ಕೇವಲ 60 ಸಾವಿರಕ್ಕೆ ಸಿಗಲಿದೆ ಡಿಸ್ಕ್ ಬ್ರೇಕ್ ಹೊಂದಿರುವ ಬಜಾಜ್ ವಿ12 ಬೈಕ್..!!

Written By:

ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಪ್ರಭಾವ ಹೊಂದಿರುವ ಬಜಾಜ್, ಕಡಿಮೆ ದರಗಳಲ್ಲಿ ಅತ್ಯುತ್ತಮ ವಾಹನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಅದೇ ನಿಟ್ಟಿನಲ್ಲಿ ಇದೀಗ ಹೊಚ್ಚ ಹೊಸ ಮಾದರಿಯ ವಿ12 ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ವಿ12 ಮಾದರಿಯನ್ನು ಬಿಡುಗಡೆ ಮಾಡಿದ್ದ ಬಜಾಜ್ ಸಂಸ್ಥೆಯು, ಕೇವಲ ಡ್ರಮ್ ಬ್ರೇಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಿ ಭಾರೀ ಪ್ರಮಾಣದ ಮಾರಾಟ ದಾಖಲೆ ಮಾಡಿತ್ತು.

ಗ್ರಾಹಕರಿಂದ ಹೆಚ್ಚಿದ ಬೇಡಿಕೆ

ಇನ್ನು ಡ್ರಮ್ ಬ್ರೇಕ್ ವ್ಯವಸ್ಥೆ ಹೊಂದಿದ ವಿ12 ಬೈಕ್ ಮಾತ್ರ ಬಿಡುಗಡೆ ಮಾಡಿದ್ದಕ್ಕೆ ಬೇಸರಗೊಂಡಿದ್ದ ದ್ವಿಚಕ್ರ ವಾಹನ ಖರೀದಿ ಗ್ರಾಹಕರು, ಡಿಸ್ಕ್ ಬ್ರೇಕ್ ಮಾದರಿಯನ್ನು ಕೂಡಾ ಬಿಡುಗಡೆ ಮಾಡುವಂತೆ ಸಾಕಷ್ಟು ಬೇಡಿಕೆ ಸಲ್ಲಿಸಿದ್ದರು.

ಗ್ರಾಹಕರ ಬೇಡಿಕೆಗೆ ಸ್ಪಂದನೆ

ಲಕ್ಷಾಂತರ ಗ್ರಾಹಕರ ಬೇಡಿಕೆಗೆ ಸ್ಪಂದಿಸಿರುವ ಬಜಾಜ್ ಸಂಸ್ಥೆಯು, ಡ್ರಮ್ ಬ್ರೇಕ್ ಬೈಕ್ ಮಾದರಿಗಿಂತ ತುಸು ಹೆಚ್ಚಿನ ಮೊತ್ತಕ್ಕೆ ಡಿಸ್ಕ್ ಬ್ರೇಕ್ ಹೊಂದಿರುವ ಬೈಕ್ ಬಿಡುಗಡೆ ಮಾಡಿದೆ.

ವಿ12 ಬೈಕ್ ಬೆಲೆ

ದೆಹಲಿ ಎಕ್ಸ್‌ಶೋರಂ ಪ್ರಕಾರ ವಿ12 ಬೈಕ್ ಮಾದರಿಯ ಬೆಲೆಯೂ ರೂ.60,000 ಮಾತ್ರ.

ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಮಾದರಿಗೂ ರೂ.3 ಸಾವಿರ ವ್ಯತ್ಯಾಸವಿದ್ದು, ಹಳೇ ಮಾದರಿಯಲ್ಲಿನ ಯಾವುದೇ ವಿನ್ಯಾಸಗಳು ಬದಲಾವಣೆಯಾಗಿಲ್ಲ.

ಎಂಜಿನ್ ಸಾಮರ್ಥ್ಯ

124.45 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಬಜಾಜ್ ವಿ12 ಬೈಕ್, ಏರ್ ಕೂಲ್ಡ್ ಟಿಡಿಎಸ್-ಐ ಎಂಜಿನ್ ಸೌಲಭ್ಯ ಕೂಡಾ ಹೊಂದಿದೆ.

