ಸಾಹಸಿ ಕೆಟಿಎಂ 390ಗೆ ಪ್ರತಿಸ್ಪರ್ಧಿಯಾಗಲಿದೆಯಾ ಬಜಾಜ್ ವಿನೂತನ ಡೋಮಿನಾರ್ ಬೈಕ್..?

ಸಾಹಸಿ ಬೈಕ್ ಕೆಟಿಎಂ 390 ಆವೃತ್ತಿಗೆ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿರುವ ಬಜಾಜ್, ಹೊಚ್ಚ ಹೊಸ ಡೋಮಿನಾರ್ ಸ್ಪೋರ್ಟ್ಸ್ ಆವೃತ್ತಿ ಬಿಡುಗಡೆಗೆ ಸಜ್ಜುಗೊಂಡಿದೆ.

Written By:

ಆಸ್ಟ್ರೀಯನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆ ಕೆಟಿಎಂ ತನ್ನ ಹೊಸ ಸಾಹಸಿ ಆವೃತ್ತಿ 390 ಬಿಡುಗಡೆಗೆ ಸಜ್ಜುಗೊಂಡಿದ್ದು, ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ಮುಂದಾಗಿರುವ ಬಜಾಜ್, ಬೃಹತ್ ಯೋಜನೆ ಒಂದನ್ನು ರೂಪಿಸಿದೆ.

ವಿನೂತನ ಕೆಟಿಎಂ 390 ಬಿಡುಗಡೆಗೊಳ್ಳುವುದು ಖಚಿತವಾಗುತ್ತಿದ್ದಂತೆ ಬಜಾಜ್ ಕೂಡಾ ತನ್ನ ಹೊಸ ಆವೃತ್ತಿಯ ಡೋಮಿನಾರ್ ಬೈಕ್ ಬಿಡುಗಡೆಗೆ ಸಿದ್ದಗೊಂಡಿದೆ. ಕೆಟಿಎಂ 390 ಬೈಕಿನಲ್ಲಿರುವ ಎಲ್ಲಾ ವೈಶಿಷ್ಟ್ಯತೆಗಳು ಬಜಾಜ್ ಡೋಮಿನಾರ್‌ನಲ್ಲಿದ್ದು, ಕೆಟಿಎಂ ಗ್ರಾಹಕನ್ನು ತನ್ನತ್ತ ಸೆಳೆಯಲು ಹೊಸ ಹೊಸ ತಂತ್ರಗಳನ್ನು ರೂಪಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಜಾಜ್ ಸಿಇಒ, ಹೊಸ ಆವೃತ್ತಿಯ ಬೈಕ್ ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. ಇದಲ್ಲದೇ ಬಿಡುಗಡೆಗೆ ಸಿದ್ಧಗೊಂಡಿರುವ ಹೊಚ್ಚ ಹೊಸ ಡೋಮಿನಾರ್, ಕೆಟಿಎಂ 390 ಆವೃತ್ತಿಗೆ ಎಲ್ಲ ವಿಭಾಗದಲ್ಲೂ ಸ್ಪರ್ಧೆ ನೀಡುವ ಭರವಸೆ ಇದೆ ಎಂದಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯೊಂದಿಗೆ ಸಿದ್ಧಗೊಂಡಿರುವ ಬಜಾಜ್ ಡೋಮಿನಾರ್ ಬೆಲೆ ಇನ್ನೂ ಕೂಡಾ ನಿಗದಿಯಾಗಿಲ್ಲ. ಆದ್ರೆ ಕೆಲವು ಮೂಲಗಳ ಪ್ರಕಾರ 2 ಲಕ್ಷ ರೂಪಾಯಿವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ವಿವಿಧ ನಮೂನೆಗಳಲ್ಲಿ ಅಭಿವೃದ್ದಿಗೊಂಡಿರುವ ಬಜಾಜ್ ಡೋಮಿನಾರ್ ಬೈಕ್ , ಸಂಪೂರ್ಣ ಎಲ್ಇಡಿ ಲೈಟಿಂಗ್ ವ್ಯವಸ್ಥೆ ಹೊಂದಿದೆ. ನಾಬಿ ಟೈರ್ಸ್ ಹಾಗೂ ಬ್ಲ್ಯಾಕ್ ಲಿಟ್ ಸ್ವಿಚ್ ವ್ಯವಸ್ಥೆ ಹೊಂದಿದೆ.

ಒಂದು ವೇಳೆ ಬೆಲೆ ವಿಚಾರವಾಗಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದ್ದೇ ಆದಲ್ಲಿ ಕೆಟಿಎಂ 390 ಆವೃತ್ತಿಗೆ ಬಜಾಜ್ ಡೋಮಿನಾರ್ ವಿನೂತನ ಮಾದರಿಯೂ ಭಾರೀ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ. 

ಡೋಮಿನಾರ್ 400 ಬೈಕ್ ಚಿತ್ರಗಳನ್ನು ನೋಡಲು ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Tuesday, March 21, 2017, 12:22 [IST]
English summary
Bajaj has confirmed a scrambler motorcycle, based on the Dominar and the company is expected to make an official announcement soon.
Please Wait while comments are loading...

Latest Photos

LIKE US ON FACEBOOK