ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಹೊಂದಿರುವ ನೂತನ ಡಿಸ್ಕವರ್ 125 ಬೈಕ್ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

Written By:

ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ನೂತನ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಪಡೆದುಕೊಂಡಿರುವ ಡಿಸ್ಕವರ್ 125 ಸಿಸಿ ಬೈಕನ್ನು ಬಿಡುಗಡೆಗೊಳಿಸಿದೆ. ಕಂಪನಿಯ ಈ ನೂತನ 125 ಸಿಸಿಯ ಬೈಕ್ ರೂ. 50,559 ಬೆಲೆ ನಿಗದಿಪಡಿಸಲಾಗಿದೆ.

ಹೊಸದಾಗಿ ಬರುತ್ತಿರುವ ಈ ಡಿಸ್ಕವರ್ ಬೈಕನ್ನು ಮತ್ತಷ್ಟು ಅಂದಗೊಳಿಸಲಾಗಿದ್ದು, ಹೆಚ್ಚು ಅಗಲವಿರುವ ರಿಯರ್ ಟೈರುಗಳನ್ನು ಈ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಪಡೆದುಕೊಂಡಿರುವ ಡಿಸ್ಕವರ್ 125 ಸಿಸಿ ಬೈಕ್ ಪಡೆದುಕೊಳ್ಳಲಿದೆ.

ಸದ್ಯ ಬಿಡುಗಡೆಗೊಳ್ಳುತ್ತಿರುವ ಎಲ್ಲಾ ದ್ವಿಚಕ್ರಗಳಲ್ಲಿ ಬಿ.ಎಸ್ IV ಹೊರಸೂಸುವ ಕಂಪ್ಲೈಂಟ್ ಎಂಜಿನ್ ಕಡ್ಡಾಯಗೊಳಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದೆ.

ಇದರ ಅನ್ವಯ, ಸದ್ಯ ಅನಾವರಣಗೊಂಡಿರುವ ನೂತನ ಡಿಸ್ಕವರ್ 125 2017 ಬೈಕ್ ಕೂಡ ಈ ಕಂಪ್ಲೇಂಟ್ ಎಂಜಿನ್ ಪಡೆದುಕೊಳ್ಳಲಿದ್ದು, ಪರಿಸರ ಸ್ನೇಹಿ ಎನ್ನಿಸಿಕೊಂಡಿದೆ.

ಹೊಂದಿನ ಆವೃತಿಗೆ ಹೋಲಿಸಿದರೆ ಡ್ರಮ್ ಬ್ರೇಕ್ ಹೊಂದಿರುವ ನವೀನ ಡಿಸ್ಕವರ್ 125 ಬೈಕಿನ ಬೆಲೆ ರೂ. 1464 ಹೆಚ್ಚಿಗೆ ಇರಲಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಡಿಸ್ಕ್ ಬ್ರೇಕ್ ಹೊಂದಿರುವ ಹೊಸ ಡಿಸ್ಕವರ್ 125 ಬೈಕಿನ ಬೆಲೆ ರೂ. 52,559 ಸಾವಿರ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಮುಂಬಾಗದಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲದೆ ಈ ಬೈಕ್ ಬಿಡುಗಡೆಗೊಳ್ಳುತ್ತಿದ್ದು, ಆದರೆ ಹೊಸ ಡಿಸ್ಕವರ್ 35 ವ್ಯಾಟ್ ಡಿಸಿ ಹೆಡ್ ಲ್ಯಾಂಪ್ ಪಡೆದುಕೊಳ್ಳಲಿದೆ.

ಈ ವರ್ಷ ಬಿಡುಗಡೆಗೊಂಡಿರುವ ಈ ಬೈಕ್ ಸಿಂಗಲ್ ಸಿಲಿಂಡರ್ ಪಡೆದುಕೊಂಡಿದ್ದು, 10.8 ತಿರುಗುಬಲದಲ್ಲಿ 11 ಅಶ್ವಶಕ್ತಿಯಷ್ಟು ಉತ್ಪಾದಿಸುವಷ್ಟು ಶಕ್ತವಾಗಿದೆ. ಎಂದಿನಂತೆ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಎಬೋನಿ ಬ್ಲಾಕ್ ವಿಥ್ ಡೀಪ್ ರೆಡ್ ಗ್ರಾಫಿಕ್ಸ್, ಎಬೋನಿ ಬ್ಲಾಕ್ ವಿಥ್ ಡೀಪ್ ಬ್ಲೂ ಗ್ರಾಫಿಕ್ಸ್, ಎಲೆಕ್ಟ್ರಾನ್ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಹೊಸ ಬಣ್ಣಗಳಲ್ಲಿ ಈ ಬೈಕ್ ಬಿಡುಗಡೆಗೊಳ್ಳುತ್ತಿದ್ದು, ಹೆಚ್ಚಿನ ಮಟ್ಟದ ಜನರನ್ನು ಆಕರ್ಷಿಸಲಿದೆ.

ಬಜಾಜ್ ಕಂಪನಿಯ ಮತ್ತೊಂದು ಶ್ರೇಷ್ಠ ಬಜಾಜ್ ಡೊಮಿನರ್ 400 ಬೈಕಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
Bajaj Auto has launched the 2017 Discover 125 with BS-IV compliant engine and few other cosmetic updates. The motorcycle gets wider rear tyre and DC lighting setup.
Please Wait while comments are loading...

Latest Photos