಬ್ಬಿಣದ ಕಡಾಲೆಯಾಗಿ ಮಾರ್ಪಟ್ಟಿತ್ತು. ಹೊಸ ನಗರ, ಹೊಸ ರಸ್ತೆ, ಇಕ್ಕಟ್ಟಿನ ಸ್ಟ್ರೀಟ್ ಇವೆಲ್ಲದಕ್ಕೂ ನಡುವೆ ಗೂಗಲ್ ಮ್ಯಾಪಿಂಗ್ ಮಾಡುವುದೇ ದೊಡ್ಡ ಸವಾಲಾಗಿತ್ತು. ಆದರೂ ನಮ್ಮ ಪ್ರಯಾಣದುದ್ದಕ್ಕೂ ಅತ್ಯುತ್ತಮ ಹ್ಯಾಡ್ಲಿಂಗ್ ನೀಡಿದ ಟಿವಿಎಸ್ 110 ಸಿಸಿ ಸ್ಕೂಟರನ್ನು ಮೆಚ್ಚಲೇ ಬೇಕು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ನಗರದಲ್ಲಿ ಕೆಲವೇ ಕೆಲವು ಹೊತ್ತು ಸುತ್ತಾಡಿದಾಗಲೇ ನಮಗೆ ತಿಳಿದು ಬಂದಿರುವ ವಿಚಾರವೆಂದರೆ ಕಿಕ್ಕಿರಿದು ತುಂಬಿದ ಜನರ ಮಧ್ಯೆ ನಗರ ಸಾರಿಗೆ ಬಸ್ಸು ಅಥವಾ ಹಳದಿ ಟ್ಯಾಕ್ಸಿಗಳಲ್ಲಿ ತೆರಳಿದರೆ ದುರ್ಗಾ ದೇವಿಯನ್ನು ಪೂಜಿಸುವ ಮಂಟಪಗಳಿಗೆ ಬೇಗನೇ ತಲುಪುವುದು ಕಷ್ಟಸಾಧ್ಯವಾಗಿದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ಜನ ಸಾಮಾನ್ಯರು ಮಾನವೀಯತೆಯನ್ನು ಮೆರೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಇದು ನಮಗೂ ಸ್ಫೂರ್ತಿದಾಯಕವನಿಸಿದೆ. ಪ್ರತಿ ಮಂಟಪದಿಂದ ಮಂಟಪಕ್ಕೂ ತೆರಳಿದಾಗಲೂ ಸುಲಭೆ ಚಾಲನೆಯನ್ನು ನೀಡುವ ಟಿವಿಎಸ್ ವಿಗೊ ನಮ್ಮ ಆಶ್ರಯದಾತನೆನಿಸಿಕೊಂಡಿತ್ತು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಅತ್ತ ಬೆಂಗಳೂರಿನಲ್ಲಿ ಬಹುತೇಕ ಮಂದಿ ಹೆಚ್ಚು ದುಬಾರಿ ಎನಿಸಿಕೊಂಡರೂ ಟ್ಯಾಕ್ಸಿಯಲ್ಲೇ ತೆರಳಲು ಇಷ್ಟ ಪಡುತ್ತಾರೆ. ಒಂದೆಡೆ ಟ್ರಾಫಿಕ್ ಸಮಸ್ಯೆ ಮಗದೊಂದು ಕಡೆ ದುಂದು ವೆಚ್ಚ ಹೀಗೆ ಅನೇಕ ಸಮಸ್ಯೆಗಳು ಕಾಡುತ್ತದೆ. ಆದರೆ ಕೋಲ್ಕತ್ತಾ ನಗರದಲ್ಲಿ ಸ್ಕೂಟರ್ ನಲ್ಲಿನ ಪ್ರಯಾಣದ ಬಳಿಕ ನಮ್ಮ ಆಲೋಚನೆಯೇ ಸಂಪೂರ್ಣವಾಗಿ ಬದಲಾಗಿದೆ. ಇದು ಮೀಟರ್ ಟ್ಯಾಕ್ಸಿಗಿಂತಲೂ ಕಡಿಮೆ ವೆಚ್ಚ ಹಾಗೂ ಬಹುಬೇಗನೇ ಗಮ್ಯಸ್ಥಾನವನ್ನು ತಲುಪಬಹುದಾಗಿದೆ. ಮಂಟಪದಿಂದ ಮಂಟಪಕ್ಕೆ ತೆರಳುವಾಗ ಬರೋಬ್ಬರಿ 800 ರುಪಾಯಿ ಖರ್ಚಾಗಬೇಕಿದ್ದ ಸ್ಥಳದಲ್ಲಿ ನಮ್ಮ ಪ್ರಯಾಣವು 25 ರುಪಾಯಿಗಳ ಇಂಧನ ವೆಚ್ಚದಲ್ಲಿ ಮುದುಡಿಕೊಂಡಿದೆ. ಈ ಮೂಲಕ ಟಿವಿಎಸ್ ವಿಗೊದಲ್ಲಿನ ಪ್ರಯಾಣ ಲಾಭದಾಯಕವೆನಿಸಿದೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಮೊದಲ ದಿನ ಆರಂಭದಲ್ಲಿ ಎತ್ತ, ಹೇಗೆ ತೆರಳಬೇಕೆಂಬ ಗೊಂದಲದಲ್ಲಿದ್ದೆವು. ಆದರೆ ದಿನ ಸಾಗಿದಂತೆ ಟಿವಿಎಸ್ ವಿಗೊ ನಮ್ಮ ಸವಾಲುಗಳಿಗೆಲ್ಲ ಉತ್ತರ ಹುಡುಕುತ್ತಲೇ ಸಾಗುತ್ತಿದ್ದವು. ಸೂರ್ಯಾಸ್ತದ ವೇಳೆಗೆ ನಗರದೆಲ್ಲೆಡೆ ಬೆಳಕಿನ ಶೃಂಗಾರ ಕಾವ್ಯ ಬರೆಯಲಾಗಿತ್ತು. ದುರ್ಗಾ ದೇವಿಯ ಮಂಟಪದಿಂದ ಹಿಡಿದು, ನಗರ ದರ್ಶನ, ಫೋಟೋಗ್ರಾಫಿ ಮಾಡಲು ಹೀಗೆ ಎಲ್ಲ ಇಕ್ಕಟ್ಟಿನ ಪ್ರದೇಶದಲ್ಲೂ ಟಿವಿಎಸ್ ವಿಗೊ ನಿಜಕ್ಕೂ ಶ್ಲಾಘನೀಯವೆನಿಸಿದೆ.

