ಮತ್ತೆ ಭಾರತಕ್ಕೆ ಲಗ್ಗೆ ಇಟ್ಟ ಬಜಾಜ್ ಪಲ್ಸರ್ 200ಎನ್‌ಎಸ್; ಕೇವಲ 96,453 ಸಾವಿರಕ್ಕೆ ಬಿಡುಗಡೆ

Written By:

ಭಾರತದ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸ ವರ್ಷಕ್ಕೆ ವಿನೂತನ ಮಾದರಿಯ ಪಲ್ಸರ್ 200ಎನ್ಎಸ್‌ ಅನ್ನು ಬಿಡುಗಡೆಗೊಳಿಸಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬಜಾಜ್ ಪಲ್ಸರ್ 200ಎನ್ಎಸ್ ಬೈಕ್ ರೂ. 96,453ಕ್ಕೆ ಲಭ್ಯವಿರಲಿದೆ. ಇನ್ನೂ ನೂತನ ತಂತ್ರಜ್ಞಾನ ಹೊಂದಿರುವ ಪಲ್ಸರ್ 200ಎನ್ಎಸ್ ಸಾಹಸಿ ಬೈಕ್ ಪ್ರಿಯರಿಗೆ ಸಖತ್ ಕ್ರೇಜ್ ಹುಟ್ಟಿಸಲಿದೆ.

ಇದಲ್ಲದೆ ಪಲ್ಸರ್ 200ಎನ್ಎಸ್ ಈ ಹಿಂದಿನ ಮಾಡೆಲ್‌ಗಿಂತಲೂ ಹೆಚ್ಚು ಪರಿಷ್ತರಣೆ ಹೊಂದಿದ್ದು, ಬಿಸ್-IV ಎಂಜಿನ್ ಹೊಂದಿದೆ. ಅಲ್ಲದೇ ಪರಿಷ್ಕತ ಬಣ್ಣದೊಂದಿಗೆ ಹಿಂದಿನಗಿಂತಲೂ ಹೆಚ್ಚು ಆಕರ್ಷಣೆಯಿಂದ ಕೂಡಿದ್ದು, ಬೈಕ್ ಪ್ರಿಯರಿಗೆ ಥ್ರಿಲ್ ಕೊಡೋದ್ರಲ್ಲಿ ಸಂದೇಹವೇ ಇಲ್ಲ. 

ವಿನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಜಾಜ್ ಪಲ್ಸರ್ 200ಎನ್ಎಸ್ ಬೈಕ್, ನೋಡೋದಕ್ಕೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದೆ. ಸದ್ಯ 3 ಬಣ್ಣಗಳಲ್ಲಿ ಲಭ್ಯವಿರೋ ಪಲ್ಸರ್ 200ಎನ್ಎಸ್ ಬೈಕ್, ಗ್ರಾಫೈಟ್ ಬ್ಲ್ಯಾಕ್ , ಮಿರಜ್ ವೈಟ್, ವೈಲ್ಡ್ ರೆಡ್‌ ಬಣ್ಣಗಳಲ್ಲಿ ಲಭ್ಯವಿದೆ.

ಇನ್ನೂ ಎಂಜಿನ್ ಸಾಮರ್ಥ್ಯದ ವಿಷಯಕ್ಕೆ ಬರೋದಾದ್ರೆ ಬಜಾಜ್ ಪಲ್ಸರ್ 200ಎನ್ಎಸ್ 199.5 ಸಿಸಿ ಎಂಜಿನ್ ಹೊಂದಿದೆ. ಅಲ್ಲದೇ ದ್ರವದಿಂದಲೇ ತಂಪಾಗುವ ಶಕ್ತಿಹೊಂದಿದ್ದು,ಪರಿಸರ ಸ್ನೇಹಿಯಂತೆ ಕಾರ್ಯನಿರ್ವಹಿಸುವ ಗುಣ ಹೊಂದಿದೆ.ಪರಿಷ್ಕೃತ ಇಂಜಿನ್ 23.5ಬಿಎಚ್‌ಪಿ ಮತ್ತು 18.3ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ.