ಗೇರ್‌ಬಾಕ್ಸ್ ವ್ಯವಸ್ಥೆ

ವಿ12 ಬೈಕ್ ಮಾದರಿಯಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, 10.5 ಬಿಎಚ್‌ಪಿ ಮತ್ತು 10.9ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಸಂಸ್ಥೆಯ ಮತ್ತೊಂದು ಮಾದರಿ ವಿ15 ಆವೃತ್ತಿಯ ವಿನ್ಯಾಸಗಳನ್ನೇ ವಿ12 ಮಾದರಿಯಲ್ಲಿ ಇರಿಸಲಾಗಿದ್ದು, ಬ್ಲ್ಯಾಕ್ ಮಡ್‌ಗಾರ್ಡ್, ಆಕರ್ಷಕ ಬಣ್ಣದ ವಿನ್ಯಾಸ ಮತ್ತು ಅತ್ಯುತ್ತಮ ಟೈರ್ ಹೊಂದಿದೆ.

ಮುಂಭಾಗದ ಟೈರ್‌ಗಳು 30 ಎಂಎಂ ಸುತ್ತಳತೆ ಹೊಂದಿದ್ದು, ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಮೈಲೇಜ್

ಬಜಾಜ್ ಸಂಸ್ಥೆಯ ಹೇಳಿಕೆ ಪ್ರಕಾರ ನೂತನ ಮಾದರಿಯೂ ಪ್ರತಿಲೀಟರ್‌ಗೆ 60 ಕಿ.ಮಿ ಮೈಲೇಜ್ ನೀಡಲಿದೆ ಎಂದಿದೆ. ಆದ್ರೆ ಅದು ನಗರ ಪ್ರದೇಶಗಳಲ್ಲಿ ಏರಿಳಿತವಾಗುವ ಸಾಧ್ಯತೆಗಳು ಇರುತ್ತದೆ.

ಬೈಕ್ ತೂಕ

ವಿ12 ಮಾದರಿಯೂ ಈ ಹಿಂದಿನ ಮಾದರಿಯ ತೂಕಕ್ಕಿಂತ ಕಡಿಮೆಗೊಳಿಸಲಾಗಿದ್ದು, 133 ಕೆ.ಜಿ ಹೊಂದಿದೆ.

ಹೇಗಿದೆ ಹೊರ ವಿನ್ಯಾಸ?

ಎಲ್‌ಇಡಿ ಟೆಲ್-ಟೆಲ್ ಲೈಟ್ ವ್ಯವಸ್ಥೆ ಹೊಂದಿರುವ ವಿ12 ಮಾದರಿಯೂ ವಿಶೇಷ ಹೊರ ನೋಟದಿಂದಲೇ ಗಮನಸೆಳೆಯುವಂತಿದೆ.

ಟ್ಯಾಂಕ್ ಸಾಮರ್ಥ್ಯ

ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ವಿ12 ಬೈಕಿನ ಪೆಟ್ರೋಲ್ ಟ್ಯಾಂಕ್ 13 ಲೀಟರ್ ಇಂಧನ ತುಂಬಬಹುದಾಗಿದೆ.

ಒಟ್ಟಾರೆ ಕಡಿಮೆ ಬೆಲೆಯಲ್ಲಿ ಸುಧಾರಿತ ತಂತ್ರಜ್ಞಾನ ಹೊಂದಿರುವ ವಿ12 ಮಾದರಿಯನ್ನು ಬಿಡುಗಡೆ ಮಾಡಿರುವ ಬಜಾಜ್, ಭಾರತೀಯ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವುದಲ್ಲಿ ಯಾವುದೇ ಅನುಮಾನವಿಲ್ಲ.

Click to compare, buy, and renew Car Insurance online

Buy InsuranceBuy Now

Read more on ಬಜಾಜ್ bajaj
English summary
Bajaj Auto has launched the disc brake variant of the V12 motorcycle in the Indian market.
Please Wait while comments are loading...

Latest Photos