ದುರ್ಗಾ ಪೂಜೆಯ ಸಂಭ್ರಮದಲ್ಲಿ ಕೋಲ್ಕತ್ತಾ ನಗರಿ

ದುರ್ಗಾ ಪೂಜೆಯ ಸಂಭ್ರಮದಲ್ಲಿ ಕೋಲ್ಕತ್ತಾ ನಗರಿ

ಬಿಡುವಿಲ್ಲದ ಕೋಲ್ಕತ್ತಾ ನಗರದಲ್ಲಿ ಶಾಂತಚಿತ್ತರಾಗಿ ಕೈಜೋಡಿಸಿ ದುರ್ಗಾ ದೇವಿಯನ್ನು ಪೂಜಿಸುತ್ತಿರುವ ಮಕ್ಕಳು.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಸಿಂಘಿ ಪಾರ್ಕ್ ಮಂಟಪದಲ್ಲಿ ಬೃಹತ್ ದುರ್ಗಾ ದೇವಿಯ ಮೂರ್ತಿಯ ಫೋಟೊ ಕ್ಲಿಕ್ಕಿಸುವ ಸಾರ್ವಜನಿಕರ ನಡುವೆ ನಾವು ಭಾಗಿ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಬ್ಯಾಲಿಗಂಗೆಯ ಏಕ್ ದಾಲಿಯಾ ಮಂಟಪದಲ್ಲಿ ಕಂಡುಬಂದ ಮಹಿಷಾಸುರ ಮರ್ಧಿನಿ

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಬಹಳ ಅದ್ದೂರಿಯಾಗಿ ಕೊಂಡಾಡುತ್ತಿರುವುದಕ್ಕೆ ಮಗದೊಂದು ಪುರಾವೆ.

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆಯ ಸಂಭ್ರಮ. ಈ ಲೇಖನದ ಎರಡನೇ ಭಾಗವು ಸದ್ಯದಲ್ಲೇ ಪ್ರಕಟಗೊಳ್ಳಲಿದ್ದು ತಾಜಾ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದಲು ಮರೆಯದಿರಿ. ಹ್ಯಾಪಿ ಡ್ರೈವಿಂಗ್!

Most Read Articles

Kannada
Read more on ಟಿವಿಎಸ್
English summary
Here #WeGo Exploring The Charms And Delights Of Kolkata On #Durga Puja — Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X