ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಡ್ರೈವ್ ಸ್ಪಾರ್ಕ್ ಜೊತೆ ದೇಶದ ಪ್ರಮುಖ ನಗರಗಳಿಗೆ ಪ್ರಯಾಣ ಹೊರಟಿರುವ ಟಿವಿಎಸ್ ವಿಗೊ, ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಸಂಭ್ರಮವನ್ನು ಆಚರಿಸಿಕೊಂಡಿದೆ.

By Nagaraja

ನಮ್ಮ ಮೊದಲನೇ ಲೇಖನದಲ್ಲಿ ವರ್ಣನೆ ಮಾಡಿರುವಂತೆಯೇ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂಭ್ರಮ ಬಹಳ ಅದ್ದೂರಿಯಾಗಿಯೇ ಆಚರಣೆಯಾಗಿತ್ತು. ದಿನವಿಡೀ ಸುತ್ತಾಟದ ಬಳಿಕ ರಾತ್ರಿಯ ವೇಳೆಯಲ್ಲಿ ದೀಪಾಲಂಕಾರ ಕೂಡಿದ ದುರ್ಗಾ ದೇವಿಯನ್ನು ಪೂಜಿಸುತ್ತಿರುವ ಮಂಟಪಕ್ಕೆ ಟಿವಿಎಸ್ ವಿಗೊದೊಂದಿಗೆ ನಮ್ಮ ತಂಡದ ಪ್ರಯಾಣವು ಮತ್ತಷ್ಟು ಸಂತೋಷದಾಯಕವಾಗಿ ಮುಂದುವರಿದಿತ್ತು.