ಸದ್ಯ ಬಿಡುಗಡೆಯಾಗಿರೋ ಬಜಾಜ್ ಪಲ್ಸರ್ 200ಎನ್ಎಸ್ ಬೈಕ್ ವಾಹನ ಸವಾರರಿಗೆ ಇಷ್ಟವಾಗಲು ಹಲವು ಕಾರಣಗಳಿವೆ. ಯಾಕೆಂದ್ರೆ ಪಲ್ಸರ್ 200ಎನ್ಎಸ್ ಹಗುರದಾಯಕವಾಗಿದ್ದು, ಕೇವಲ 151 ಕೆಜಿ ತೂಕ ಹೊಂದಿದೆ. ಇದರಿಂದಾಗಿ ಬೈಕ್ ಸವಾರರಿಗೆ ಆರಾಮದಾಯಕವಾಗಲಿದ್ದು, ಟ್ರಾಫಿಕ್‌ಗಳಲ್ಲಿ ಬೈಕ್ ರೈಡಿಂಗ್ ಮಾಡಲು ಕಷ್ಟವಾಗಲಾರದು.

ವಿನೂತನ ಪಲ್ಸರ್ 200ಎನ್ಎಸ್ ಮೋಟಾರ್ ಸೈಕಲ್ ಜನಪ್ರಿಯ ಬೈಕ್ ಆಗುವುದಲ್ಲಿ ಯಾವುದೇ ಸಂದೇಹವಿಲ್ಲ. ಯಾಕೆೇಂದ್ರೆ ಪಲ್ಸರ್ 200ಎನ್ಎಸ್ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಕೆಳಭಾಗದ ಎಂಜಿನ್ ಕೌಲ್ ನೋಡೊದಕ್ಕೆ ಸ್ಟೈಲಿಶ್ ಆಗಿ ಮಾರ್ಪಡು ಮಾಡಲಾಗಿದೆ. ಅಲ್ಲದೇ ಪಲ್ಸರ್ 200ಎನ್ಎಸ್‌ನಲ್ಲಿ 280ಎಂಎಂ ಡಿಸ್ಕ್ ಪ್ರಧಾನವಾಗಿದ್ದು, ಹಿಂಭಾಗದಲ್ಲೂ 230 ಡಿಸ್ಕ್ ಅಳವಡಿಸಲಾಗಿದೆ.

ನೂತನವಾಗಿ ಬಿಡುಗಡೆಯಾಗಿರೋ ಪಲ್ಸರ್ 200ಎಂಎಸ್‌ನಲ್ಲಿ ಈ ಹಿಂದಿನ ಕೆಲವು ವಿಶೇಷತೆಗಳನ್ನು ನೂತನ ಮಾದರಿಯಲ್ಲೂ ಮುಂದುವರೆಸಲಾಗಿದೆ. ಬೈಕ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸೆಸ್ಪೆಷನ್ ಹೊಂದಿದ್ದು, ಹಿಂಬದಿಯಲ್ಲಿ ಮೋನೋಶಾಕ್ ಮಾದರಿಯನ್ನು ಕಾಯ್ದುಕೊಳ್ಳಲಾಗಿದೆ.ದೆಹಲಿ ಎಕ್ಸ್ ಶೋರೂಂ ಪ್ರಕಾರ ಹೊಸ ಪಲ್ಸರ್ 200ಎನ್ಎಸ್ ರೂ.96,453ಕ್ಕೆ ಮಾರುಕಟ್ಟೆಯಲ್ಲಿ ಲಭ್ಯಲಿದೆ.

ಕೊನೆಯದಾಗಿ ನೂತನ ಮಾದರಿಯ ಪಲ್ಸರ್ 200ಎನ್ಎಂ ಬಗೆಗೆ ಹೇಳೋದಾದ್ರೆ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಬೆಲೆಗಳಲ್ಲಿ ಇದೊಂದು ಅತ್ಯುತ್ತಮ ಬೈಕ್ ಎಂದೇ ಹೇಳಬಹುದು. ಇನ್ನೂ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಹಾಗೂ ಡ್ಯೂಕ್ 200 ಮಾದರಿಗೆ ಸ್ಪರ್ಧೆ ಒಡ್ಡಲಿದ್ದು, ಬೈಕ್ ಖರೀದಿಗೆ ಇದೊಂದು ಸುವರ್ಣ ಅವಕಾಶ.

ಬಜಾಜ್ ಪಲ್ಸರ್ 200ಎನ್ಎಸ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ಕಿಸಿ

Story first published: Tuesday, February 7, 2017, 12:35 [IST]
English summary
Bajaj Pulsar 200NS lunched in India
Please Wait while comments are loading...

Latest Photos