ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ದೇಶದಲ್ಲಿ ಅಪಘಾತಗಳ ಸಂಖ್ಯೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹೊಸದೊಂದು ರೂಲ್ಸ್ ಜಾರಿ ತರಲು ಸಜ್ಜಾಗಿದ್ದು, ಹೊಸ ಕಾಯ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಬೈಕ್ ಸವಾರರ ರಕ್ಷಣಾ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಹೊಸ ರೂಲ್ಸ್ ಜಾರಿ ತರಲು ಸಜ್ಜಾಗಿದೆ. ಹೊಸ ರೂಲ್ಸ್ ಪ್ರಕಾರ ಇನ್ಮುಂದೆ ಕತ್ತಲು ಅವಧಿಯಲ್ಲಿ ಅಷ್ಟೇ ಅಲ್ಲದೇ ಬೆಳಕಿನ ಅವಧಿಯಲ್ಲೂ ಬೈಕ್ ಚಾಲನೆ ವೇಳೆ ಮುಂಬದಿಯ ಹೆಡ್‌ಲೈಟ್ ಆನ್ ಮಾಡಿಕೊಂಡೇ ಇರಬೇಕಿದ್ದು, ಇದಕ್ಕಾಗಿ ಸರ್ಕಾರ ಕೆಲವು ರಸ್ತೆ ಸುರಕ್ಷಾ ಕಾಯ್ದೆಗಳನ್ನು ತಿದ್ದುಪಡಿ ತರುತ್ತಿದೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಹೊಸ ರೂಲ್ಸ್ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರವು, ಆಟೋಮೆಟಿಕ್ ಹೆಡ್‌ಲ್ಯಾಂಪ್ (AHO) ಅಳವಡಿಕೆ ಮಾಡುವಂತೆ ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹೀಗಾಗಿ ಮುಂದೆ ಉತ್ಪಾದನೆಯಾಗುವ ಎಲ್ಲಾ ಬೈಕ್ ಮಾದರಿಗಳಲ್ಲೂ ಹೊಸ ಕಾಯ್ದೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಲೇಬೇಕಿದ್ದು, ಏಪ್ರಿಲ್‌ನಿಂದ ಹೊಸ ರೂಲ್ಸ್ ಜಾರಿಯಾಗುವ ಸಾಧ್ಯತೆಗಳಿವೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಈ ಹಿಂದೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದ ಸುಪ್ರೀಂಕೋರ್ಟ್, ಈ ಬಾರಿ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ. ಸವಾರರ ಸುರಕ್ಷೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿಚಾರಣೆ ಮಾಡಿರುವ ಸುಪ್ರೀಂ, ಆಟೋಮೆಟಿಕ್ ಹೆಡ್‌ಲ್ಯಾಂಪ್(AHO) ಕಡ್ಡಾಯ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಇನ್ನು ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಕುಲಂಕೂಶವಾಗಿ ವರದಿ ಸಲ್ಲಿಸುವಂತೆ ಕಮಿಟಿ ಒಂದನ್ನು ರಚನೆ ಮಾಡಿರುವ ಸುಪ್ರೀಂಕೋರ್ಟ್, ಇದಕ್ಕಾಗಿ ಸೂಕ್ತ ಕಾನೂನು ರಚಿಸುವಂತೆ ಆದೇಶಿಸಿದೆ. ಹೀಗಾಗಿ ಕಾಯ್ದೆ ಅನುಷ್ಠಾನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಈಗಾಗಲೇ ವಿವಿಧ ದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ.ಈ ನಿಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕೆಲವು ಬೈಕ್ ಮಾದರಿಗಳು ಜಾರಿಯಾಗಲಿರುವ ಹೊಸ ರೂಲ್ಸ್ ಅಳವಡಿಕೆ ಮಾಡಿಕೊಂಡಿವೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಕೆಟಿಎಂ ಡ್ಯೂಕ್ 390 ಮಾದರಿಯಲ್ಲಿ ಈ ವ್ಯವಸ್ಥೆ ಅಳವಡಿಕೆಯಾಗಿದೆ. ಆದ್ರೆ ಸರ್ಕಾರದ ಪ್ರಕಾರ ಎಲ್ಲಾ ಮಾದರಿಗಳನ್ನು ಇದನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಒಂದೇ ವೇಳೆ ಹೊಸ ರೂಲ್ಸ್ ಜಾರಿ ಬಂದಲ್ಲಿ ಪ್ರತಿಯೊಂದು ಬೈಕ್ ಮಾದರಿಗಳಲ್ಲೂ (AHO)ಅಳವಡಿಕೆ ಮಾಡಿಕೊಳ್ಳಲೇಬೇಕಿದೆ. ಇದರಿಂದ ಬೈಕ್ ಅಪಘಾತ ಸಂಖ್ಯೆ ತಗ್ಗಲಿದ್ದು, ಸವಾರರಿಗೆ ಸಂಪೂರ್ಣ ಸುರಕ್ಷೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಒಂದು ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಅಳವಡಿಸಿಕೊಂಡಿರುವ ಬೈಕ್ ಖರೀದಿ ಮಾಡುವುದಾದ್ರೆ ಕೆಟಿಎಂ ಡ್ಯೂಕ್ 390 ಆವೃತ್ತಿ ಲಭ್ಯವಿದ್ದು, ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
The Automatic Headlight On feature is compulsory for all two-wheelers in India coming April, in a bid to reduce road accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X