ಅಲ್ಲಿನ ಸ್ಥಳೀಯರ ಸಲಹೆ ಸೂಚನೆಗಳನ್ನು ಪಡೆದ ನಮಗೆ ಮಂಟಪಗಳು ತಡ ರಾತ್ರಿಯ ವರೆಗೂ ತೆರೆದುಕೊಳ್ಳಲಿದೆ ಎಂಬುದು ತಿಳಿದು ಬಂದಿತ್ತು. ಆಗಲೇ ಈ ಎಲ್ಲ ಸವಾಲುಗಳನ್ನು ಸ್ವೀಕರಿಸಲು ಟಿವಿಎಸ್ ವಿಗೊ ತಯಾರಾಗಿ ನಿಂತಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಜೀವನದಲ್ಲಿ ಎರಡನೇ ಅವಕಾಶ ಎಂಬದು ಇದೆಯೆಂದರೆ ಅದುವೇ 'ನಾಳೆ' ಎಂಬ ದಿನವಾಗಿರುತ್ತದೆ. ಇದೇ ಕಾರಣದಿಂದ ಉಲ್ಲಾಸದ ನಗರದಲ್ಲಿ ವಿಗೊ ಜೊತೆಗಿನ ಪ್ರಯಾಣ ಹೆಚ್ಚಿನ ಪ್ರಾಮುಖ್ಯ ಗಿಟ್ಟಿಸಿಕೊಳ್ಳುತ್ತದೆ. ಅಷ್ಟಕ್ಕೂ ಟಿವಿಎಸ್ ವಿಗೊ ಚಾಲನೆ ಆನಂದಿಸಲು ಸಾಧ್ಯವೇ? ಇತರೆ ಸ್ಕೂಟರ್ ಗಳಿಗಿಂತ ಇದು ಹೇಗೆ ಭಿನ್ನ ಎಂಬುದನ್ನೋ ನೋಡೋಣ ಬನ್ನಿ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಕತ್ತಲು ಆವರಿಸಿದಂತೆ ನಗರೆದೆಲ್ಲಡೆ ವಿವಿಧ ವರ್ಣಗಳಿಂದ ಕಂಗೊಳಿಸುವ ದೀಪಾಲಂಕಾರ ನಮ್ಮನ್ನು ಕೈಬೀಸಿ ಸ್ವಾಗತಿಸುತ್ತಿದ್ದವು. ಸಂಜೆ ಸುರಿದ ಮಳೆಯು ಉತ್ಸಾಹಭರಿತರಾದ ಬಂಗಾಳಿಯನ್ನಾಗಲಿ ಅಥವಾ ನಮ್ಮ ವಿಗೊವನ್ನು ಹಬ್ಬದ ಸಂಭ್ರಮ ಆಚರಣೆಯನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ಒದ್ದೆಯಾದ ರಸ್ತೆಗಳಲ್ಲೂ ಟಿವಿಎಸ್ ವಿಗೊ ಅತ್ಯುತ್ತಮ ಹಿಡಿತ ಪ್ರದಾನ ಮಾಡುವಲ್ಲಿ ಯಶಸ್ವಿಯಾಗಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಕಿರಿದಾದ ಇಕ್ಕಟ್ಟಾಗಿ ಕೂಡಿದ ಬೀದಿಗಳಲ್ಲಿ ಪ್ರಯಾಣಿಸಿದ ಬಳಿಕ ನಮ್ಮ ಸಂಚಾರವು ದುರ್ಗಾ ದೇವಿ ಮಂಟಪದತ್ತ ಮುಖ ಮಾಡಿತ್ತು. ತಕ್ಷಣ ಅಲ್ಲಿ ಕಾಣಿಸಿದ ರಾಮಮಂದಿರ ಸಮೀಪದ ಚೋರ್ ಬಾಗನ್ ಸರ್ಬೊಜಿನಿನ್ ಮನ ಸೆಳೆಯುತ್ತಿತ್ತು. ಇಲ್ಲಿನ ಚಿತ್ರಗಳೇ ಇವನ್ನು ಸಾರುತ್ತಿದೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಈ ಆನಂದದಾಯಕ ಕ್ಷಣವನ್ನು ಮಿಸ್ ಮಾಡಲು ಇಚ್ಛಿಸದ ನಮ್ಮ ತಂಡವು ಸುಮಾರು ಅರ್ಧ ತಾಸುಗಳಷ್ಟು ಕಾಲ ಅಲ್ಲಿಯೇ ಟಿವಿಎಸ್ ವಿಗೊ ಜೊತೆ ಫೋಟೋ ಕ್ಲಿಕ್ಕಿಸುವಲ್ಲಿ ಮಗ್ನವಾಗಿತ್ತು. ಬಳಿಕ ಅಲ್ಲಿಂದ ನೇರವಾಗಿ ಮಗದೊಮ್ಮೆ ಇಕ್ಕಟ್ಟಾದ ರಸ್ತೆಗಳಲ್ಲಿ ಬಿಡುವಿಲ್ಲದ ಟ್ರಾಫಿಕ್ ನಲ್ಲಿ ಪ್ರಯಾಣವನ್ನು ಮುಂದುವರಿಸಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಪ್ರತಿ ಬೀದಿ ಬೀದಿಯಲ್ಲೂ ಹಬ್ಬದ ಕಹಳೆ ಮೂಡಿರುವುದು ದುರ್ಗಾ ದೇವಿಯ ಮಹಿಮೆಯನ್ನು ಸಾರುತ್ತದೆ. ಪ್ರತಿಯೊಂದು ಬೀದಿಗಳಲ್ಲಿ ವಿವಿಧ ಅಲಂಕಾರದಿಂದ ಕೂಡಿದ ವರ್ಣಮಯ ಲೈಟಿಂಗ್ಸ್ ಕಣ್ಮಣ ಸೆಳೆಯುತ್ತಿದ್ದವು. ಟಿವಿಎಸ್ ವಿಗೊ ಪ್ರತಿಯೊಂದಕ್ಕೂ ಫೋಸ್ ಕೊಡುತ್ತಲೇ ಮುಂದಕ್ಕೆ ಸಾಗುತ್ತಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಕೆಲವೊಮ್ಮೆ ಜೀವನವನ್ನು ಬೆಳಗಾಗಿಸಲು ಮನಸೆಳೆಯುವ ಬಣ್ಣಗಳ ಅಗತ್ಯವಿರುತ್ತದೆ. ಇದರಿಂದಲೇ ಹೊಸದಾಗಿ ಕಾರು ಬೈಕ್ ಖರೀದಿಸುವ ಪ್ರತಿಯೊಬ್ಬನ ಜೀವನದಲ್ಲೂ ಬಣ್ಣವು ಪ್ರಮುಖ ಘಟಕವಾಗಿ ಪರಿಣಮಿಸುತ್ತದೆ. ಇದನ್ನು ಚೆನ್ನಾಗಿ ಅರಿತುಕೊಂಡಿರುವ ಟಿವಿಎಸ್, ಗ್ರಾಹಕರ ಬಯಕೆಗಳಿಗೆ ತಕ್ಕಂತೆ ವಿವಿಧ ಬಣ್ಣಗಳ ಆಯ್ಕೆಯನ್ನು ನೀಡುತ್ತದೆ. ಇಗೊ ನೋಡಿ ವೋಲ್ಕನೋ ರೆಡ್ ಬಣ್ಣದಲ್ಲಿ ಕಂಗೊಳಿಸುವ ಟಿವಿಎಸ್ ವಿಗೊ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಡ್ಯಾಜ್ಲಿಂಗ್ ನೀಲಿ ಬಣ್ಣವು ಟಿವಿಎಸ್ ವಿಗೊ ಸ್ಕೂಟರ್ ಗೆ ಹೆಚ್ಚಿನ ಆಕರ್ಷಣೆಯನ್ನು ತುಂಬುತ್ತಿದೆ. ವೈಯಕ್ತಿಕವಾಗಿ ಈ ಕಡು ನೀಲಿ ಬಣ್ಣದ ವಿಗೊ ಸ್ಕೂಟರ್ ನಮಗೂ ಇಷ್ಟವಾಯಿತು. ಅದರಲ್ಲೂ ರಾತ್ರಿಯ ವೇಳೆ ಹಬ್ಬದ ದೀಪಾಲಂಕಾರದಲ್ಲಿ ಈಕೆಯನ್ನು ನೋಡುವ ಖುಷಿಯೇ ಬೇರೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

'ಸಿಟಿ ಆಫ್ ಜಾಯ್' ನಗರದಲ್ಲಿ ತಡ ರಾತ್ರಿಯ ವರೆಗೂ ಟಿವಿಎಸ್ ವಿಗೊದಲ್ಲಿ ನಮ್ಮ ಶೋಧನೆ ಮುಂದುವರಿದಿತ್ತು. ಆದರೆ ಯಾರು ಕೂಡಾ ಆಯಾಸವಾದಂತೆ ಭಾಸವಾಗಿರಲಿಲ್ಲ. ಆದರೆ ಅಲ್ಲೇ ಬೀದಿಯಲ್ಲಿ ಮಲಗಿದ ಶ್ವಾನವೊಂದು ಮಾತ್ರ ತನಗೆ ಯಾರೂ ತೊಂದರೆ ಕೊಡಬಾರದೆಂದು ನಿದ್ರೆಗೆ ಜಾರಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ದುರ್ಗಾ ಪೂಜೆ ಒಂದು ಜಾಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಹಾಗಾಗಿ ಸ್ಥಳೀಯರೆಲ್ಲರು ಒಗ್ಗಟ್ಟಾಗಿ ಉತ್ಸವದ ವಾತಾವರಣದಲ್ಲಿ ಹಬ್ಬವನ್ನು ಆಚರಿಸುತ್ತಿದ್ದರು. ಇದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವಿವಿಧತೆಯಲ್ಲಿ ಏಕತೆ ಎಂಬಂತೆ ಎಲ್ಲ ಮತ ಬಾಂಧವರೂ ಒಗ್ಗಟ್ಟಾಗಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಮಹಿಷಾಸುರ ಮರ್ಧಿನಿ ರೂಪದಲ್ಲಿ ದುರ್ಗಾ ದೇವಿಯನ್ನು ಕೋಲ್ಕತ್ತಾದಲ್ಲಿ ಕೊಂಡಾಡಲಾಗುತ್ತದೆ. ಇದು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವೂ ಆಗಿದೆ. ಇದರ ಬಗ್ಗೆ ಗಾಢವಾಗಿ ಅರಿಯಬೇಕೆಂದರೆ ಜೀವನದಲ್ಲಿ ಒಂದು ಬಾರಿಯಾದರೂ ದುರ್ಗಾ ಪೂಜಾ ವೇಳೆಯಲ್ಲಿ ಇಲ್ಲಿಗೆ ಭೇಟಿ ಕೊಡತಕ್ಕದ್ದು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ದುರ್ಗಾ ಪೂಜೆಯ ವೇಳೆಯಲ್ಲಿ ಬೀದಿಗಳಲ್ಲಿ ದೊರಕುವ ರುಚಿಕರವಾದ ಸ್ವಾದ್ವಿಷ್ಟ ಆಹಾರವನ್ನಂತೂ ಮಿಸ್ ಮಾಡಕೂಡದು. ಸಂಜೆಯಾಗುತ್ತಿದ್ದಂತೆ ಕೋಲ್ಕತ್ತಾದ ಬೀದಿಗಳಲ್ಲಿ ಪುಚ್ಕದ ಗಾಡಿಗಳು ಅರಳಿ ನಿಲ್ಲುತ್ತದೆ. ನಾವಿಲ್ಲಿ ಪಾನಿಪೂರಿ ಅಂದರೆ ಅವರಿದನ್ನು ಪುಚ್ಕ ಎನ್ನುತ್ತಾರೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಅಂಧಕಾರದಿಂದ ಬೆಳಕಿನತ್ತ ಎಂಬ ಮಾತಿನಂತೆ ನಮ್ಮ ಮನಸ್ಸನ್ನು ದುರ್ಗಾ ದೇವಿಯ ಮಂಟಪಗಳು ಸೆಳೆಯುತ್ತಿದ್ದವು. ಕೋಲ್ಕತ್ತಾದಲ್ಲಿ ಹಗಲಿರುಳು ದುರ್ಗಾ ದೇವಿ ಹಬ್ಬವನ್ನು ಕೊಂಡಾಡಲಾಗುತ್ತಿದೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಈ ಎಲ್ಲ ಹಬ್ಬದ ಸಂಭ್ರಮದ ವಾತಾವರಣವನ್ನು ಆಚರಿಸಿಕೊಳ್ಳಲು ನೀವು ಕಾರು ಅಥವಾ ಬೈಕ್ ನಿಂದ ಸಂಚರಿಸಿದರೆ ಒಂದಿಂಚು ಮುಂದೆ ಸಾಗುವುದು ಕಷ್ಟಕರ. ಆದರೆ ಸರಳ ಹಾಗೂ ಸುಲಭ ಚಾಲನೆಯ ನಮ್ಮ ಟಿವಿಎಸ್ ವಿಗೊ ಇವೆಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತಿತ್ತು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಕೋಲ್ಕತ್ತಾದಂತಹ ಬಿಡುವಿಲ್ಲದ ವಾಹನ ದಟ್ಟಣೆಯ ಪ್ರದೇಶದಲ್ಲಿ ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳುವ ಟಿವಿಎಸ್ ವಿಗೊ ಉತ್ತಮ ಆಯ್ಕೆಯಾಗಿರಲಿದೆ. ಇದು ನಗರ ಅಭಿರುಚಿಗೆ ತಕ್ಕಂತೆ ತನ್ನ ಶೈಲಿಯಲ್ಲೂ ಯಾವುದೇ ರಾಜಿಗೂ ತಯಾರಾಗಿಲ್ಲ. ಐದು ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಟಿವಿಎಸ್ ವಿಗೊದಲ್ಲಿ 250 ಕೀ.ಮೀ. ಕ್ಕೂ ಹೆಚ್ಚು ದೂರ ಸರಾಗವಾಗಿ ಸುತ್ತಾಡಬಹುದಾಗಿದೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಇಲ್ಲಿ ನಮ್ಮ ಕೋಲ್ಕತ್ತಾ ಯಾತ್ರೆಯನ್ನು ಸ್ಮರಣೀಯವಾಗಿಸಲು ನೆರವಾಗಿರುವ ಟಿವಿಎಸ್ ವಿಗೊ ಸ್ಕೂಟರ್ ಸಾಧನೆಗೆ ಧನ್ಯವಾದ ಹೇಳಲೇಬೇಕು. ಟಿವಿಎಸ್ ನಿಖರತೆಯನ್ನು ಮಾತುಗಳಲ್ಲಿ ವರ್ಣಿಸುವುದು ಅಸಾಧ್ಯ. ಇಲ್ಲಿನ ಚಿತ್ರಗಳೇ ಇದನ್ನು ಸಾರಲಿದೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಬಾನೆತ್ತರಕ್ಕೂ ಪಸರಿಸಿದ ಕೋಲ್ಕತ್ತಾ ದುರ್ಗಾ ದೇವಿಯ ಹಬ್ಬದ ಸಂಭ್ರಮ

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ದುರ್ಗಾ ದೇವಿ ಮೂರ್ತಿಯನ್ನು ನದಿಯಲ್ಲಿ ಮುಳುಗಿಸುವುದಕ್ಕಿಂತಲೂ ಮುಂಚಿತವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಭಕ್ತಾದಿಗಳು.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಭಕ್ತಿ ಭಾವ ಪೂರ್ಣವಾಗಿ ನದಿಯಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು ಮುಳುಗಿಸಲಾಗುತ್ತಿದೆ.

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು!

ಪ್ರಶಾಂತವಾಗಿ ಹರಿಯುತ್ತಿರುವ ನದಿಯಲ್ಲಿ ಕಣ್ಣೆತ್ತಿ ನೋಡುತ್ತಿರುವ ದುರ್ಗಾ ದೇವಿ

ಪ್ರವಾಸಿಗರು ಗಮನ ವಹಿಸಬೇಕಾದ ಅಂಶಗಳು

ಪ್ರವಾಸಿಗರು ಗಮನ ವಹಿಸಬೇಕಾದ ಅಂಶಗಳು

ದುರ್ಗಾ ದೇವಿ ಪೂಜೆಯ ವೇಳೆಯಲ್ಲಿ ಕೋಲ್ಕತ್ತಾಗೆ ತೆರಳುವ ಪ್ರವಾಸಿಗರು ಗಮನಿಸಬೇಕಾದ ಅಂಶಗಳು: ನಗರದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿರುವುದರಿಂದ ಭಾರಿ ಜನಸ್ತೋಮ ಕಂಡುಬರುವುದು. ಈ ವೇಳೆಯಲ್ಲಿ ನಡೆದಾಡುವುದು ಕಷ್ಟವೆನಿಸುವುದರಿಂದ ಟಿವಿಎಸ್ ವಿಗೊದಂತಹ ಸ್ಕೂಟರ್ ಸವಾರಿ ಹೆಚ್ಚು ಸೂಕ್ತವೆನಿಸುವುದು. ಇದರಿಂದ ಸಮಯ ಲಾಭದೊಂದಿಗೆ ದುಡ್ಡನ್ನು ಉಳಿತಾಯ ಮಾಡಬಹುದಾಗಿದೆ.

ಟಿವಿಎಸ್ ವಿಗೊ ಜೊತೆಗಿನ ನಮ್ಮ ಈ ಯಾತ್ರಾ ಸರಣಿ ಮುಂದುವರಿಯಲಿದ್ದು, ದೀಪಾವಳಿ ಹಬ್ಬದ ವೇಳೆಯಲ್ಲಿ ಪುಣೆ ನಗರದತ್ತ ಪ್ರಯಾಣ ಬೆಳೆಸಲಿದೆ.

ಟಿವಿಎಸ್ ವಿಗೊ ಜೊತೆ ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಸಂಭ್ರಮ - ವಿಡಿಯೋ ವೀಕ್ಷಿಸಿ

Most Read Articles

Kannada
Read more on ಟಿವಿಎಸ್
English summary
Day-Night Transition With TVS #Wego On #DurgaPuja In Kolkata — Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X